ಭೂಮಿ ಹುಣ್ಣಿಮೆ ವಿಶೇಷತೆ | Bhoomi Hunnime In Kannada

0
719
Bhoomi Hunnime In Kannada
Bhoomi Hunnime In Kannada

ಭೂಮಿ ಹುಣ್ಣಿಮೆ ವಿಶೇಷತೆ, Bhoomi Hunnime In Kannada bhoomi hunnime visheshate in kannada bhoomi hunnime information in kannada


Contents

Bhoomi Hunnime In Kannada

ಮಲೆನಾಡಿನ ವಿಶೇಷ ಸಾಂಪ್ರದಾಯಿಕ ಜಾನಪದ ಹಬ್ಬವಾದ ಭೂಮಿ ಹುಣ್ಣಿಮೆಯ ವಿಶೇಷತೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Bhoomi Hunnime In Kannada
Bhoomi Hunnime In Kannada

ಭೂಮಿ ಹುಣ್ಣಿಮೆ ವಿಶೇಷತೆ

ಕರ್ನಾಟಕದಾದ್ಯಂತ ಭೂಮಿ ತಾಯಿ ಮತ್ತು ಬೆಳೆಗಳಿಗೆ ತಮ್ಮ ಗೌರವವನ್ನು ತೋರಿಸುವ ವಿಶಿಷ್ಟ ಸಾಂಪ್ರದಾಯಿಕ ಶೈಲಿಯಲ್ಲಿ ಅಪರೂಪದ ಜಾನಪದ ಹಬ್ಬವಾದ “ಭೂಮಿ ಹುಣ್ಣಿಮೆ” ಅನ್ನು ರೈತರು ಆಚರಿಸುತ್ತಾರೆ.

ನವರಾತ್ರಿ ಹಬ್ಬದ ನಂತರ ಭೂಮಿ ತಾಯಿಗೆ ವಿಶಿಷ್ಟವಾದ ಆಚರಣೆಯಾದ ‘ಭೂಮಿ ಹುಣ್ಣಿಮೆ’ ಅಥವಾ ‘ಸೀಗೆ ಹುಣ್ಣಿಮೆ’ಯನ್ನು ಮಲೆನಾಡಿನ ರೈತ ಸಮುದಾಯವು ಆಚರಿಸುತ್ತದೆ. ಭೂಮಿ ಹುಣ್ಣಿಮೆ ಹಬ್ಬವು ಮಲೆನಾಡು ಪ್ರದೇಶದ ಮೂಲನಿವಾಸಿಗಳಾದ ಸಾಂಪ್ರದಾಯಿಕ ಕೃಷಿ ಕುಟುಂಬಗಳು ನಡೆಸುವ ಆಚರಣೆಯಾಗಿದೆ.
ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಮಲೆನಾಡಿನ ಹೆಬ್ಬಾಗಿಲಾದ ಇಲ್ಲಿ ರೈತ ಕುಟುಂಬದವರು ಈ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. ಭೂಮಿ ತಾಯಿ ಇಂತಹ ಸಂಧರ್ಭದಲ್ಲಿ ಬೆಳೆಗಳಿಂದ ತುಂಬಿರುತ್ತಾಳೆ. ಇದಕ್ಕಾಗಿ ರೈತರು ಭೂಮಿ ತಾಯಿಗೆ ಸೀಮಂತಿಕೆಯ ಸ್ಥಾನದಲ್ಲಿಟ್ಟು ಭೂಮಿಯನ್ನು ಸಡಗರದಿಂದ ಪೂಜೆಯನ್ನು ಮಾಡುತ್ತಾರೆ.

  ಭೂಮಿ ತಾಯಿಯ ಆಸೆಗಳನ್ನು ಈಡೇರಿಸುವ ಸಂಭ್ರಮ ಇದಾಗಿದ್ದು ಭೂಮಿಯಲ್ಲಿ ರೈತರು ಬೆಳದ ಬೆಳೆಗಳು ಪಸಲು ಬರುವ ಸಮಯ ಇದಾಗಿದ್ದು, ಭೂಮಿ ತಾಯಿಗೆ ಈ ದಿನದಂದು ಸೀಮಂತ ಮಾಡುತ್ತಾರೆ. ಈ ಹಬ್ಬವು ಎಲ್ಲಾ ರೈತರಿಗೂ ಪುಣ್ಯದ ಹಬ್ಬವಾಗಿದೆ. ಶಿವಮೊಗ್ಗ ಅಲ್ಲದೆ ಇನ್ನು ಕೆಲವು ಜಿಲ್ಲೆಗಳಲ್ಲಿ ಈ ಹಬ್ಬವನ್ನು ಮಾಡುತ್ತಾರೆ. ಅದಲ್ಲದೆ ಮಲೆನಾಡು ಭಾಗದಲ್ಲಿ ಈಡಿಗ ಜಾತಿಯವರು ಮಾಡುವ ಈ ಹಬ್ಬ ತುಂಬಾ ವಿಶೇಷವಾಗಿರುತ್ತದೆ.

ಭೂಮಿ ತಾಯಿಯ ಆಸೆಗಳನ್ನು ಈಡೇರಿಸುವ ಸಂಭ್ರಮ ಇದಾಗಿದ್ದು, ಭೂಮಿ ಹುಣ್ಣಿಮೆ ಸಮಯದಲ್ಲಿ ಜಮೀನಿನಲ್ಲಿ  ಬೆಳೆದ ಬೆಳೆಗಳು ಪಸಲು ಬರುವ ಹಂತದಲ್ಲಿ ಇರುತ್ತದೆ. ಈ ಸಮಯದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವ ನಂಬಿಕೆಯಲ್ಲಿ ರೈತ ಕುಟುಂಬದವರು ಪ್ರಾಚೀನ ಕಾಲದಿಂದಲೂ ಈ ಹಬ್ಬವನ್ನು ಆಚರಣೆ ಮಾಡಿಕೊಂಡು ಬರುತ್ತಾರೆ. ಭೂಮಿ ತಾಯಿಗಾಗಿ ಹಲವಾರು ರೀತಿಯ ಅಡುಗೆಯನ್ನು ಮಾಡಲಾಗುತ್ತದೆ. 

 ಬೆತ್ತ ಮತ್ತು ಬಿದಿರಿನ ಬುಟ್ಟಿಯಲ್ಲಿ ಮನೆಯಿಂದ ತುಂಬಿಕೊಂಡು ಪೂಜೆ ಮಾಡುವ ಸ್ಥಳಕ್ಕೆ ಮನೆಯ ಯಜಮಾನ ತಲೆಯ ಮೇಲೆ ಹೊತ್ತುಕೊಂಡೊಯ್ಯುವುದು ಸಂಪ್ರದಾಯವಾಗಿದೆ. ನಂತರ ಕುಟುಂಬದ ಎಲ್ಲಾ ಸದಸ್ಯರಿಂದ ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ

ಕುಟುಂಬದವರು ಎಲ್ಲರು ಸೇರಿ ಗದ್ದೆ ಅಥವಾ ತೋಟದಲ್ಲಿ ಕುಳಿತು ಹಬ್ಬದಲ್ಲಿ ಮಾಡಿದ ಎಲ್ಲಾ ರೀತಿಯ ಅಡುಗೆಯನ್ನು ಸವಿಯುತ್ತಾರೆ. ಕುಟುಂಬದವರೆಲ್ಲರು ತುಂಬಾ ಭಕ್ತಿಯಿಂದ ಭೂಮಿ ಪೂಜೆ ಮಾಡಿ ಪ್ರತಿ ವರ್ಷ ಒಳ್ಳೆಯ ಬೆಳೆಯನ್ನು ನೀಡಲಿ ಎಂದು ಬೇಡಿಕೊಳ್ಳುತ್ತಾರೆ. ಈ ಪೂಜೆಯನ್ನು ಮಾಡಿದ ಸಾರ್ಥಕತೆ ಪ್ರತಿಯೊಬ್ಬ ರೈತರಲ್ಲಿ ಇರುತ್ತದೆ.

ರೈತರು ತಮ್ಮ ಭತ್ತದ ಗದ್ದೆ ಇರುವವರು ಗದ್ದೆಗೆ ಪೂಜೆ ಮಾಡುತ್ತಾರೆ, ಹಾಗೆಯೇ ಇನ್ನು ಕೆಲವರು ಅಡಿಕೆ ಬೆಳೆಯುವ ತೋಟದಲ್ಲಿ ಅಡಿಕೆ ಗಿಡಕ್ಕೆ ಸಿಂಗಾರಮಾಡಿ ಪೂಜೆ ಮಾಡುತ್ತಾರೆ. ವಿಶೇಷ ಪೂಜೆಯನ್ನು ಮನೆಯವರೆಲ್ಲರು ಸೇರಿ ಮಾಡುತ್ತಾರೆ. ನಂತರ ಭೂಮಿಗೆ ಹಾಗೂ ದೇವರಿಗೆ ವಿವಿಧ ರೀತಿಯ ಅಡುಗೆಯನ್ನು ನೈವೇದ್ಯ ಮಾಡಿ ಎಡೆಯನ್ನು ಎಲ್ಲಾ ಭೂಮಿ ಗದ್ದೆ ಹಾಗೂ ತೋಟಕ್ಕೆ ಇಟ್ಟು ಬರುತ್ತಾರೆ. ನಮಗೆ ಉತ್ತಮ ಬೆಳೆಯನ್ನು ಕರುಣಿಸು ಎಂದು ಹಾಗೂ ನಮ್ಮ ಮನೆಯ ಎಲ್ಲರಿಗೂ ಒಳಿತನ್ನು ಮಾಡು ಎಂದು ಭೂಮಿ ತಾಯಿ ಹತ್ತಿರ ಒಳ್ಳೆ ರೀತಿಯಲ್ಲಿ ಪ್ರಾರ್ಥಿಸುತ್ತಾರೆ.

ಈ ಹಬ್ಬವನ್ನು ಹಲವಾರು ಕಡೆಯಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ. ವರ್ಷ ಪೂರ್ತಿ ಭೂಮಿಯಲ್ಲಿ ಬೆಳೆಯನ್ನು ಬೆಳೆಯುವ ರೈತನಿಗೆ ಭೂಮಿ ಒಂದು ಪಲವತ್ತತೆಯ ಪ್ರತೀಕವಾಗಿದೆ ಎಂದು ನಂಬಿರುತ್ತಾನೆ. ಈ ಭೂಮಿ ಹುಣ್ಣಿಮೆ ಹಬ್ಬವನ್ನು ನಮ್ಮ ರಾಜ್ಯದಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬ ರೈತ ಕುಟುಂಬಕ್ಕೆ ಒಂದು ವಿಶೇಷ ಹಬ್ಬವಾಗಿದೆ ಎಂದು ಹೇಳಬಹುದು.

ಇತರೆ ವಿಷಯಗಳು :

ಆಯುಧ ಪೂಜಾ ಮಹತ್ವ

ಯಕ್ಷಗಾನದ ಬಗ್ಗೆ ಮಾಹಿತಿ

ಡೊಳ್ಳು ಕುಣಿತದ ಬಗ್ಗೆ ಮಾಹಿತಿ 

ಕಡಲೆ ಕಾಳಿನ ಉಪಯೋಗಗಳು 

FAQ :

1. ಭೂಮಿ ಹುಣ್ಣಿಮೆ ಹಬ್ಬವನ್ನು ಯಾವಾಗ ಮತ್ತು ಯಾವ ಸಮುದಾಯದವರು ಆಚರಿಸುತ್ತಾರೆ ?

ನವರಾತ್ರಿ ಹಬ್ಬದ ನಂತರ, ಭೂಮಿ ತಾಯಿಗೆ ವಿಶಿಷ್ಟವಾದ ಆಚರಣೆಯಾದ ‘ಭೂಮಿ ಹುಣ್ಣಿಮೆ’ ಅಥವಾ ‘ಸೀಗೆ ಹುಣ್ಣಿಮೆ’ಯನ್ನು ಮಲೆನಾಡಿನ ರೈತ ಸಮುದಾಯವು ಆಚರಿಸುತ್ತದೆ.

2. ಭೂಮಿ ಹುಣ್ಣಿಮೆ ಹಬ್ಬವನ್ನುಹೆಚ್ಚಾಗಿ ಯಾವ ಜಿಲ್ಲೆಯಲ್ಲಿ ಆಚರಿಸಲಾಗಿತ್ತದೆ ?

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ರೈತಾಪಿ ವರ್ಗ ಹೆಚ್ಚಾಗಿ ಆಚರಿಸಲಾಗುತ್ತದೆ.

3. ಭೂಮಿ ಹುಣ್ಣಿಮೆಯ ವಿಶೇಷತೆ ಏನು ?

ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮವಾಗಿದ್ದು, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭೀಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ಉಡಿ ತುಂಬುವುದು ವಿಶೇಷವಾಗಿದೆ.





LEAVE A REPLY

Please enter your comment!
Please enter your name here