Nille Nille Kolhapura Devi Lyrics in Kannada ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್ ಲಿರಿಕ್ಸ್ song lyrics in kannada
Nille Nille Kolhapura Devi Lyrics in Kannada
![Nille Nille Kolhapura Devi Lyrics in Kannada](https://i0.wp.com/kannadanew.com/wp-content/uploads/2023/09/Nille-Nille-Kolhapura-Devi-Lyrics-in-Kannada.jpg?resize=304%2C210&ssl=1)
ಈ ಲೇಖನಿಯಲ್ಲಿ ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್ ಲಿರಿಕ್ಸ್ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.
ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್ ಲಿರಿಕ್ಸ್
ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ|
ಇಲ್ಲೆ ಬಾರೆ ಗೆಜ್ಜೆ ಘಲ್ಲೆನುತ ||ಪ||
ಕರುಣಸಾಗರ ಹರಿತರುಣಿಯೇ ನೀ ಕೋಟಿ|
ತರುಣ ಕಿರಣ ರತ್ನಾಭರಣನಿಟ್ಟು|
ಮಣಿಕೌಂಸ್ತುಭ ವಕ್ಷಸ್ಥಳದಲ್ಲಿದ್ದ್ಹೊಳೆಯುವ|
ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ ||೧||
ಪಂಕಜಾಕ್ಷಿ ಪಂಕಜೋದ್ಭವನ ಜನನಿ|
ಪಂಕಜಮುಖಿ ಪಾಲಿಸೆ ಎನ್ನ|
ಪಂಕಜನಾಭನ ಅಂಕದಲ್ಲೊಪ್ಪುವ|
ಪಂಕಜೆ ನಿನ್ನ ಪಾದಪಂಕಜಕೆರಗುವೆ ||೨||
ಮುಗುಳುನಗೆಯ ಮುತ್ತುಗಳು ಜಡಿತ ಕ|
ರ್ಣಗಲ ವಾಲೆಯು ಕದಪಿನಲ್ಲ್ಹೊಳೆಯೆ|
ಬಗೆ ಬಗೆ ಸರಬಂಗಾರವನಿಟ್ಟು ಮೂ|
ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ ||೩||
ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ|
ಬ್ಯಾಗ ನೋಡಿ ಪರಮೋತ್ಸವದಿ|
ನಾಗಶಯನ ನಾಗಾರಿವಾಹನನ|
ರ್ಧಾಂಗಿ ಎನಿಸಿದಾನಂತ ಮಹಿಮಳೆ||೪||
ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ|
ವಾಸವಾಗಿರಲ್ಯತಿ ಪ್ರೇಮದಲಿ|
ಈಶ ನಾರದ ಬ್ರಹ್ಮಾಸುರರೊಡೆಯ ಭೀ|
ಮೇಶಕೃಷ್ಣ ನ ನಿಜದಾಸರಿಗ್ವರನೀಹೊ ||೫||
ಇತರೆ ವಿಷಯಗಳು :