ಕನಕದಾಸರ ಶ್ರೀರಾಮಧಾನ್ಯ ಚರಿತೆಯ ಸಾರಾಂಶ | Summary of Kanakadasa’s Sri Ramadhanya Charita in Kannada

0
1110
https://kannadanew.com/sai-ashtottara-in-kannada/
https://kannadanew.com/sai-ashtottara-in-kannada/

ಕನಕದಾಸರ ಶ್ರೀರಾಮಧಾನ್ಯ ಚರಿತೆಯ ಸಾರಾಂಶ Summary of Kanakadasa’s Sri Ramadhanya Charita Kanakadasara Shriramadyana Chrite Saramsha in Kannada


Contents

ಕನಕದಾಸರ ಶ್ರೀರಾಮಧಾನ್ಯ ಚರಿತೆಯ ಸಾರಾಂಶ

Summary of Kanakadasa's Sri Ramadhanya Charita in Kannada
Summary of Kanakadasa’s Sri Ramadhanya Charita in Kannada

ಈ ಲೇಖನಿಯಲ್ಲಿ ಕನಕದಾಸರ ಶ್ರೀರಾಮಧಾನ್ಯ ಚರಿತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಶ್ರೀರಾಮಧಾನ್ಯ ಚರಿತೆ

ಸಾಹಿತ್ಯವು ಸಾಮಾಜಿಕ ವ್ಯವಸ್ಥೆಯ ಕೈಗನ್ನಡಿಯಾಗಿದೆ. ಈ ಕಾಣದಿಂದಾಗಿ ಸಮಾಜ ಸೂಧಾರಣೆಯಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ರಾಮಧ್ಯಾನ ಚರಿತೆಯು ಅತ್ಯಂತ ಚರ್ಚಿತವಾದ ಕೃತಿಯಾಗಿದೆ. ಇದಕ್ಕೆ ಕಾರಣ ಇದರಲ್ಲಿ ಬರುವ ಭತ್ತ ಹಾಗೂ ರಾಗಿಗಳ ಸಂವಾದ ಜಾತಿಗಳ ನಡುವಿನ ವಿಷಮತೆಯನ್ನೂ, ಬಂಡಾಯದ ಧ್ವನಿಯಾಗಿಯೂ, ಶ್ರೀಮಂತ ಬಡವರ ಪ್ರತಿನಿಧಿಗಳಾಗಿ ಮತ್ತು ಸಂಸ್ಕೃತ ಕನ್ನಡ ಭಾಷೆಗಳ ವಾದವಾಗಿಯೂ ನೋಡುವುದರಿಂದ ಈ ಕೃತಿಗೆ ಹೆಚ್ಚಿನ ಹೆಗ್ಗಳಿಕೆ ಇದೆ. ಇಲ್ಲಿ ಭತ್ತ ಮತ್ತು ರಾಗಿಗಳ ಜಗಳ, ಇದು ಪರಿಹಾರಗೊಂಡ ರೀತಿಯನ್ನು ನಿರೂಪಿಸಲಾಗಿದೆ.

ಶ್ರೀರಾಮಧಾನ್ಯ ಚರಿತೆಯ ಪ್ರಮುಖ ಪದ್ಯಗಳು

  • ಕೆಲರು ಗೋದಿಯ ಸಾಮೆಯನು ಕೆಲ

ಕೆಲರು ನವಣೆಯ ಕಂಬು ಜೋಳವ

ಕೆಲರು ಹಾರಕವೆಂದು ಕೆಲವರು ನೆಲ್ಲನತಿಶಯವ

ಕಲರು ನರೆದಲೆಗನನು ಪತಿಕರಿ

ಸಲದ ನೋಡಿದ ನೃಪತಿಯದರೋಳು

ಹಲವು ಮತವೇಕೊಂದನೇ ಪೇಳೆನಲು ಗೌತಮನು.

  • ದಾಶರಥಿ ಚಿತ್ತೈಸು ನಮ್ಮಯ

ದೇಶಕತಿಶಯ ನರೆದಲೆಗನೇ

ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು

ಲೇಸನಾಡಿದೆ ಮುನಿಪ ಗೌತಮ

ದೋಷರಹಿತನು ಪಕ್ಷಪಾತವ

ನೀಸು ಪರಿಯಲಿ ಮಾಡುವರೆ ಶಿವಯೆಂದನಾವ್ರಿಹಿಗ.

ರಾಮಧ್ಯಾನ ಚರಿತೆಯ ಪೂರ್ವ ಕಥೆ

ಧರ್ಮರಾಯನು ತಮ್ಮಂದಿರನೊಡಗೂಡಿ ಹದಿನಾಲ್ಕು ವರ್ಷ ವನವಾಸಕ್ಕಾಗಿ ಕಾಮ್ಯಕ ವನದಲ್ಲಿರುವ ಸಂಧರ್ಭ. ಶಾಂಡಿಲ್ಯ ಮುನಿಗಳು ತಮ್ಮ ಮುನಿಪರಿವಾರದೊಂದಿಗೆ ಆಗಮಿಸುತ್ತಾರೆ. ಧರ್ಮಜರು ಯಥಾರ್ಥವಾಗಿ ಸತ್ಕರಿಸುತ್ತಾನೆ. ಅರಣ್ಯವಾಸದ ಕ್ಲೇಶ ಸಂಕಷ್ಟಗಳ ಪರಿಹಾರಾರ್ಥವಾಗಿ ಶಾಂಡಿಲ್ಯಮುನಿಗಳು ಶೀರಾಮಚಂದ್ರರನ ಚರಿತೆಯನ್ನು ನರೆದಲಗ ಮತ್ತು ವ್ರಿಹಿಯರ ಕಥೆಯನ್ನು ವಿವರಿಸುತ್ತಾರೆ. ರಾಮನ ಜನನದಿಂದ ಆರಂಭಿಸಿ, ರಾವಣನನ್ನು ಸಂಹರಿಸಿ, ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ದಾನವ ವಾನರ ಮುಖ್ಯರನ್ನು ಕೂಡಿಕೊಂಡು ಅಯೋಧ್ಯಾ ಅಭಿಮುಖವಾಗಿ ಪ್ರಯಾಣ ಬೆಳೆಸುತ್ತಾನೆ. ಪ್ರಯಾಣ ಕಾಲದಲ್ಲಿ ಸೀತೆಗೆ ರಮಣೀಯ ದೃಶ್ಯಗಳನ್ನು ತೋರಿಸುತ್ತಾ, ಋಉಷಿಗಳನ್ನು ಸಂದರ್ಶಿಸಿ ಅವರ ಆರ್ಶಿರ್ವಾದ ಪಡೆಯುತ್ತಾ ಮುಂದುವರೆಸುತ್ತಾನೆ. ಗೌತಮ ಮುನಿಯ ಅಶ್ರಮದಲ್ಲಿ ಬೆಲ್ಲ, ಸಕ್ಕರೆ, ಜೇನುತುಪ್ಪದ ರಸಾಯನಗಳು ಹಾಗೂ ವಿವಿಧ ಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳ ಸಮಾರಾಧನೆಯಾಗುತ್ತದೆ. ಈ ಭಕ್ಷ್ಯಗಳ ರುಚಿ ತಾರಮ್ಯದ ಬಗೆಗೆ ಮಾತುಕತೆಯಾಗುತ್ತದೆ.

ಶ್ರೀರಾಮ ಹನುಮಂತನೊಡನೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅವನು ನಾನು ಸವಿದ ಧಾನ್ಯದ ತನುವನೀಕ್ಷಿಸಬೇಕು ತರಿಸಿ, ಎಂದು ಕೇಳಿಕೊಳ್ಳುತ್ತಾನೆ. ಗೌತಮನು ಧಾನ್ಯಗಳನ್ನು ತರಿಸುತ್ತಾನೆ. ಧಾನ್ಯಗಳ ಶ್ರೇಷ್ಟತೆಯ ಬಗ್ಗೆ ಚರ್ಚಿತವಾಗುತ್ತದೆ.

ರಾಮಧ್ಯಾನ ಚರಿತೆಯ ಸಾರಂಶ

ಪ್ರತಿಯೊಂದು ಜೀವಿಯ ಬದುಕಿಗೆ ಅತ್ಯಗತ್ಯವಾಗಿರುವ ವಸ್ತುಗಳಲ್ಲಿ ಆಹಾರವು ಒಂದು. ಆಹಾರವಿಲ್ಲದೇ ಯಾವುದೇ ಜೀವಿಯೂ ಬದುಕಲಾರದು. ಇಂಥ ಆಹಾರ ಧಾನ್ಯಗಳ ಮಹತ್ವವನ್ನು ತಿಳಿಸುವ ಮೂಲಕ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಪರಂಪರೆಯನ್ನು ಇಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದೆ. ರಾಮಧ್ಯಾನ ಚರಿತೆ ನರೆದಲಗ ( ರಾಗಿ ) ವಿಹ್ರಿ ( ಭತ್ತ ) ಯರ ನಡುವಿನ ಜಗಳದ ಕಥೆ ಹಾಗೂ ಪರಿಹಾರಗೊಂಡು ರೀತಿಯ ನಿರೂಪಣೆ ಇದರ ಕಥಾವಸ್ತು. ಇದು ಪುರಾಣಗಳಲ್ಲಿ ಮತ್ತು ಸಾಮಾಜಿಕ ವಸ್ತುಗಳ ರೂಪಕ ವಿಧಾನದಲ್ಲಿ ಸಹಜವಾಗಿ ಮಿಳಿತಗೊಂಡಿದೆ. ಇಲ್ಲಿಯ ಪಾತ್ರಗಳು ಪ್ರಾಣಿಗಳು ಅಥವಾ ಮಾನವರಲ್ಲ. ಧಾನ್ಯ, ಜೀವ ಬೀಜಗಳಾಗಿವೆ.

ಭತ್ತ ಹಾಗೂ ರಾಗಿಯ ನಡುವೆ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔಚಿತ್ಯವನ್ನು ಸಾಬೀತು ಪಡಿಸುತ್ತದೆ. ಹಾಗೂ ರಾಮಧ್ಯಾನವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಾಟಕೀಯವಾಗಿ ಈ ಕೃತಿಯಲ್ಲಿ ನಿರೂಪಿಸಲಾಗಿದೆ. ಕನಕದಾಸರು ರಾಗಿಯ ನೆಪ ಹಿಡಿದು ತಮ್ಮ ಆತ್ಮಚರಿತ್ರೆಯನ್ನು ಹೇಳುತ್ತಿರುವಂತೆ ತೋರುತ್ತದೆ. ವ್ರಿಹಿ ಹಾಗೂ ನರೆದಲಗದ ನಡುವಿನ ಸಂಭಾಷಣೆಯು ಕನಕದಾಸರ ಸೃಜನಶೀಲತೆ, ಅತಿಶಯವನ್ನು ಸಾರುತ್ತದೆ. ರಾಮಧ್ಯಾನ ಚರಿತೆ ಈ ಕೃತಿಯ ಬಂಡಾಯ ಸಾಹಿತ್ಯದ ಬೇರು ಹಾಗೂ ನವ್ಯೋತ್ತರದ ಸೂರು ಎಂದರೆ ತಪ್ಪಾಗಲಾರದು.

FAQ

ರಾಮಧ್ಯಾನ ಚರಿತೆ ಇದು ಯಾರು ಬರೆದ ಕೃತಿಯಾಗಿದೆ ?

ಕನಕದಾಸರ.

ಕನಕದಾಸರ ಮೊದಲ ಹೆಸರೇನು ?

ತಿಮ್ಮಪ್ಪನಾಯಕ.

ಇತರೆ ವಿಷಯಗಳು :

ಪ್ರಾಮಾಣಿಕತೆ ಅತ್ಯುತ್ತಮ ನೀತಿ ಪ್ರಬಂಧ

ಶ್ರೀ ಸಾಯಿ ಅಷ್ಟೋತ್ತರಶತನಾಮಾವಳಿ

LEAVE A REPLY

Please enter your comment!
Please enter your name here