ಕುವೆಂಪು ಅವರ ಕವನಗಳು | Poems By Kuvempu in Kannada

0
1695
ಕುವೆಂಪು ಅವರ ಕವನಗಳು | Poems By Kuvempu in Kannada
ಕುವೆಂಪು ಅವರ ಕವನಗಳು | Poems By Kuvempu in Kannada

ಕುವೆಂಪು ಅವರ ಕವನಗಳು Poems By Kuvempu Kuvempu Kavanagalu in Kannada


Contents

ಕುವೆಂಪು ಅವರ ಕವನಗಳು

Poems By Kuvempu in Kannada

ಈ ಲೇಖನಿಯಲ್ಲಿ ಕುವೆಂಪು ಅವರ ಕವನಗಳನ್ನು ಸಂಪೂರ್ಣವಾಗಿ ನಮ್ಮ Post ನಲ್ಲಿ ನೀಡಲಾಗಿದೆ.

ಜಯ ಹೇ ಕರ್ನಾಟಕ ಮಾತೆ

ಜೈ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜೈ ಸುಂದರ ನದಿ ವನಗಳ ನಾಡೆ

ಜಯಹೇ ರಸ ಋಷಿಗಳ ಬೀಡೆ,

ಗಂಧದ ಚಂದದ ಹೊನ್ನಿನ ಗಣಿಯೇ,

ರಾಘವ ಮಧುಸೂಧನರವತರಿಸಿದ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ,

ಜನನಿ ಜೋಗುಳದ ವೇದದ ಘೋಷ

ಜನನಿಗೆ ಜೀವವು ನಿನ್ನಾವೇಶ

ಹಸುರಿನ ಗಿರಿಗಳಸಾಲೆ

ನಿನ್ನಯ ಕೊರಳಿನ ಮಾಲೆ

ಕಪಿಲ ಪತಂಜಸ ಗೌತಮ ಜಿನನುತ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ.

ಶಂಕರ ರಾಮಾನುಜ ವಿದ್ಯಾರಣ್ಯ

ಬಸವೇಶ್ವರ ಮಾಧ್ವರ ದಿವ್ಯಾರಣ್ಯ

ರನ್ನ ಷಡಕ್ಷರಿ ಪೊನ್ನ

ಪಂಪ ಲಕುಪತಿ ಜನ್ನ

ಕಬ್ಬಿಗ ನುಡಿಸಿದ ಮಂಗಳಧಾಮ

ಕವಿ ಕೋಗಿಲೆಗಳ ಪುಣ್ಯಾರಾಮ

ನಾನಕರಾಮಾನಂದ ಕಬೀರರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ ಜೈ

ತೈಲಪ ಹೊಯ್ಸಲರಾಳಿದ ನಾಡೆ

ಡಂಕಣ ಜಕಣರ ನೆಚ್ಚಿನ ಬೀಡೆ

ಕೃಷ್ಣ ಶರಾವತಿ ತುಂಗಾ

ಕಾವೇರಿಯ ವರರಂಗ

ಚೈತನ್ಯ ಪರಮಹಂಸ ವೀವೆಕರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಸರ್ವಜನಾಂಗದ ಶಾಂತಿಯ ತೋಟ

ರಸಿಕರ ಕಣಗಳ ಸೆಳೆಯುವ ನೋಟ

ಹಿಂದೂ ಚಸ್ತ ಮುಸಲ್ಮಾನ

ಪಾರಸಿಕ ಜೈನರ ಉದ್ಯಾನ

ಜನಕನ ಹೋಲುವ ದೊರೆಗಳ ಧಾಮ

ಗಾಯಕ ವೈಣಿಕರಾ ಧಾಮ

ಕನ್ನಡ ನುಡಿ ಕುಣಿದಾಡುತ ಗೇಹ

ಕನ್ನಡ ತಾಯಿಯ ಮಕ್ಕಳ ದೇಹ

ಭಾರತ ಜನನಿಯ ತನುಜಾತೆ|

ಕನ್ನಡಮ್ಮನ ಹರಕೆ

ಕನ್ನಡಕೆ ಹೋರಾಡು

ಕನ್ನಡದ ಕಂದ

ಕನ್ನಡವ ಕಾಪಾಡು

ನನ್ನ ಆನಂದ

ಜೋಗುಳದ ಹರಕೆಯಿದು

ಮರೆಯದಿರು, ಚಿನ್ನಾ

ಮರತೆಯಾದರೆ ಅಯ್ಯೋ

ಮರೆತಂತೆ ನನ್ನ

ಮೊಲೆಯ ಹಾಲೆಒಂತಂತೆ

ಸವಿಜೆನು ಬಾಯ್ದೆ

ತಾಯಿಯಪ್ಪುಗೆಯಂತೆ

ಬಾಳಸೊಗಸು ಮೆಯ್ಕೆ

ಗುರುವಿನೊಲ್ಲುದಿಯಂತೆ

ಶ್ರೇಯಸ್ಸು ಬಾಳೆ :

ತಾಯಿನುಡಿಗೆ ದುಡಿದು ಮಾಡಿ

ಇಹಪಾರಗಳೇಲ್‌ಗೆ

ದಮ್ಮಯ್ಯ ಕಂದಯ್ಯ

ಬೇಡುವೆನು ನಿನ್ನ,

ಕನ್ನಡಮ್ಮನ ಹರಕೆ,

ಮರೆಯದಿರು, ಚಿನ್ನಾ

ಮರತೆಯಾದರೆ ಅಯ್ಯೋ

ಮರೆತಂತೆ ನನ್ನ;

ಹೋರಾಡು ಕನ್ನಡಕೆ

ಕಲಿಯಾಗಿ, ರನ್ನಾ – ಕುವೆಂಪು

ನಡೆ ಮುಂದೆ ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ

ನುಗ್ಗಿ ನಡೆ ಮುಂದೆ !

ಜಗ್ಗದಯೆ ಕುಗ್ಗದೆಯೆ

ಹಿಗ್ಗಿ ನಡೆ ಮುಂದೆ !

ಭಾರತ ಖಂಡದ ಹಿತವೇ

ನನ್ನ ಹಿತ ಎಂದು

ಭಾರತ ಮಾತೆಯ ಮತವೇ

ನನ್ನ ಮತ ಎಂದು

ಭಾರತಾಂಬೆಯ ಸುತರೆ

ಸೋದರರು ಎಂದು

ಭಾರತಾಂಬೆಯ ಮುಕ್ತಿ

ಮುಕ್ಕಿ ನನಗೆಂದು

ನಡೆ ಮುಂದೆ ನಡೆ ಮುಂದೆ

ನುಗ್ಗಿ ನಡೆ ಮುಂದೆ !

ಜಗ್ಗದಯೆ ಕುಗ್ಗದೆಯೆ

ಹಿಗ್ಗಿ ನಡೆ ಮುಂದೆ – ಕುವೆಂಪು

ಭಾರತ ತಪಸ್ವಿನಿ

ವೇದರುಶಿ ಭೂಮಿಯಲಿ ನಾಕನರಕಗಳಿಂದು

ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ

ಸಂದಿಸಿವೆ, ಮಾನವನೆಡೆಯ ಕಾಳಕೂಟದಲಿ

ಅಮೃತವನ ಹಾರೈಸಿ ಬಲಿರಕ್ತದಲಿ ಮಿಂದು

ಕಾಡಿಹೆವು ಕಣ್ಣೀರು ತುಂಬಿ, ನಾಗರಿಕತೆಯು

ನಾಗಿಣಿಯ ಪ್ರಗತಿನಾಮಕ ಫಣೆಯ ಮೇಲೆತ್ತಿ

ಚುಂಬಿಸಿಯೇ ಕೊಲ್ಲಲೆಳೆಸುತಿದೆ – ಹಿಂದಿನ ಬುತ್ತಿ

ಸವೆಯುತಿದೆ, ಇಂದಿನ ಮಹಾ ತಪಸ್ಸಿನ ಚಿತೆಯ

ರಕ್ತಮ ವಿಭೂತಿಯೊಳೆ ಮುಂದಿನ ನವೋದಯದ

ಧವಳಿಮ ಪಿನಾಕಾದಾರನೈಥಹನು, ಮತ್ತೊಮ್ಮೆ

ಭಾರತಾಂಬೆಯು ಜಗದ ಬೆಳಕಾಗುವಳು, ಹೆಮ್ಮೆ

ಗೌರವಗಳಿಂದ ಜನಗಣದ ಕಟು ನಿರ್ಧಯದ

ಲೋಭ ಬುದ್ಧಿಯ ಹೀನ ಕುಟಿಳತೆಯ ಸುರೆನೀಗಿ

ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ – ಕುವೆಂಪು

ಓ ನನ್ನ ಚೇತನ

ಓ ನನ್ನ ಚೇತನ ಆಗು ನೀ ಅನಿಕೇತನ

ರೂಪರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವ ದೀಟಿ || ಓ ನನ್ನ ||

ನೂರು ಮತದ ಹೊಟ್ಟತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ || ಓ ನನ್ನ ||

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು || ಓ ನನ್ನ ||

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು || ಓ ನನ್ನ ||

FAQ

“ಓ ನನ್ನ ಚೇತನ” ಈ ಕವಿತೆಯನ್ನು ಬರೆದವರು ಯಾರು ?

ಕುವೆಂಪು

ಕುವೆಂಪು ರವರಿಗೆ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ ?

ಶ್ರೀ ರಾಮಾಯಣ ದರ್ಶನಂ

ಇತರೆ ವಿಷಯಗಳು :

ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ

ಸಮಾನ ಶಿಕ್ಷಣದ ಅವಶ್ಯಕತೆ ಪ್ರಬಂಧ

LEAVE A REPLY

Please enter your comment!
Please enter your name here