ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ | Kumbaranige Varusha Donnege Nimisha Kannada

0
1751
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ | The proverbial extension of a year to a year for a potter in Kannada
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ | The proverbial extension of a year to a year for a potter in Kannada

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ The proverbial extension of a year to a year for a potter Kumbaranige Varusha Donnege Nimisha gadeya vivarane in Kannada


Contents

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ

Kumbaranige Varusha Donnege Nimisha Kannada
Kumbaranige Varusha Donnege Nimisha Kannada

ಈ ಲೇಖನಿಯಲ್ಲಿ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರವಾಗಿದೆ.
ನಮ್ಮ ಜೀವನಕ್ಕೆ ಸಂಬಂದಿಸಿದ, ಅನ್ವಯಿಸುವಂತ ಹಲವಾರು ಗಾದೆಗಳಿವೆ. ಕೆಲವೊಂದು ಸಂದರ್ಭದಲ್ಲಿ ಗಾದೆಯ ಮೂಲಕ ನಾವು ಅನ್ವಯಿಸಿಕೊಳ್ಳುವುದು ಉತ್ತಮ. ಎಕೆಂದರೆ ಗಾದೆಯು ಅನುಭವದ ಮಾತುಗಳಾಗಿವೆ.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಯ ವಿಸ್ತರಣೆ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ. ನಮಗೆಲ್ಲ ಗೊತ್ತಿರುವಂತೆ ಮಡಿಕೆ ಮಾಡುವುದು ಸುಲಭದ ಕೆಲಸವಲ್ಲ. ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗೆ ತಯಾರಾದ ಮಡಿಕೆಯನ್ನು ತುಂಡು ಮಾಡುವುದು ಅಥವಾ ಹಾಳುಮಾಡುವುದು ತುಂಬಾ ಸುಲಭದ ಕೆಲಸ. ದೊಣ್ಣೆಯಿಂದ ಒಂದು ಪೆಟ್ಟು ಕೊಟ್ಟರೆ ಕ್ಷಣಮಾತ್ರದಲ್ಲಿ ಪುಡಿಪುಡಿಯಾಗಿ ಹೋಗುತ್ತದೆ. ಈ ಮೇಲಿನ ಗಾದೆ ಮಾತಿನ ತಾತ್ಪರ್ಯ ತಿಳಿಯುವುದಾದರೆ ನಾವು ಜೀವನದಲ್ಲಿ ಗಳಿಸುವುದು ತುಂಬಾ ಕಷ್ಟ. ಆದರೆ ಗಳಿಸಿದ್ದನ್ನು ಅಳಿಸುವುದು ಅಷ್ಟೇ ಸುಲಭ. ಪರಿಶ್ರಮಪಟ್ಟು ಕೀರ್ತಿ, ಹೆಸರು, ಹಣ ಎಲ್ಲವನ್ನು ಪಡೆಯಲು ಸದಾ ಪ್ರಯತ್ನಿಸುತ್ತೇವೆ. ಇದಕ್ಕಾಗಿ ಹಣ ಹಾಗೂ ಸಮಯವನ್ನು ವಿನಿಯೋಗಿಸುತ್ತವೆ. ಹಗಲಿರುಳೆನ್ನದೆ ಕಷ್ಟಪಟ್ಟು ಗುರಿಯನ್ನು ತಲುಪುತ್ತೇವೆ. ಯಾವುದೋ ಒಂದು ಸಂದರ್ಭದಲ್ಲಿ ತಪ್ಪು ನಿರ್ಧಾರದಿಂದ ಜೀವನದಲ್ಲಿ ಗಳಿಸಿದ ಯಶಸ್ಸು, ಕೀರ್ತಿ, ಹೆಸರು, ಹಣ ಎಲ್ಲವೂ ಕ್ಷಣಮಾತ್ರದಲ್ಲಿ ಹಾಳಾಗಿ ಹೋಗುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಅಂಟಿಕೊಳ್ಳುತ್ತದೆ. ಜೀವನದಲ್ಲಿ ಒಳ್ಳೆಯವನೆಂದು ಕರೆಸಿಕೊಳ್ಳಲು ತುಂಬಾ ಕಷ್ಟ, ಆದರೆ ಕೆಟ್ಟವನೆಂದು ಅನಿಸಿಕೊಳ್ಳಲು ಒಂದು ಕ್ಷಣ ಸಾಕು ಎಂಬುದು ಈ ಗಾದೆ ಮಾತಿನ ಸಾರವಾಗಿದೆ.

ಒಬ್ಬ ಕುಂಬಾರ ಮಡಿಕೆ ಮಾಡಬೇಕೆಂದರೆ ಬಹಳ ಕಷ್ಟ ಪಡಬೇಕಾಗುತ್ತದೆ. ಮಡಕೆ ಮಾಡಲು ಬೇಕಾದ ಮಣ್ಣನ್ನು ಸರಿಯಾದ ಕಡೆಯಿಂದ ಹೊತ್ತು ತರಬೇಕು. ಅದಕ್ಕೆ ನೀರು ಹಾಕಿ ಚೆನ್ನಾಗಿ ತುಳಿದು ಹಸನು ಮಾಡಬೇಕು. ನಂತರ ಮಡಕೆ ಮಾಡುವ ಚಕ್ರದಲ್ಲಿ ಹಸನಾದ ಮಣ್ಣನ್ನು ಇಟ್ಟು ಚಕ್ರ ತಿರುಗಿಸಿ ಮಡಕೆ ಆಕಾರ ಕೊಡಬೇಕು. ಅದನ್ನೂ ಬಲು ಜಾಗರೂಕತೆಯಿಂದ, ತಾಳ್ಮೆಯಿಂದ ಗಮನವಿಟ್ಟು ಮಾಡಬೇಕು. ಇಲ್ಲವಾದಲ್ಲಿ ಮಡಕೆಯ ಆಕಾರ ಹಾಳಾಗಬಹುದು ಅಥವಾ ಮಡಕೆಗೆ ಸಣ್ಣ ತೂತು ಬಿದ್ದರೂ ಅಷ್ಟು ಮಣ್ಣು ಹಾಳಾಗುತ್ತದೆ. ನಂತರ ಆಕಾರ ಪಡೆದ ಹಸಿ ಮಡಕೆಯನ್ನು ಸ್ವಲ್ಪ ಒಣಗಿಸಿ, ಒಲೆಯಲ್ಲಿಟ್ಟು ಹದವಾಗಿ ಬೇಯಿಸಬೇಕು. ನಂತರವೇ ಒಂದು ಒಳ್ಳೆಯ ಮಡಕೆ ತಯಾರಾಗುತ್ತದೆ. ನಂತರ ಅದನ್ನು ಒಡೆಯದಂತೆ ಜೋಪಾನ ಮಾಡಬೇಕು. ಗ್ರಾಹಕರಿಗೆ ಆಕರ್ಷಿಸುವಂತೆ ಒಪ್ಪವಾಗಿ ಜೋಡಿಸಬೇಕು. ಇಷ್ಟೆಲ್ಲಾ ಕಷ್ಟ ಪಟ್ಟ ನಂತರವೇ ಕುಂಬಾರನಿಗೆ ಮಡಿಕೆಯ ವ್ಯಾಪಾರವಾಗಿ ಲಾಭವಾಗಲು ವರುಷವಾದರೂ ಬೇಕಾಗುತ್ತದೆ. ಆದರೆ ದೊಣ್ಣೆಯಿಂದ ಅದೇ ಮಡಿಕೆಯನ್ನು ಒಂದು ನಿಮಿಷದಲ್ಲಿ ಹೊಡೆದು ನಾಶ ಮಾಡಬಹುದು.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಯ ಸಂದೇಶ

ಈ ಗಾದೆಯಿಂದ ನಾವು ತಿಳಿದುಕೊಳ್ಳುವ ಅಂಶವೆಂದರೆ ತಾಳ್ಮೆಯಿಂದ ಎಂತಹ ಕೆಲಸವನ್ನು ಬೇಕಾದರೂ ಸಾಧಿಸಬಹುದು. ಆದರೆ ಅದೇ ಬುದ್ಧಿಯನ್ನು ಸಿಟ್ಟಿನ ಕೈಗೆ ಕೊಟ್ಟರೆ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಯಾವುದೇ ಕೆಲಸವನ್ನು ಗಮನವಿಟ್ಟು, ತಾಳ್ಮೆವಹಿಸಿ, ಗೌರವಿಸಿ ಮಾಡಬೇಕು. ಹಾಗಾದಾಗ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು.

ಇತರೆ ವಿಷಯಗಳು :

ಹೊಸ ಶಿಕ್ಷಣ ನೀತಿ ಪ್ರಬಂಧ 

ಭಾರತದ ಚುನಾವಣಾ ವ್ಯವಸ್ಥೆ ಪ್ರಬಂಧ

LEAVE A REPLY

Please enter your comment!
Please enter your name here