Kannada Varnamaleglu | ಕನ್ನಡ ವರ್ಣಮಾಲೆಗಳು

0
1128
Kannada Varnamaleglu ಕನ್ನಡ ವರ್ಣಮಾಲೆಗಳು
Kannada Varnamaleglu

ಕನ್ನಡ ವರ್ಣಮಾಲೆಗಳು, Kannada Varnamale Kannada Varnamale Information in Kannada Kannada Alphabet in Kannada Kannada Varnamale Types Varnamale in Kannada


Contents

Kannada Varnamaleglu

Kannada Varnamaleglu ಕನ್ನಡ ವರ್ಣಮಾಲೆಗಳು
Kannada Varnamaleglu

ಈ ಲೇಖನದಲ್ಲಿ ನಾವು ಕನ್ನಡ ವರ್ಣಮಾಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನಿಮಗೆ ನೀಡಿದ್ದೇವೆ. ಕನ್ನಡ ವರ್ಣಮಾಲೆಯನ್ನು ಕಲಿಯುವುದು ಬಹಳ ಮುಖ್ಯ ಏಕೆಂದರೆ ಅದರ ರಚನೆಯನ್ನು ಪ್ರತಿದಿನ ಸಂಭಾಷಣೆಯಲ್ಲಿ ಬಳಸಲಾಗುತ್ತದೆ. ಇಲ್ಲದೇ ಹೋದರೆ ಆ ಪದಗಳನ್ನು ಬರೆಯಲು ಗೊತ್ತಿದ್ದರೂ ಪದಗಳನ್ನು ಸರಿಯಾಗಿ ಹೇಳಲು ಸಾಧ್ಯವಾಗುವುದಿಲ್ಲ. ನೀವು ಒಂದು ಪದದಲ್ಲಿ ಅಕ್ಷರವನ್ನು ಎಷ್ಟು ಚೆನ್ನಾಗಿ ಉಚ್ಚರಿಸುತ್ತೀರೋ ಅಷ್ಟು ಚೆನ್ನಾಗಿ ಕನ್ನಡ ಭಾಷೆಯನ್ನು ಮಾತನಾಡುವುದರಲ್ಲಿ ನಿಮಗೆ ಅರ್ಥವಾಗುತ್ತದೆ.

ನಮ್ಮ ಅಭಿಪ್ರಾಯವನ್ನು ಇತರರಿಗೆ ತಿಳಿಸುವುದ್ದಕ್ಕೆ ಮತ್ತು ಇತರರ ಅಭಿಪ್ರಾಯವನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು. ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಪ್ರತಿ ಭಾಷೆಯನ್ನು ಮಾತನಾಡಲು ಅಥವಾ ಬರೆಯಲು ಕೆಲವು ನಿಯಮಗಳಿರುತ್ತವೆ. ಈ ನಿಯಮಗಳನ್ನು ನಾವು ವ್ಯಾಕರಣದಲ್ಲಿ ಕಲಿಯುತ್ತೇವೆ. ಇಲ್ಲಿ ನಾನು ವ್ಯಾಕರಣ ಎಂಬ ಪದವನ್ನು ಬಳಸುತ್ತಿದ್ದೆನೆ ಏಕೆಂದರೆ ವರ್ಣಮಾಲೆಯೂ ಕೂಡ ವ್ಯಾಕರಣದ ಭಾಗವಾಗಿದೆ.

ಕನ್ನಡ ವರ್ಣಮಾಲೆಗಳು

ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಅದರಲ್ಲಿ ನಾವು ಮಾತನಾಡುವ ಕನ್ನಡವು ಒಂದು ಪ್ರಮುಖ ಭಾಷೆಯಾಗಿದೆ.ಕನ್ನಡ ಭಾಷೆಗೆ ‘ಶ್ರಾವಣ’ ಮತ್ತು ‘ಚಾಕ್ಷುಷ’ ಎಂಬ ಎರಡು ರೂಪಗಳಿವೆ.

ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು – ಶ್ರಾವಣ
ಬರಹದ ಮೂಲಕ ಕಣ್ಣಿಗೆ ಕಾಣಿಸುವುದು – ಚಾಕ್ಷುಷ

ನಾವು ಬರಹದ ಮೂಲಕ ಕನ್ನಡ ಭಾಷೆಯನ್ನು ತಿಳಿಯಬೇಕಾದರೆ ‘ಚಾಕ್ಷುಷ’ ರೂಪದಿಂದ ಲಿಪಿರೂಪದ ‘ವರ್ಣಮಾಲೆಯನ್ನು’ ಮೊದಲು ತಿಳಿಯಬೇಕು.

ಕನ್ನಡ ವರ್ಣಮಾಲೆ ಎಂದರೇನು?

ಸರಳ ಭಾಷೆಯಲ್ಲಿ, ವರ್ಣ ಅಥವಾ ಅಕ್ಷರಗಳ ಸಮೂಹವನ್ನು ವರ್ಣಮಾಲೆ ಎದು ಕರೆಯಲಾಗುತ್ತದೆ. ಇದರ ಹೆಸರೇ ಸೂಚಿಸುವಂತೆ ವರ್ಣ+ಮಾಲೆ ಅರ್ಥಾತ್ ವರ್ಣಗಳ ಮಾಲೆ ಅಥವಾ ಸಮೂಹ ಈ ವರ್ಣಮಾಲೆಯಾಗಿದೆ.

ಪಂಚದಲ್ಲಿ ನೂರಾರು ಭಾಷೆಗಳಿವೆ. ನಾವು ಭಾಷೆಗಳನ್ನು ಕಲಿಯ ಬೇಕೆಂದರೆ ನಮಗೆ ಮೊದಲು ವರ್ಣಮಾಲೆಗಳು ಗೊತ್ತಿರಬೇಕು. ವರ್ಣಮಾಲೆ ಗೊತ್ತಿದರೆ ಯಾವ ಭಾಷೆಗೆ ಅಥವಾ ಯಾವ ಪದಗಳಿಗೆ ವರ್ಣಮಾಲೆ ಬಳಸಬೇಕು ಎನ್ನುವುದು ಗೊತ್ತಾಗುತ್ತದೆ. ವರ್ಣಮಾಲೆಗಳಲ್ಲಿ ಸ್ವರಗಳು , ವ್ಯಂಜನಗಳು ಮತ್ತು ಯೋಗವಾಹಕಗಳಿಂದ ಒಳಗೊಂಡಿರುತ್ತವೆ.

ಮೊದಲು ವರ್ಣಮಾಲೆಯಲ್ಲಿ ಎಷ್ಟು ವಿಧಗಳು ಎಂಬುವುದು ತಿಳಿಯಬೇಕಾಗಿದೆ.

ಕನ್ನಡ ವರ್ಣಮಾಲೆಯಲ್ಲಿ 3 ವಿಧಗಳು

  • ಸ್ವರಗಳು
  • ವ್ಯಂಜನಗಳು
  • ಯೋಗವಾಹಕಗಳು

ಕನ್ನಡ ವರ್ಣಮಾಲೆಯನ್ನು ಹಂತ ಹಂತವಾಗಿ ಅಧ್ಯಯನವನ್ನು ಕಲಿಯಬೇಕು.

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

Kannada Varnamaleglu

ಸ್ವರಗಳು

ಸ್ವತಂತ್ರವಾಗಿ ಸ್ಪಷ್ಟವಾಗಿ ಉಚ್ಚರಿಸಲ್ಪಡುವ ಅಕ್ಷರಮಾಲೆಯನ್ನು ಸ್ವರಗಳು ಎನ್ನುತ್ತಾರೆ. ಸ್ವರಗಳು 13 ಅಕ್ಷರ ಮಾಲೆಗಳು ಹೊಂದಿವೆ. ಅವುಗಳು ಯಾವೆಂದರೆ
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ

1.ಹೃಸ್ವ ಸ್ವರಗಳು:- ಒಂದೇ ಮಾತ್ರೆಯ ಕಾಲದಲ್ಲಿ ಉಚ್ಚಿರಿಸಲ್ಪಡುವ ಅಕ್ಷರಗಳಿಗೆ ಹೃಸ್ವಸ್ವರ ಎನ್ನುತ್ತಾರೆ.

ಹೃಸ್ವ ಸ್ವರಗಳು ಉದಾ :-ಅ ಇ ಉ ಋ ಎ ಒ

2.ದೀರ್ಘ ಸ್ವರಗಳು:- ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘಸ್ವರಗಳು ಎನ್ನುತ್ತಾರೆ. ದೀರ್ಘ ಸ್ವರಗಳು ಉಚ್ಚರಿಸಲು ದೀರ್ಘವಾದ ಉಸಿರು ಬೇಕಾಗುತ್ತದೆ.
ದೀರ್ಘ ಸ್ವರಗಳು ಉದಾ :- ಆ ಈ ಊ ಏ ಐ ಓ ಔ

3.ಪ್ಳುತ್ವ ಸ್ವರಗಳು:- ಮೂರು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲತ್ವಸ್ವರ ಎನ್ನುತ್ತಾರೆ. ಇದರ ಸ್ವರಗಳು ದೀರ್ಘವಾಗಿ ಹೇಳುವುದಕ್ಕೆ ಪ್ಲತ್ವಸ್ವರ ಎನ್ನುತ್ತಾರೆ.
ಪ್ಳುತ್ವ ಸ್ವರಗಳು ಉದಾ :- ಅಪ್ಪಾ, ತಮ್ಮಾ

ವ್ಯಂಜನಗಳು

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎನ್ನುತ್ತಾರೆ.

ವ್ಯಂಜನಗಳಲ್ಲಿ ಎರಡು ವಿಧಗಳು

  • ವರ್ಗಿಯ ವ್ಯಂಜನಗಳು
  • ಅವರ್ಗಿಯ ವ್ಯಂಜನಗಳು

1.ವರ್ಗಿಯ ವ್ಯಂಜನಗಳು

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜಾನಕ್ಷರಗಳಿಗೆ ವರ್ಗಿಯ ವ್ಯಂಜನಗಳು ಎನ್ನುತ್ತಾರೆ.
ಉದಾ :- ಕ ಖ ಗ ಘ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ

ವರ್ಗಿಯ ವ್ಯಂಜನಗಳಲ್ಲಿ 3 ವಿಧಗಳು

  • ಅಲ್ಪಪ್ರಾಣ
  • ಮಹಾಪ್ರಾಣ
  • ಅನುನಾಸಿಕಗಳು

ಅಲ್ಪಪ್ರಾಣ :- ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುತ್ತಾರೆ.
ಉದಾ :- ಕ,ಚ,ಟ,ತ,ಪ
ಗ,ಜ,ದ,ಡ,ಬ
ಮಹಾಪ್ರಾಣ :- ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಮಹಾಪ್ರಾಣ ಎನ್ನುತ್ತಾರೆ.
ಉದಾ :- ಖ,ಛ,ಠ,ಥ,ಫ
ಘ,ಝ,ಧ,ಢ,ಭ
ಅನುನಾಸಿಕಗಳು :- ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅನುನಾಸಿಕಗಳು ಎನ್ನುತ್ತಾರೆ.
ಉದಾ :- ಗ್ನ,ಞ,ಣ,ನ,ಮ

2.ಅವರ್ಗಿಯ ವ್ಯಂಜನಗಳು

ವರ್ಗಗಳನ್ನು ಮಾಡಲು ಸಾಧ್ಯವಿಲ್ಲದ ವ್ಯಂಜನಗಳಿಗೆ ಅವರ್ಗಿಯ ವ್ಯಂಜನಗಳು ಎನ್ನುತ್ತಾರೆ.
ಉದಾ :- ಯ ರ ಲ ವ ಶ ಷ ಸ ಹ ಳ

Kannada Varnamaleglu

ಯೋಗವಾಹಕಗಳು

ಬೇರೆ ಅಕ್ಷರಗಳ ಸಹಯೋಗದಿಂದ ಉಚ್ಚರಿಸಲ್ಪಡುವ ವರ್ಣಗಳಿಗೆ ಅಥವಾ ಅಕ್ಷರಗಳಿಗೆ ಯೋಗವಾಹಕಗಳು ಎನ್ನುತ್ತಾರೆ.

ಅವುಗಳು ಅನುಸ್ವರ (ಅಂ), ವಿಸರ್ಗ (ಅ:)

ಅನುಸ್ವರ :- ಯಾವುದೇ ಅಕ್ಷರವು ಅಥವಾ ಪದವು ಒಂದೇ ಬಿಂದುವನ್ನು ಹೊಂದರೆ.ಅವುಗಳನ್ನು ಅನುಸ್ವರ ಎನ್ನುವರು.
ಉದಾ :- ಕುಂಟ, ನೆಂಟರು

ವಿಸರ್ಗ :- ಯಾವುದೇ ಅಕ್ಷರವು ಅಥವಾ ಪದವು ಎರಡು ಬಿಂದುಗಳು ಹೊಂದರೆ ಅವುಗಳನ್ನು ವಿಸರ್ಗ ಎನ್ನುವರು.
ಉದಾ :- ದುಃಖ

FAQ

ವರ್ಣಮಾಲೆ ಎಂದರೇನು?

ಸರಳ ಭಾಷೆಯಲ್ಲಿ, ವರ್ಣ ಅಥವಾ ಅಕ್ಷರಗಳ ಸಮೂಹವನ್ನು ವರ್ಣಮಾಲೆ ಎದು ಕರೆಯಲಾಗುತ್ತದೆ. ಇದರ ಹೆಸರೇ ಸೂಚಿಸುವಂತೆ ವರ್ಣ+ಮಾಲೆ ಅರ್ಥಾತ್ ವರ್ಣಗಳ ಮಾಲೆ ಅಥವಾ ಸಮೂಹ ಈ ವರ್ಣಮಾಲೆಯಾಗಿದ

ವರ್ಣಮಾಲೆಯಲ್ಲಿ ಎಷ್ಟು ವಿಧಗಳು?

3 ವಿಧಗಳು,
ಸ್ವರಗಳು
ವ್ಯಂಜನಗಳು
ಯೋಗವಾಹಕಗಳು

ಸ್ವರಗಳು ಎಂದರೇನು?

ಸ್ವತಂತ್ರವಾಗಿ ಸ್ಪಷ್ಟವಾಗಿ ಉಚ್ಚರಿಸಲ್ಪಡುವ ಅಕ್ಷರಮಾಲೆಯನ್ನು ಸ್ವರಗಳು ಎನ್ನುತ್ತಾರ

ಯೋಗವಾಹಕಗಳು ಎಂದರೇನು?

ಬೇರೆ ಅಕ್ಷರಗಳ ಸಹಯೋಗದಿಂದ ಉಚ್ಚರಿಸಲ್ಪಡುವ ವರ್ಣಗಳಿಗೆ ಅಥವಾ ಅಕ್ಷರಗ

ವ್ಯಂಜನಗಳು ಎಂದರೇನು?

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎನ್ನುತ್ತಾರೆ.

ಇತರೆ ವಿಷಯಗಳು

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಚರಿತ್ರೆ

ಗ್ರಂಥಾಲಯ ಮಹತ್ವ ಕುರಿತು ಪ್ರಬಂಧ

ಕನ್ನಡದಲ್ಲಿ ಚಂದ್ರಶೇಖರ್ ಕಂಬಾರ ಮಾಹಿತಿ

ಪುಸ್ತಕದ ಮಹತ್ವದ ಕುರಿತು ಪ್ರಬಂಧ

LEAVE A REPLY

Please enter your comment!
Please enter your name here