ಜೋಗ್ ಫಾಲ್ಸ್ ಮಾಹಿತಿ | Jog Falls Information in Kannada

0
920
Jog Falls Information in Kannada
Jog Falls Information in Kannada

ಜೋಗ್ ಫಾಲ್ಸ್ ಮಾಹಿತಿ Jog Falls Information joga jalapathada bagge mahiti in kannada


Contents

ಜೋಗ್ ಫಾಲ್ಸ್ ಮಾಹಿತಿ

Jog Falls Information in Kannada
Jog Falls Information in Kannada

ಈ ಲೇಖನಿಯಲ್ಲಿ ಜೋಗ್ ಫಾಲ್ಸ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಜೋಗ್ ಫಾಲ್ಸ್

ಶಿವಮೊಗ್ಗ ಜಿಲ್ಲೆಯಲ್ಲಿರುವ ಅದ್ಬುತವಾದ ಜಲಪಾತವೇ ಜೋಗ್‌ ಜಲಪಾತವಾಗಿದೆ. ಇದು ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಅತಿ ಹೆಚ್ಚು ಪ್ರವಾಸಿಗರು ಈ ಜಲಪಾತವನ್ನು ನೋಡಲು ಬರುತ್ತಾರೆ. ಇದು ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಶರಾವತಿ ನದಿ ಇಲ್ಲಿ ಬಂಡೆಗಳ ಮೇಲಿಂದ ೨೫೩ ಮೀಟರ್‌ ಆಳಕ್ಕೆ ದುಮುಕುವ ರಮಣೀಯ ದೃಶ್ಯವಾಗಿದೆ. ಜೋಗ್‌ ಜಲಪಾತವು ಕರ್ನಾಟಕದ ಶರಾವತಿ ನದಿಯ ಮೇಲಿದೆ. ಇದು ನಾಲ್ಕು ಸಣ್ಣ ಜಲಪಾತಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ ರಾಜ, ರಾಣಿ, ರೋರರ್‌, ಹಾಗು ಕಾಕೆಟ್‌ ಮತ್ತು ಸುಂದರವಾದ ನೋಟವನ್ನು ನೀಡುತ್ತದೆ.

ಪ್ರಸಿದ್ದವಾದ ಜಲಪಾತ

ಜೋಗ ಜಲಪಾತ ಅಥವಾ ‘ಗೇರುಸೊಪ್ಪಿನ ಜಲಪಾತ’ವೆಂದು ಕೂಡ ಪ್ರಪಂಚದಲ್ಲಿ ಪ್ರಸಿದ್ಧಯನ್ನು ಹೊಂದಿರುವ ಜಲಪಾತವಾಗಿದೆ. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವಾಗಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ.

ರಾಜಾ, ರಾಣಿ, ರೋರರ್‌ ಮತ್ತು ರಾಕೆಟ್

ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕೂ ಝರಿಗಳಿಗೆ ಹೆಸರುಗಳಿವೆ.

ರಾಜ:

ಈ ಝರಿಯು ರಾಜಗಾಂಭೀರ್ಯದಿಂದ ಧುಮುಕುವುದು.

ರೋರರ್:

ಕಲ್ಲು ಬಂಡೆಗಳ ನಡುವಿನಿಂದ ನುಗ್ಗುವ ಈ ಝರಿಯು ಅತಿ ಹೆಚ್ಚಿನ ಶಬ್ದ ಮಾಡುವಂತಹ ಜರಿಯಾಗಿದೆ.

ರಾಕೆಟ್:

ಹೆಚ್ಚಿನ ಪ್ರಮಾಣದ ನೀರು ಸಣ್ಣ ಕಿಂಡಿಯಿಂದ ರಭಸವಾಗಿ ಧುಮುಕುತ್ತದೆ.

ರಾಣಿ:

ಈ ಝರಿಯ ಆಕಾರವು ಹೆಣ್ಣು ನರ್ತಕಿಯ ತಳುಕು-ಬಳುಕಿಗೆ ಹೋಲುತ್ತದೆ.

ಜಲಪಾತದ ಬಿರುಕುಗಳಿಂದ ನಾಲ್ಕು ವಿಧವಾಗಿ ಈ ಜಲಪಾತದಲ್ಲಿ ಕಾಣಿಸಿಕೊಳ್ಳುವಂತಹಾ ರಾಜಾ, ರಾಣಿ, ರೋರರ್‌ ಹಾಗು ರಾಕೆಟ್‌ಗಳು ಅದ್ಬುತವಾಗಿ ಹೊರಹೊಮ್ಮಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು ೮೨೯ ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ರಾಣಿ ಜಲಪಾತ ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ. ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ.

ಜೋಗ್‌ ಫಾಲ್ಸ್‌ ನ ಮಹತ್ವ

ಶರಾವತಿ ನದಿಗೆ ಅಡ್ಡಲಾಗಿರುವ ಲಿಂಗನಮಕ್ಕಿ ಅಣೆಕಟ್ಟು ಜಲಪಾತದೊಂದಿಗೆ ಸಂಬಂಧಿಸಿದೆ. ವಿದ್ಯುತ್ ಕೇಂದ್ರವು 1948 ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು 120 MW ಸಾಮರ್ಥ್ಯ ಹೊಂದಿದೆ, ಆ ಸಮಯದಲ್ಲಿ ಭಾರತದ ಅತಿದೊಡ್ಡ ಜಲವಿದ್ಯುತ್ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಈಗ ಕರ್ನಾಟಕಕ್ಕೆ ವಿದ್ಯುತ್ ಶಕ್ತಿಯ ಸಣ್ಣ ಮೂಲವಾಗಿದೆ. ಆ ಸಮಯದಲ್ಲಿ ಮೈಸೂರು ರಾಜನ ನಂತರ ವಿದ್ಯುತ್ ಕೇಂದ್ರವನ್ನು ಕೃಷ್ಣ ರಾಜೇಂದ್ರ ಜಲವಿದ್ಯುತ್ ಯೋಜನೆ ಎಂದು ಹೆಸರಿಸಲಾಯಿತು . ನಂತರ ಈ ಹೆಸರನ್ನು ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಎಂದು ಬದಲಾಯಿಸಲಾಯಿತು. ಇದು 1960 ರವರೆಗೆ ಹಿರೇಭಾಸ್ಕರ ಅಣೆಕಟ್ಟಿನಿಂದ ಸೇವೆ ಸಲ್ಲಿಸಿತು. 1960 ರ ನಂತರ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಆಲೋಚನೆಗಳಿಂದಾಗಿ ಲಿಂಗನಮಕ್ಕಿ ಅಣೆಕಟ್ಟನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಯಿತು.

FAQ

ಜೋಗ ಜಲಪಾತ ಯಾವ ಜಿಲ್ಲೆಯಲ್ಲಿದೆ ?

ಶಿವಮೊಗ್ಗ ಜಿಲ್ಲೆಯಲ್ಲಿದೆ.

ಜೋಗ ಜಲಪಾತಕ್ಕಿರುವ ಇನ್ನೋಂದು ಹೆಸರೇನು ?

ಗೇರುಸೋಪ್ಪ ಜಲಪಾತವೆಂದು ಕರೆಯುತ್ತಾರೆ.

ಇತರೆ ವಿಷಯಗಳು :

ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು 

ಸಾರಾ ಅಬೂಬಕ್ಕರ್ ಅವರ ಜೀವನ ಚರಿತ್ರೆ 

LEAVE A REPLY

Please enter your comment!
Please enter your name here