ಜನಪದ ಕಲೆಗಳ ವೈಭವದ ಬಗ್ಗೆ ಮಾಹಿತಿ | Information About the Glory Of Folk Arts in Kannada

0
910
ಜನಪದ ಕಲೆಗಳ ವೈಭವದ ಬಗ್ಗೆ ಮಾಹಿತಿ | Information About the Glory Of Folk Arts in Kannada
ಜನಪದ ಕಲೆಗಳ ವೈಭವದ ಬಗ್ಗೆ ಮಾಹಿತಿ | Information About the Glory Of Folk Arts in Kannada

ಜನಪದ ಕಲೆಗಳ ವೈಭವದ ಬಗ್ಗೆ ಮಾಹಿತಿ Information About the Glory Of Folk Arts Janapada Kalegala Vaibavada Bagge Mahiti i Kannada


Contents

ಜನಪದ ಕಲೆಗಳ ವೈಭವದ ಬಗ್ಗೆ ಮಾಹಿತಿ

Information About the Glory Of Folk Arts in Kannada
Information About the Glory Of Folk Arts in Kannada

ಈ ಲೇಖನಿಯಲ್ಲಿ ಜನಪದ ಕಲೆಗಳ ವೈಭವದ ಬಗ್ಗೆದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನಿಡಲಾಗುತ್ತದೆ.

ಜನಪದ ಕಲೆ

ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದುವು. ಪರಿಸರ ವೀಕ್ಷಣೆ ಮತ್ತು ಅನುಕರಣೆಯಿಂದ ಅರಿತ್ತಿದ್ದನ್ನು ರೂಪಿಸಿಕೊಂಡಿರುವುದು, ಮಾನವನ ಸಹಜ ಗುಣ. ಹಾಗಾಗಿ ಇಂಥ ಕಲೆಗಳು ಅಸ್ತಿತ್ವಕ್ಕೆ ಬಂದವು. ಕಲೆಯೆಂಬುದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಹಾಗೂ ಮುಂದಿನ ಪೀಳಿಗೆಗೆ ಆಕರವಾಗುತ್ತದೆ. ಜನಪದ ಸಂಸ್ಕೃತಿಯ ಪ್ರತಿ ಹೆಜ್ಜೆಯಲ್ಲೂ ಜನಪದ ಕಲೆಗಳನ್ನು ಕಾಣಬಹುದು. ಜನಪದರ ಬದುಕೇ ಒಂದು ಕಲೆ. ಜನಪದ ಕಲೆಗಳಿಗೂ ಜನರ ಜೀವನಕ್ಕೂ ನಿಕಟವಾದ ಸಂಬಂಧವಿದೆ. ನಿತ್ಯ ದುಡಿಮೆಯ ಆಯಾಸ, ಬದುಕಿನ ಏಕತಾನತೆ, ಆಸರಿಗೆ – ಬೇಸರಿಕೆಯನ್ನು ನಿವಾರಿಸಿಕೊಳ್ಳಲು ಮನುಷ್ಯ ಕಲೆಗಳ ಮೊರೆ ಹೋಗಿದ್ದಾನೆ. ಇವನ್ನು ಜತನವಾಗಿ ರಕ್ಷಿಸಿ ಬೆಳೆಸಿಕೊಂಡು ಬಂದಿದ್ದಾನೆ.

ಜನಪದ ಕಲೆಗಳು

ವೀರಗಾಸೆ :

ವೀರಗಾಸೆಯು ಶೈವ ಸಂಪ್ರದಾಯದ ಧಾರ್ಮಿಕ ವೀರ ನೃತ್ಯ. ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಜನಪದ ಕಲೆಯಾಗಿದೆ. ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಪಂಚಮವಾಧ್ಯಗಳಾದ ತಾಳ, ಶೃತಿ, ಚಮಾಳ, ಓಲಗ, ಕರಡೆ ಬಳಕೆಯಾಗುತ್ತದೆ. ಕರಡೆಯ ಕುಣಿತದಲ್ಲಿ ಅನಿವಾರ್ಯ ವಾಧ್ಯ ಎನಿಸಿದೆ. ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ. ಬಿಳಿಯ ಪಂಚೆಯ ವೀರಗಚ್ಚೆ, ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿ ಸರ, ಹಣೆಗೆ ವಿಭೂತಿ, ಕರ್ಣಕುಂಡಲ, ಸೊಂಟಪಟ್ಟಿ, ಬಿಚ್ಚುಗತ್ತಿ, ಕಾಲ್ಗೆಚ್ಚು ಧರಿಸುತ್ತಾರೆ.

ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ, ಜಾತ್ರೆ, ಉತ್ಸವ, ಹಬ್ಬ, ಇಂತಹ ದಿನಗಳಲ್ಲಿ ವೀರಭದ್ರನ ಕುಣಿತವನ್ನು ಏರ್ಪಡಿಸುತ್ತಾರೆ. ವೀರಗಾಸೆ ಸಾಮಾಜಿಕ ಸಂಧರ್ಭಗಳಲ್ಲಿ ಮನರಂಜನೆಯಾಗಿಯೂ ಬಳಕೆಅಗುತ್ತದೆ.

ಕಂಸಾಳೆ:

ದಕ್ಷಿಣ ಕರ್ನಾಟಕದ ಜನ ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಮಹದೇಶ್ವರನ ಕಾವ್ಯವನ್ನು ಹೀಗೆ ಹಾಡುತ್ತ ಕಂಸಾಳೆಯೊಂದಿಗೆ ಕುಣಿಯುತ್ತ ಮಹದೇಶ್ವರನ ಬೆಟ್ಟಕ್ಕೆ ಹೋಗುವುದು ವಾಡಿಕೆ. ಕಂಸಾಲೆಯೊಂದಿಗೆ ಕುಣಿಯುತ್ತ ಮಹದೇಶ್ವರ ಬೆಟ್ಟಕ್ಕೆ ಹೋಗುವುದು ವಾಡಿಕೆ. ಕಂಸಾಲೆಯು ಮಲೆಯ ಮಹದೇಶ್ವನ ಭಕ್ತರಾದ ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು ಬಳಸುವ ಕಂಚಿನ ತಾಳಗಳು. ಇದೊಂದು ಧಾರ್ಮಿಕ ಜನಪದವಾಧ್ಯ. ಕಾಂಸತಾಲ್ಯ ಎಂಬ ಪದದ ತದ್ಬವ ರೂಪವೇ ಕಂಸಾಳೆ. ದೇವರ ಗುಡ್ಡರು ಇದನ್ನು ಬಿರುದು ಎಂದು ಕರೆಯುವರು. ಸಾಧಾರಣ ಬಟ್ಟು ತಾಳಗಳಗಿಂತ ಕಂಸಾಳೆ ಗಾತ್ರದಲ್ಲಿ ದೊಡ್ಡದು.

ಅಂಗೈ ಅಗಲದ ಚಕ್ರಾಕಾರದ ಬಟ್ಟಲು ಚಿಕ್ಕ ಜಾಗಟೆಯಂತಿರುವ ಮಟ್ಟಸವಾದ ಮೇಲುತಾಳ.ಮೇಲುತ್ತಾಳಕ್ಕೆ ಸೇರಿದಂತೆ ಹಿಡಿದುಕೊಳ್ಳುಲು ಮಾಡಿಕೊಂಡ ಗೊಂಡೇವದ ಕಲಾತ್ಮಕ ಹುರಿ, ಇವು ಕಂಸಾಳೆಯ ಮುಖ್ಯ ಭಾಗಗಳು. ಬಟ್ಟಲನ್ನು ಮೇಲು ಮುಖವಾಗಿ ಎಡ ಅಂಗೈ ಮೇಲೆ ಇರಿಸಿಕೊಂಡು ಬಲಗೈಯಲ್ಲಿ ಹಿಡಿದ ಮೇಲುತಾಳವನ್ನು ಅದರ ಮೇಲೆ ಮುಖವಾಗಿ ಎಡ ಅಂಗೈ ಮೇಲೆ ಇರಿಸಿಕೊಂಡು ಬಲಗೈಯಲ್ಲಿ ಮೇಲುತಾಳವನ್ನು ಕಟ್ಟುತ್ತಾರೆ.

ಡೊಳ್ಳು ಕುಣಿತ :

ಡೊಳ್ಳು ಕುಣಿತ ಜನಪದ ಕಲೆಗಳಲ್ಲಿ ವಿಶಿಷ್ಟವಾದುದು. ಇದು ವಾದ್ಯ ಪ್ರಧಾನ ಕಲೆ. ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ. ಡೊಳ್ಳು ಚರ್ಮವಾದ್ಯ. ಪೊಳ್ಳು ಪಗಡದ ಎರಡೂ ಬಾಯಿಗಳಿಗೆ ತೊಗಲು ಹೊದಿಸಿದ ಎರಡು ಪರಡೆಗಳನ್ನಿಟ್ಟು ಹಗ್ಗದಿಂದ ಬಿಗಿದಿರುತ್ತಾರೆ. ಇದನ್ನು ಎರಡೂ ಕೈಗಳಿಂದ ಬಾರಿಸಬಹುದು. ಬಲಗೈಯಲ್ಲಿ ಬಾರಿಸುವ ಗುಣಿ ಇರುತ್ತದೆ. ಗುಣಿಯಿಂದ ಬಾರಿಸಿದ ಗತಿಗೆ ಹೊಂದಿಕೆಯಾಗುವಂತೆ ಎರಗೈಯಿಂದ ಛಾಪು ಹಾಕಲಾಗುತ್ತದೆ. ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲಕ್ಕೆ ಡೊಳ್ಳು ಬಾರಿಸುತ್ತಾರೆ. ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲುಭಾಗಕ್ಕೆ ಕರಿಯ ಕಂಬಳಿಯನ್ನಯ ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತೆ ಕಚ್ಚೆಪಂಚೆಯನ್ನೂ ಉಡುತ್ತಾರೆ. ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನು ಧರಿಸುತ್ತಾರೆ.

ಯಕ್ಷಗಾನ :

ಯಕ್ಷಗಾನ ನೃತ್ಯಪ್ರಧಾನ ಕಲೆ. ಪ್ರಾರಂಭದಲ್ಲಿ ದೇಸೀ ಕಲೆಯಾಗಿದ್ದು ಅನಂತರ ಶಾಸ್ತ್ರದ ಚೌಕಟ್ಟಿಗೆ ಒಳಪಟ್ಟಿದೆ. ಇದು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವ ಅಪೂರ್ವ ಶಕ್ತಿಯುಳ್ಳ ಕಲೆ. ಯಕ್ಷಗಾನದಲ್ಲಿ ಪ್ರಾದೇಶಿಕ ಪ್ರಬೇಧಗಳಿವೆ. ಅದರಲ್ಲಿ ಮುಖ್ಯವಾದ ಮೂರು ಶೈಲಿಗಳು ತೆಂಕುತಿಟ್ಟು, ಬಡಗುತಿಟ್ಟು. ಯಕ್ಷಗಾನಕ್ಕೆ ದಶಾವತಾರ, ಬಯಲಾಟ, ಭಾಗವತರಾಟ ಎಂಬ ಹೆಸರೂ ಇವೆ. ಸಾಮಾನ್ಯವಾಗಿ ಬಯಲಾಟ, ಪ್ರದರ್ಶಿತವಾಗುವುದು ಹಳ್ಳಿಯ ಬಯಲಿನಲ್ಲಿ. ಆದ್ದರಿಂದ ಅದು ಬಯಲಾಟ. ಯಕ್ಷಗಾನ ಕಲಿಸುವವನೇ ಭಾಗವತನಾದ್ದರಿಂದ ಭಾಗವತರಾಟ ಎಂಬ ಹೆಸರು ಬಂದಿದೆ. ಯಕ್ಷಗಾನದಲ್ಲಿ ತುಂಬ ಕಲಾತ್ಮಕವಾದದ್ದು ಬಣ್ಣದ ವೇಷ. ಯಕ್ಷಗಾನವು ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಜ್ಞೆಗಳನ್ನು ಬೆಳೆಸಲು ಸಹಕಾರಿಯಾಗಿದೆ. ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಟನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ.

FAQ

ಯಕ್ಷಗಾನವು ಯಾವ ರಾಜ್ಯದ ನೃತ್ಯವಾಗಿದೆ ?

ಕರ್ನಾಟಕ

ಜನಪದ ಕಲೆಗಳ ಪ್ರಕಾರಗಳನ್ನು ತಿಳಿಸಿ ?

ಯಕ್ಷಗಾನ, ಕಂಸಾಳೆ, ವೀರಗಾಸೆ, ಡೊಳ್ಳುಕುಣಿತ ಇನ್ನು ಮುಂತಾದವುಗಳು.

ಇತರೆ ವಿಷಯಗಳು :

ಲ್ಯಾಪ್‌ಟಾಪ್‌ನಲ್ಲಿ PDF ಅನ್ನು ಹೇಗೆ ರಚಿಸುವುದು

ಪ್ರಾಮಾಣಿಕತೆ ಅತ್ಯುತ್ತಮ ನೀತಿ ಪ್ರಬಂಧ

LEAVE A REPLY

Please enter your comment!
Please enter your name here