ಪ್ರಮುಖ ಕ್ರಾಂತಿಗಳ ಬಗ್ಗೆ ಮಾಹಿತಿ | Information about major revolutions in Kannada

0
516
ಪ್ರಮುಖ ಕ್ರಾಂತಿಗಳ ಬಗ್ಗೆ ಮಾಹಿತಿ | Information about major revolutions in Kannada
ಪ್ರಮುಖ ಕ್ರಾಂತಿಗಳ ಬಗ್ಗೆ ಮಾಹಿತಿ | Information about major revolutions in Kannada

ಪ್ರಮುಖ ಕ್ರಾಂತಿಗಳ ಬಗ್ಗೆ ಮಾಹಿತಿ Information about major revolutions pramuka krantigala bagge mahiti in kannada


Contents

ಪ್ರಮುಖ ಕ್ರಾಂತಿಗಳ ಬಗ್ಗೆ ಮಾಹಿತಿ

ಪ್ರಮುಖ ಕ್ರಾಂತಿಗಳ ಬಗ್ಗೆ ಮಾಹಿತಿ | Information about major revolutions in Kannada
Information about major revolutions in Kannada

ಈ ಲೇಖನಿಯಲ್ಲಿ ಪ್ರಮುಖ ಕ್ರಾಂತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Information about major revolutions in Kannada

ಶ್ವೇತ ಕ್ರಾಂತಿ :

  • ಹಾಲಿನ ಉತ್ಪಾದನೆಯಲ್ಲಿ ಆದಂತಹ ಮಹತ್ತರವಾದ ಹೆಚ್ಚಳವನ್ನು ಶ್ವೇತ ಕ್ರಾಂತಿ ಎನ್ನುವರು. ಡಾ|| ವರ್ಗೀಸ್‌ ಕುರಿಯನ್‌ ರವರ ನೇತೃತ್ವದಲ್ಲಿ ಗುಜರಾತನ ಆನಂದ್‌ ನಲ್ಲಿ ʼಅಮೂಲ್‌ʼ ಹಾಲು ಉತ್ಪಾದಕ ಒಕ್ಕೂಟವನ್ನು ಆರಂಭಿಸುವ ಮೂಲಕ ಹಾಲಿನ ಸಂಗ್ರಹ ಮತ್ತು ಉತ್ಪಾದನೆಯಲ್ಲಿ ವಿಶೇಷ ಪ್ರಗತಿಯನ್ನು ಸಾಧಿಸಲಾಯಿತು. ಅನಂತರ ರಾಷ್ಟ್ರದಾದ್ಯಂತ ವಿಸ್ತಾರಗೊಂಡು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲಾಯಿತು. ಇದರ ಅಭಿವೃದ್ದಿಗೆ “ರಾಷ್ಟ್ರೀಯ ಡೈರಿ ಅಭಿವೃದಿ ಮಂಡಳಿ” ಯು ಆಪರೇಷನ್‌ ಫ್ಲಡ್‌ ರೂಪಿಸಿತು.
  • ಭಾರತವು ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಉತ್ತರ ಪ್ರದೇಶವು ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯವಾಗಿದೆ. ಭಾರತದ ಒಟ್ಟು ಹಾಲಿನ ಉತ್ಪಾದನೆ 1950-51ರಲ್ಲಿ 17 ಮಿಲಿಯನ್‌ ಟನಗಳಿಂದ 2014-2015ರ ಸಾಲಿಗೆ 146.4 ಮಿಲಿಯನ ಟನ್ಗಳಿಗೆ ಹೆಚ್ಚಳಗೊಂಡಿದೆ.

ಹಳದಿ ಕ್ರಾಂತಿ :

  • ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಆದ ತೀವ್ರತರವಾದ ಹೆಚ್ಚಳವನ್ನು ಹಳದಿ ಕ್ರಾಂತಿ ಎನ್ನುವರು. ಭಾರತದಲ್ಲಿ ಎಣ್ನೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹೊಸ ತಂತ್ರಜ್ಞಾವನ್ನು ಅಳವಡಿಸಿಕೊಳ್ಳಲಾಯಿತು. ಒಟ್ಟಾರೆ ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ರಾಜಸ್ಥಾನವು ಮೊದಲ ಸ್ಥಾನದಲ್ಲಿದೆ.
  • ಶೇಂಗಾ ಅತೀ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ ಗುಜರಾತ್‌, 2ನೇ ರಾಜ್ಯ ರಾಜಸ್ತಾನ, 3ನೇ ರಾಜ್ಯ ತಮಿಳುನಾಡು.
  • ಸೊಯಾಬಿನ್‌ ಅತೀ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ ಮಧ್ಯಪ್ರದೇಶ. 2ನೇ ರಾಜ್ಯ ಮಹಾರಾಷ್ಟ್ರ.
  • ಸೂರ್ಯಕ್ರಾಂತಿಯನ್ನು ಅತೀ ಹೆಚ್ಚು ಬೆಳೆಯುವ ರಾಜ್ಯ ಕರ್ನಾಟಕ, ನಂತರ ಓರಿಸ್ಸಾ, ಆಂಧ್ರಪ್ರದೇಶ.

ನೀಲಿ ಕ್ರಾಂತಿ :

  • ಮೀನು ಮತ್ತು ಸಾಗರೋತ್ಪನ್ನಗಳನ್ನು ಹೆಚ್ಚಿಸುವ ಸಲುವಾಗಿ ಅಳವಡಿಸಿಕೊಂಡ ಕ್ರಮಗಳನ್ನು ನೀಲಿ ಕ್ರಾಂತಿ ಎನ್ನುವರು. 5ನೇ ಪಂಚವಾರ್ಷಿಕ ಯೋಜನೆಯ ಸಂದರ್ಭದಲ್ಲಿ “ಮೀನು ಉತ್ಪಾದಕರ ಅಭಿವೃದ್ದಿ ಸಂಸ್ಥೆ” ಯನ್ನು ಸ್ಥಾಪಿಸುವ ಮೂಲಕ ಹಲವಾರು ಕ್ರಮ ಕೈಗೊಳ್ಳಲಾಯಿತು. ಪ್ರಸ್ತುತ ಅತಿ ಹೆಚ್ಚು ಮೀನು ಉತ್ಪಾದಿಸುವ ರಾಜ್ಯ ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೆಯೇ ಅತಿ ಹೆಚ್ಚು ಮೀನು ಉತ್ಪಾದಿಸುವ ರಾಷ್ಟ್ರ ಚೀನಾ. ಭಾರತ ಮೀನಿನ ಉತ್ಪಾದನೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದ್ದು, ಜಾಗತಿಕ ಮೀನು ಉತ್ಪಾದನೆಗೆ 7.58ರಷ್ಟು ಕೊಡುಗೆ ನೀಡುತ್ತದೆ. ಭಾರತದ ಮೀನಿನ ಉತ್ಪಾದನೆ 752 ಸಾವಿರ ಟನಗಳಿಂದ 2017- 18ಕ್ಕೆ 12610 ಟನಗಳಿಂದ ಹೆಚ್ಚಳವಾಗಿದೆ. 2019-2020ನೇ ಸಾಲಿಗೆ 14.16 ಮಿಲಿಯನ್‌ ಮೆಟ್ರಿಕ್‌ ಟನಗಲಿಗೆ ಹೆಚ್ಚಳವಾಗಿದೆ. ಮೀನುಗಾರಿಕಾ ವಲಯವು 28 ದಶಲಕ್ಷ ಜನರಿಗೆ ಆದಾಯದ ಮೂಲವಾಗಿದೆ.

ಸುವರ್ಣ ಕ್ರಾಂತಿ :

  • ತೋಟಗಾರಿಕೆ ಬೆಳೆಗಳು ಹಾಗೂ ಜೇನು ಸಾಕಾಣಿಕೆಯಲ್ಲಾದ ಪ್ರಗತಿಯನ್ನು ಸುವರ್ಣ ಕ್ರಾಂತಿ ಎನ್ನುವರು. ಇದು ಪ್ರಮುಖವಾಗಿ ಹೂ, ಹಣ್ಣು, ತರಕಾರಿ ಮತ್ತು ಜೇನು ಸಾಕಾಣಿಕೆಗೆ ಸಂಬಂಧಿಸಿದೆ. ಹೂ, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಾದ ಹೆಚ್ಚಳವನ್ನು ಸುವರ್ಣ ಕ್ರಾಂತಿ ಎನ್ನುವರು.

ಗುಲಾಬಿ ಕ್ರಾಂತಿ :

  • ಈರುಳ್ಳಿ ಉತ್ಪಾದನೆಯಲ್ಲಾದ ತೀವ್ರವಾದ ಹೆಚ್ಚಳವನ್ನು ಗುಲಾಬಿ ಕ್ರಾಂತಿ ಎನ್ನುವರು. ಈರುಳ್ಳಿ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾದಲ್ಲಿದೆ. ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರವಾರು ಚೀನಾ ಮೊದಲ ಸ್ಥಾನ. ಭಾರತ ಎರಡನೇ ಸ್ಥಾನದಲ್ಲಿದೆ. ಅಮೇರಿಕಾ 3ನೇ ಸ್ಥಾನದಲ್ಲಿದೆ. ಸೀಗಡಿ ಮತ್ತು ಔಷಧಿ ಉತ್ಪನ್ನಗಳ ಹೆಚ್ಚಳವನ್ನು ಸಹ ಗುಲಾಬಿ ಕ್ರಾಂತಿಯೆನ್ನುವರು.

ಕೆಂಪು ಕ್ರಾಂತಿ :

  • ಮಾಂಸ ಮತ್ತು ಟೊಮೋಟೋ ಉತ್ಪಾದನೆಯಲ್ಲಾದ ತೀವ್ರವಾದ ಹೆಚ್ಚಳವನ್ನು ಕೆಂಪುಕ್ರಾಂತಿ ಎನ್ನುವರು. ಟಮೋಟೋ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನ, ಭಾರತ ಎರಡನೇ ಸ್ಥಾನದಲ್ಲಿದೆ. ಮಾಂಸ ಉತ್ಪಾದನೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ USA ಮತ್ತು ಬ್ರೆಜಿಲ್‌ 2ನೇ ಸ್ಥಾನದಲ್ಲಿದೆ.

ಬೆಳ್ಳಿ ಕ್ರಾಂತಿ :

  • ಮೊಟ್ಟೆ ಮತ್ತು ಕುಕ್ಕುಟ ಉಪನ್ನಗಳಲ್ಲಾದ ತೀವ್ರವಾದ ಹೆಚ್ಚಳವನ್ನು ಬೆಳ್ಳಿಕ್ರಾಂತಿ ಎನ್ನಲಾಗುವುದು. ಇದನ್ನು ವೈದ್ಯಕೀಯ ವಿಜ್ಞಾನ ಮೂಲಕ ಸಾಧಿಸಲಾಗಿದೆ. 2014-2015ರಲ್ಲಿ 78.48 ಬಿಲಿಯನ್‌ ನಿಂದ 2019-2020 ನೇ ಸಾಲಿಗೆ 114.38 ಬಿಲಿಯನ್‌ ಗಳಿಗೆ ಹೆಚ್ಚಳವಾಗಿದೆ. ಭಾರತವು ಮೊಟ್ಟೆಯ ಉತಾದನೆಯಲ್ಲಿ ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ.

ಬೂದು ಕ್ರಾಂತಿ :

  • ರಸಗೊಬ್ಬರಗಳ ಉತ್ಪಾದನೆಯಲ್ಲಾಗುವ ಹೆಚ್ಚಳವನ್ನು ಬೂದು ಕ್ರಾಂತಿ ಎನ್ನುವರು. ಹಸಿರು ಕ್ರಾಂತಿಯ ಯಶಸ್ಸಿನ ಹಿಂದೆ ಇದರ ಅನಿವಾರ್ಯತೆ ಇದೆ.

ಕಂದು ಕ್ರಾಂತಿ :

  • ಕಂದು ಕ್ರಾಂತಿಯು ಪ್ರಮುಖವಾಗಿ ಚರ್ಮ ಉತ್ಪನ್ನಗಳನ್ನು, ಅಸಾಂಪ್ರದಾಯಿಕ ಶಕ್ತಿ ಮೂಲಗಳು ಮತ್ತು ಕೋಕೋ ಉತ್ಪಾದನೆಗೆ ಸಂಬಂಧಿಸಿವೆ.

ದುಂಡನೆಯ ಕ್ರಾಂತಿ :

  • ಆಲೂಗಡ್ಡೆ ಉತ್ಪಾದನೆಯಲ್ಲಾದ ಹೆಚ್ಚಳವನ್ನು ದುಂಡನೆಯ ಕ್ರಾಂತಿ ಎನ್ನುವರು. ಚೀನಾ ಆಲೂಗಡ್ಡೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರ ಎರಡನೇ ಸ್ಥಾನದಲ್ಲಿ ಭಾರತ, ನಂತರ ಅಮೇರಿಕಾ ಇದೆ. ಭಾರತದಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ 2ನೇ ಸ್ಥಾನ. ಬಿಹಾರ 3ನೇ ಸ್ಥಾನದಲ್ಲಿದೆ.

ಕಪ್ಪು ಕ್ರಾಂತಿ :

  • ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆಯಲ್ಲಿ ಆದಂತಹ ಹೆಚ್ಚಳವನ್ನು ಕಪ್ಪು ಕ್ರಾಂತಿ ಎನ್ನುವರು. ಕಪ್ಪು ಕ್ರಾಂತಿಯ ಕಾರಣದಿಂದ ಭಾರತವು ಇಂದು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಅಲ್ಲದೇ ಭಾರತದಿಂದ ರಫ್ತು ಮಾಡುವ ಸರಕುಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿದೆ.

ಸುವರ್ಣ ನಾರಿನ ಕ್ರಾಂತಿ :

  • ಭಾರತದಲ್ಲಿ ಸೆಣಬನ್ನು ಚಿನ್ನದ ನಾರು ಎಂದು ಕರೆಯಲಾಗುತ್ತದೆ. ಕಾರಣ ಸೆಣಬುನ ರಫ್ತುಗಳ ಮೂಲಕ ಅತ್ಯಮೂಲ್ಯವಾದ ವಿದೇಶಿ ವಿನಿಮಯವನ್ನು ಗಳಿಸಲಾಗುತ್ತದೆ. ಈ ಸೆಣಬಿನ ಉತ್ಪಾದನೆಯಲ್ಲಿ ಆದ ತೀವ್ರವಾದ ಹೆಚ್ಚಳವನ್ನು ಸುವರ್ಣ ನಾರಿನ ಕ್ರಾಂತಿ ಎನ್ನುವರು. ಭಾರತದ ಅತಿ ಹೆಚ್ಚು ಸೆಣಬನ್ನು ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗುತ್ತದೆ. ನಂತರ ಬಿಹಾರ, ಅಸ್ಸಾಂ, ಮೇಘಾಲಯ ಅತಿ ಹೆಚ್ಚು ಉತ್ಪಾದಿಸುತ್ತದೆ.

ಬೆಳ್ಳಿ ನಾರಿನ ಕ್ರಾಂತಿ :

  • ಹತ್ತಿ ಉತ್ಪಾದನೆಯಲ್ಲಾದ ತೀವ್ರವಾದ ಹೆಚ್ಚಳವನ್ನು ಬೆಳ್ಳಿ ನಾರಿನ ಕ್ರಾಂತಿ ಎನ್ನುವರು. ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ ಉತ್ಪಾದಿಸುತ್ತದೆ.

ಕೇಸರಿ ಕ್ರಾಂತಿ :

  • ಹೊಸ ಇಂಧನ ಮೂಲಗಳನ್ನು ಅಭಿವೃದ್ದಿಪಡಿಸಿ, ಸೌರಶಕ್ತಿ, ಅಣುಶಕ್ತಿ, ಉಷ್ಣಶಕ್ತಿ, ವಿದ್ಯುತ್‌ ಸ್ಥಾವರಗಳ ಮೂಲಕ ವಿದ್ಯುತ್‌ ಉತ್ಪಾದನೆ ಹೆಚ್ಚಿಸುವುದೇ ಕೇಸರಿ ಕ್ರಾಂತಿಯಾಗಿದೆ.

FAQ :

ಶ್ವೇತ ಕ್ರಾಂತಿಯ ಪಿತಾಮಹಾ ಯಾರು?

ವರ್ಗೀಸ್‌ ಕುರಿಯನ್.

ಬೂದು ಕ್ರಾಂತಿ ಎಂದರೇನು?

ರಸಗೊಬ್ಬರಗಳ ಉತ್ಪಾದನೆಯಲ್ಲಾಗುವ ಹೆಚ್ಚಳವನ್ನು ಬೂದು ಕ್ರಾಂತಿ ಎನ್ನುವರು.

ಇತರೆ ವಿಷಯಗಳು :

ಡಿಜಿಟಲ್ ಇಂಡಿಯಾ ಕುರಿತು ಪ್ರಬಂಧ

ಸಮೂಹ ಮಾಧ್ಯಮಗಳ ಬಗ್ಗೆ ಪ್ರಬಂಧ

LEAVE A REPLY

Please enter your comment!
Please enter your name here