ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ | Information about Kannada Ratnatraya in Kannada

0
1355
ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ | Information about Kannada Ratnatraya in Kannada
ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ | Information about Kannada Ratnatraya in Kannada

ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ | Information about Kannada Ratnatraya Kannada Ratnatrayara Bagge Mahiti in Kannada


Contents

ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ

Information about Kannada Ratnatraya in Kannada
Information about Kannada Ratnatraya in Kannada

ಈ ಲೇಖನಿಯಲ್ಲಿ ಕನ್ನಡದ ರತ್ನತ್ರಯರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕನ್ನಡದ ರತ್ನತ್ರಯರು

ಕನ್ನಡದ ರತ್ನತ್ರಯರಾದ ಪಂಪ, ಪೊನ್ನ ಹಾಗು ರನ್ನ ಇವರು ಕನ್ನಡದ ಕನ್ನಡದ ರತ್ನತ್ರಯರಾಗಿದ್ದಾರೆ.

ಪಂಪ

ಕನ್ನಡದ ಆದಿ, ಮಹಾಕವಿಯಾಗಿ ಪಂಪನು ಪ್ರಸಿದ್ದಿಯನ್ನು ಹೊಂದಿದ್ದಾನೆ. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಎಂಬ ೨ ಕೃತಿಗಳನ್ನು ರಚಿಸಿದ್ದಾನೆ. ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ಮೊದಲ ರತ್ನತ್ರಯನಾಗಿದ್ದಾನೆ. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಪಂಪನ ಕಾಲವನ್ನು ‘ಪಂಪಯುಗ’ ವೆಂದು

ಪೊನ್ನ

ರತ್ನತ್ರಯರಲ್ಲಿ ಎರಡನೆಯ ಕವಿ ಪೊನ್ನ. ಈತನಿಗೆ ಪೊನ್ನಿಗ, ಪೊನ್ನಮಯ್ಯ ಎಂಬ ಹೆಸರುಗಳಿಂದಲೂ ಕರೆಯುತ್ತಿದ್ದರು. ವಿಮರ್ಶಕರು ಪೊನ್ನನ ಕಾಲವನ್ನು ಸುಮಾರು 950 ಎಂದು ಪರಿಗಣಿಸಿದ್ದಾರೆ. ಇ.ಪಿ. ರೈಸ್, ನೀಲಕಂಠ ಶಾಸ್ತ್ರಿಗಳಂತಹ ವಿದ್ವಾಂಸರು ಪೊನ್ನ ಕಮ್ಮನಾಡಿನ ವೆಂಗಿಬಿಷಯ ಎಂಬ ಪ್ರಾಂತ್ಯಕ್ಕೆ ಸೇರಿದವನು. ಇದು ಈಗಿನ ಆಂಧ್ರದ ಚಿತ್ತೂರು ಜಿಲ್ಲೆಯ ಪುಂಗನೂರು ಪ್ರದೇಶವಾಗಿದೆ. ಮುಂದೆ ಆತ ಜೈನ ಧರ್ಮವನ್ನು ಸ್ವೀಕರಿಸಿ ಈಗಿನ ಗುಲ್ಬರ್ಗಾ ಜಿಲ್ಲೆಗೆ ಸೇರಿದ ರಾಷ್ಟ್ರಕೂಟರ ರಾಜಧಾನಿಯಾದ ಮಾನ್ಯಖೇತಕ್ಕೆ ವಲಸೆ ಬಂದನೆಂದು ಈ ವಿದ್ವಾಂಸರ ಅಭಿಪ್ರಾಯವಾಗಿದೆ.

ಪೊನ್ನ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿದ್ದು “ಉಭಯಕವಿ ಚಕ್ರವರ್ತಿ” ಎಂಬ ಬಿರುದನ್ನು ಪಡೆದಿದ್ದ. ಈತ ಕವಿ, ವಾದಿ, ವಾಗ್ಮಿಯಾಗಿದ್ದನೆಂದು ಸರ್ವದೇವ ಕವೀಂದ್ರನೆಂಬ ಬಿರುದು ಪಡೆದಿದ್ದುದಾಗಿಯೂ ತಿಳಿದುಬರುತ್ತದೆ. ಕವಿ ತನ್ನನ್ನು “ಕುರುಳ್ಗಳ ಸವಣ” ಎಂದು ಕರೆದುಕೊಂಡಿದ್ದನ್ನು ಗಮನಿಸಿದರೆ ಕವಿಯ ನಿರ್ಲಿಪ್ತ ಮನೋಭಾವ ವ್ಯಕ್ತವಾಗುತ್ತದೆ. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿ ಭುವನೈಕ ರಾಮಾಭ್ಯುದಯವನ್ನು ರಚಿಸಿದ ಪೊನ್ನ ಚಾಲುಕ್ಯರ ಮಲ್ಲಪ್ಪಯ್ಯ ಪುನ್ನಮಯ್ಯರ ಆಶ್ರಯದಲ್ಲಿ ಶಾಂತಿಪುರಾಣವನ್ನು ಬರೆದಿದ್ದಾನೆ.

ಪೊನ್ನನ ಕೃತಿಗಳು

  • ಶಾಂತಿಪುರಾಣ
  • ಜಿನಾಕ್ಷರಮಾಲೆ
  • ‘ಭುವನೈಕ ರಾಮಾಭ್ಯುದಯ’ ಹಾಗು ‘ಗತಪ್ರತ್ಯಾಗತ’

ರನ್ನ

ರನ್ನನು ಕ್ರಿ.ಶ.೯೪೯ರಲ್ಲಿ ಬೆಳುಗುಲಿ ಈಗಿನ ಬೆಳಗಲಿ ತಾಲೂಕಿ ಮುಧೋಳ ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು. ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ ಮಾಡಿದನು.

ರನ್ನನು ರಚಿಸಿದ ಕೃತಿಗಳು

  • ಅಜಿತಪುರಾಣ -೧೨ ಆಶ್ವಾಸಗಳ ಪುಟ್ಟ ಕಾವ್ಯ.
  • ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧ) – ಕುರುಕ್ಷೇತ್ರದ ಕೊನೆಯ ದಿನದ ಯುದ್ಧಕ್ಕೆ ಸಂಬಂಧಿಸಿದ ಕಥೆಯಾದರೂ, ಸಿಂಹಾವಲೋಕನ ಕ್ರಮದಲ್ಲಿ ಇಡೀ ಮಹಾಭಾರತದ ಕಥೆ ನಿರೂಪಿತವಾಗಿದೆ.
  • ಚಕ್ರೇಶ್ವರ ಚರಿತ
  • ರನ್ನಕಂದ – ೧೨ ಕಂದಪದ್ಯಗಳ ನಿಘಂಟು
  • ಪರಶುರಾಮ ಚರಿತ

FAQ

ಪಂಪನ ಕೃತಿಗಳನ್ನು ತಿಳಿಸಿ ?

ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ

ಪೊನ್ನನಿಗಿದ್ದ ಬಿರುದು ಯಾವುದು ?

“ಉಭಯಕವಿ ಚಕ್ರವರ್ತಿ”

ಇತರೆ ವಿಷಯಗಳು :

ಕುವೆಂಪು ಅವರ ಕವನಗಳು

ಹಾಸಿಗೆ ಇದ್ದಷ್ಟು ಕಾಲು ಚಾಚು ಗಾದೆ ವಿಸ್ತರಣೆ

LEAVE A REPLY

Please enter your comment!
Please enter your name here