ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ | Information About Job Creation Programs in Kannada

0
609
ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ | Information About Job Creation Programs in Kannada
ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ | Information About Job Creation Programs in Kannada

ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ Information About Job Creation Programs udyoga nirmana karyakramagala bagge mahiti in kannada


Contents

ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ

Information About Job Creation Programs in Kannada
ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

Information about job creation programs in Kannada

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ನಿರ್ಮಾಣ ಕಾರ್ಯಕ್ರಮ :

  • ಈ ಕಾರ್ಯಕ್ರಮವನ್ನು 1980ರಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆಯ ಮೂಲಕ ಗ್ರಾಮೀಣ ಸಮುದಾಯಕ್ಕೆ ಉಪಯುಕ್ತವಾದ ಆಸ್ತಿಗಳನ್ನು ನಿರ್ಮಿಸುವ ಮೂಲಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು. ಈ ಯೋಜನೆಯನ್ನು 1989ರಲ್ಲಿ ಜವಹಾರ್‌ ರೋಜಗಾರ್‌ ಯೋಜನೆಯೊಂದಿಗೆ ಸಂಯೋಜಿಸಲಾಯಿತು.

ಗ್ರಾಮೀಣ ಭೂ ರಹಿತರಿಗೆ ಉದ್ಯೋಗ ಖಾತರಿ ಯೋಜನೆ :

  • ಈ ಕಾರ್ಯಕ್ರಮವನ್ನು 1983ರಲ್ಲಿ ಜಾರಿಗೆ ತರಲಾಯಿತು. ಈ ಕಾರ್ಯಕ್ರಮದ ಅಡಿಯಲ್ಲಿ ಭೂ ರಹಿತ ಕುಟುಂಬದ ಕನಿಷ್ಟ ಒಬ್ಬ ವ್ಯಕ್ತಿಗೆ ವರ್ಷದಲ್ಲಿ ನೂರು ದಿನಗಳವರೆಗೆ ಉದ್ಯೋಗ ಒದಗಿಸುವ ಖಾತರಿ ನೀಡಿತು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ.

ಜವಹಾರ್‌ ರೋಜ್ಗಾರ್‌ ಯೋಜನೆ :

  • NREP ಮತ್ತು RLEGP ಯೋಜನೆಗಳನ್ನು ಒಗ್ಗೂಡಿಸಿ 1989ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಯೋಜನಾ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 80:20ರ ಪ್ರಮಾಣದಲ್ಲಿ ಒದಗಿಸಿದವು. ಈ ಯೋಜನೆಯ ಪ್ರಮುಖ ಉದ್ದೇಶ ಬಡಕುಟುಂಬದ ಒಬ್ಬ ವ್ಯಕ್ತಿಗೆ ವರ್ಷದಲ್ಲಿ 50 ರಿಂದ 100 ದಿನಗಳ ಉದ್ಯೋಗಾವಕಾಶಗಳನ್ನು ನೀಡುವುದು. ಈ ಯೋಜನೆಯನ್ನು ಗ್ರಾಮ ಪಂಚಾಯ್ತಿಗಳ ಮೂಲಕ ಅನುಷ್ಠಾನಗೊಳಿಸಲಾಯಿತು.

ಸಂಪೂರ್ಣ ಗ್ರಾಮೀಣ ರೋಜ್ಗಾರ್‌ ಯೋಜನೆ :

  • JGSY ಮತ್ತು ಉದ್ಯೋಗ ಭರವಸೆ ಯೋಜನೆ 1993ಗಳನ್ನು ಒಗ್ಗೂಡಿಸುವ ಮೂಲಕ ಈ ಯೋಜನೆಯನ್ನು 2001ರಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆಯ ಪ್ರಮುಖ ಉದ್ದೇಶ ಬಾಳಿಕೆ ಬರುವ ಸಮುದಾಯ ಆಸ್ತಿಗಳನ್ನು ನಿರ್ಮಾಣ ಮಾಡುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಆಹಾರ ಭದ್ರತೆಯೊಂದಿಗೆ ಕೂಲಿಯಾಧಾರಿತ ಉದ್ಯೋಗ ನೀಡುವುದು. ಈ ಯೋಜನೆಯ ಒಟ್ಟು ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 75:25ರ ಅನುಪಾತದಲ್ಲಿ ನೀಡುತ್ತವೆ. ಈ ಯೋಜನೆಯನ್ನು 2006ರಲ್ಲಿ NREGPಯೊಂದಿಗೆ ವಿಲೀನಗೊಳಿಸಲಾಯಿತು.

ಜವಹಾರ್‌ ಗ್ರಾಮ ಸಮೃದ್ದಿ ಯೋಜನೆ :

  • JRY ಯನ್ನು ಪರಿಷ್ಕರಿಸಿ 1999ರಲ್ಲಿ ಇದನ್ನು ಜಾರಿಗೊಳಿಸಲಾಯಿತು. ಈ ಯೋಜನೆಯ ಪ್ರಮುಖ ಉದ್ದೇಶ ಗ್ರಾಮೀಣ ಬಡಜನರಿಗೆ ಹೆಚ್ಚುವರಿ ಲಾಭದಾಯಕ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಅವರ ಜೀವನ ಮಟ್ಟವನ್ನು ಹೆಚ್ಚಿಸುವುದು. ಈ ಯೋಜನಾ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 75:25ರ ಅನುಪಾತದಲ್ಲಿ ನೀಡುತ್ತವೆ.

ಪ್ರಮುಖ ಲಕ್ಷಣಗಳು :

  • ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲ್ಪಟ್ಟ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಒಬ್ಬ ಮಹಿಳಾ ಅದಸ್ಯರನ್ನು ಸ್ವಸಹಾಯ ಸಂಘಗಳ ಮೂಲಕ ಸಂಘಟಿಸಲಾಗುತ್ತದೆ.
  • ಈ ಯೋಜನೆಯು ಶೇ.50ರಷ್ಟು ಫಲಾನುಭವಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು. ಶೇ.15ರಷ್ಟು ಫಲಾನುಭವಿಗಳು ಅಲ್ಪಸಂಖ್ಯಾತರಾಗಿರಬೇಕು ಮತ್ತು ಶೇ.3ರಷ್ಟು ಫಲಾನುಭವಿಗಳು ಅಂಗವಿಕಲರಾಗಿರಬೇಕು.
  • ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯಾಭಿವೃದ್ದಿ ತರಬೇತಿ ನೀಡಲಾಗುತ್ತದೆ.
  • ಆವರ್ತ ನಿಧಿ ಮತ್ತು ಬಂಡವಾಳ ಸಹಾಯಧನಗಳನ್ನು ನೀಡಲಾಗುತ್ತದೆ.
  • ರಾಷ್ಟ್ರದಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಸಾಧಿಸುವುದು.
  • ಬಡ್ಡಿ ಸಹಾಯಧನಗಳನ್ನು ನೀಡುವುದು.
  • ಮುಮ್ಮುಖ ಮತ್ತು ಹಿಮ್ಮುಖ ಸಂಪರ್ಕಗಳನ್ನು ಹೆಚ್ಚಿಸುವುದು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ :

  • ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆಯನ್ನು ಸೆಪ್ಟೆಂಬರ್‌ 7,2005ರಲ್ಲಿ ಅಧಿಸೂಚನೆಗೊಂಡ ನಂತರ ಈ ಕಾರ್ಯಕ್ರಮವನ್ನು ಫೆಬ್ರವರಿ 2, 2006ರಲ್ಲಿ ಅತ್ಯಂತ ಹಿಂದುಳಿದ 200 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಯಿತು. ಈ ಕಾರ್ಯಕ್ರಮದೊಂದಿಗೆ ಹಿಂದೆ ಜಾರಿಯಲ್ಲಿದ್ದ ಸಂಪೂರ್ಣ ಗ್ರಾಮೀಣ ರೋಜ್ಗಾರ್‌ ಯೋಜನೆ ಮತ್ತು ರಾಷ್ಟ್ರೀಯ ಕೂಲಿಗಾಗಿ ಕಾಳು ಯೋಜನೆಗಳನ್ನು ವಿಲೀನಗೊಳಿಸಲಾಯಿತು. ಈ ಕಾರ್ಯಕ್ರಮವು 2008 ಏಪ್ರಿಲ್‌ 2 ರಿಂದ ರಾಷ್ಟ್ರಾದ್ಯಂತ ಎಲ್ಲಾ ಗ್ರಾಮೀಣ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ಬಂದಿದೆ. ಅಕ್ಟೋಬರ್‌ 2, 2009 ರಿಂದ ಇದನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ ಎಂದು ಪುನರ್‌ ನಾಮಕರಣ ಮಾಡಲಾಗಿದೆ.

ಕಾನೂನು ಆದಾರಿತ ಚೌಕಟ್ಟು :

  • ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿ ಯುವಕರಿಗೆ ಕಾನೂನು ರೀತಿಯಲ್ಲಿ ಅಕುಶಲ ದೈಹಿಕ ಕೆಲಸವನ್ನು ನೀಡಲಾಗುತ್ತದೆ. ಒಂದು ಕುಟುಂಬಕ್ಕೆ ಒಂದು ಹಣಕಾಸು ವರ್ಷಾವಧಿಯಲ್ಲಿ 100 ದಿನಗಳ ಉದ್ಯೋಗ ನೀಡಲಾಗುತ್ತದೆ.

ಶ್ರಮಸಾಂದ್ರ ಕೆಲಸ :

  • ಈ ಯೋಜನೆಯಡಿಯಲ್ಲಿ ನಿರ್ವಹಿಸುವ ಕೆಲಸಗಳಿಗೆ ಕೂಲಿ ಮತ್ತು ಸಲಕರಣೆ ವೆಚ್ಚವನ್ನು 60:40 ಅನುಪಾತದಲ್ಲಿ ನೀಡಲಾಗುತ್ತದೆ. ಗುತ್ತಿಗೆದಾರರನ್ನು ಮತ್ತು ಯಂತ್ರೋಪಕರನಗಳನ್ನು ಬಳಸುವಂತಿಲ್ಲ.

ವಿಕೇಂದ್ರೀಕರಣ ವ್ಯವಸ್ಥೆ :

  • ಈ ಯೋಜನೆಯಡಿಯಲ್ಲಿ ನಿರ್ವಹಿಸುವ ಕಾಮಗಾರಿಗಳನ್ನು ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಕನಿಷ್ಠ ಶೇ.50ರಷ್ಟು ಕಾಮಗಾರಿಗಳನ್ನು ಗ್ರಾಮಪಂಚಾಯ್ತಿ ಮೇಲ್ವಿಚಾರಣೆಯಲ್ಲಿ ನಿರ್ವಹಿಸಲಾಗುತ್ತದೆ. ಪಂಚಾಯತ್‌ ರಾಜ್‌ ಸಂಸ್ಥೆಗಳು ಇದರ ಯೋಜನೆ, ಮೇಲ್ವಿಚಾರಣೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.

ಕಾಮಗಾರಿಯ ಸ್ಥಳದಲ್ಲಿನ ಸೌಲಭ್ಯಗಳು :

  • ಕಾಮಗಾರಿ ಸ್ಥಳದಲ್ಲಿ ಶುದ್ದ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ, ಮಕ್ಕಳ ಆರೈಕೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ.

ಮಹಿಳಾ ಸಬಲೀಕರಣ :

  • ಈ ಕಾರ್ಯಕ್ರಮದಡಿಯಲ್ಲಿ 1/3ರಷ್ಟು ಫಲಾಭವಿಗಳನ್ನು ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಇದು ಮಹಿಳಾ ಸಬಲೀಕರಣ ಕಾರ್ಯಕ್ರಮ ಸಹ ಆಗಿದೆ.

ಅನುದಾನ :

  • ಈ ಯೋಜನೆಯ ಒಟ್ಟು ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು ಶೇ.90:10 ರ ಅನುಪಾತದಲ್ಲಿ ಭರಿಸುತ್ತದೆ. ಪ್ರಸ್ತುತ MGNAREGA 682 ಜಿಲ್ಲೆಗಳ 6861 ಬ್ಲಾಕಗಳ 262273 ಗ್ರಾಮ ಪಂಚಾಯ್ತಿಗಳಲ್ಲಿ ಅನುಷ್ಠಾನದಲ್ಲಿದೆ. ಮಾರ್ಚ್‌ 2017ರ ವೇಳೆಗೆ 12.5 ಕೋಟಿ ಜಾಬ್‌ ಕಾರ್ಡಗಳನ್ನು ಹಂಚಿಕೆ ಮಾಡಲಾಗಿದೆ. 2018-2019ರ ಮುಂಗಡ ಪತ್ರದಲ್ಲಿ 55000 ಕೋಟಿಯನ್ನು ಈ ಯೋಜನೆಗೆ ಹೊಂದಿಕೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ಈ ಯೋಜನೆಗಾಗಿ 73000 ಕೋಟಿಗಳನ್ನು ಘೋಷಿಸಲಾಗಿದೆ.

FAQ :

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ನಿರ್ಮಾಣ ಕಾರ್ಯಕ್ರಮ ಎಷ್ಟರಲ್ಲಿ ಜಾರಿಗೆ ಬಂತು?

1980.

ಗ್ರಾಮೀಣ ಭೂ ರಹಿತರಿಗೆ ಉದ್ಯೋಗ ಖಾತರಿ ಯೋಜನೆ ಯಾವಾಗ ಜಾರಿಗೆ ಬಂತು?

1983

ಇತರೆ ವಿಷಯಗಳು :

ಭೂಕಂಪದ ಸುರಕ್ಷತೆ ಬಗ್ಗೆ ಮಾಹಿತಿ

ಹವಮಾನದ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here