ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ | If you have a mind, the way is the proverbial explanation in Kannada

0
1799
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ | If you have a mind, the way is the proverbial explanation in Kannada
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ | If you have a mind, the way is the proverbial explanation in Kannada

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ If you have a mind, the way is the proverbial explanation Manasiddare Marga Gade Mathu Vistarane in Kannada


Contents

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ

If you have a mind, the way is the proverbial explanation in Kannada

ಈ ಲೇಖನಿಯಲ್ಲಿ ಮನಸ್ಸಿದ್ದರೆ ಮಾರ್ಗ ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಮನಸ್ಸಿದ್ದರೆ ಮಾರ್ಗ ಗಾದೆ

ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಗಾದೆಗಳು ವೇದಗಳಿಗಳಿಗೆ ಸಮವಾಗಿವೆ. ಒಂದು ವೇಳೆ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆ ಮಾತುಗಳು ಗ್ರಾಮೀಣ ಬದುಕಿನ ಪ್ರತಿಬಿಂಬಗಳಾಗಿವೆ. ಸುಪ್ರಸಿದ್ದ ಗಾದೆಗಳಲ್ಲಿ ಮನಸ್ಸಿದ್ದರೆ ಮಾರ್ಗ ಗಾದೆ ಎಂಬ ಈ ಅರ್ಥಪೂರ್ಣವಾದ ಗಾದೆಯು ಹೆಚ್ಚು ಎಲ್ಲರಿಗು ಪರಿಚಿತವಾದ ಹಾಗು ಅನ್ವಯಿಕ ಗಾದೆಯಾಗಿದೆ. ಆಸೆ ಯೆಂಬುದು ಮನುಷ್ಯನ ಸಹಜ ಗುಣವಾಗದೆ. ಈ ಆಸೆಯೆಂಬುದು ಇಲ್ಲದ್ದಿದ್ದರೆ ಮನುಷ್ಯ ಕಾಡುಪ್ರಾಣಿಯಂತೆ ಜೀವಿಸುತ್ತಿದ್ದ. ಆದರೆ ಈ ಆಸೆಗಳು ಹಿತವಾಗಿ, ಮಿತವಾಗಿರುವುದು ಒಳಿತು.

ಮನಸ್ಸಿದ್ದರೆ ಮಾರ್ಗ ಗಾದೆಯ ವಿವರಣೆ

ಉದಾಹರಣೆ : ಸಾಮರ್ಥ್ಯ ಮತ್ತು ಪ್ರಯತ್ನಗಳು ಜೋಡೆತ್ತಿನಂತೆ ಒಟ್ಟಿಗೆ ಸಾಗಿದರೆ, ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿ. ಸಾಮರ್ಥ್ಯದ ಜೊತೆಗೆ ಕೆಲಸ ಮಾಡುವ ಮನಸ್ಸು ಬಹು ಮುಖ್ಯ. ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾರ್ಗ ತನಗೆ ತಾನೇ ಲಭ್ಯ. ಸಾಮರ್ಥ್ಯವು ಎಷ್ಟೇ ಇದ್ದರೂ, ಸರಿಯಾದ ಪ್ರಯತ್ನವಿಲ್ಲದಿದ್ದರೆ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ, ಶಿವ ಕೊಟ್ಟ ಜೋಳಿಗೆ ಗೂಟಕ್ಕೆ ನೇತುಹಾಕಿದರೆ, ಜೋಳಿಗೆ ತುಂಬಲು ಸಾಧ್ಯವಿಲ್ಲ ಬದಲಾಗಿ ಮನೆ ಮನೆ ಅಲೆದು ಭಿಕ್ಷೆ ಬೇಡಿದಾಗ ಮಾತ್ರ ಅದು ತುಂಬುತ್ತದೆ. ಹಾಗೆಯೇ, ಬಾಯಲ್ಲಿ ನಾನು ಒಳ್ಳೆ ಅಂಕ ತೆಗೆಯಬೇಕು, ಮುಂದೆ ಡಾಕ್ಟರ್ ಆಗಬೇಕು, ಜನಸೇವೆ ಮಾಡಬೇಕು, ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಬೇಕು ಎಂದು ಹೇಳಿಕೊಂಡು ತಿರುಗಿದರೆ ಅಂದುಕೊಂಡಿದ್ದನ್ನು ಸಾಧಿ ಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಮೊದಲು ಮನಸ್ಸು ಮಾಡಬೇಕು. ನಾನು ಇಂದಿನಿಂದಲೇ ಓದಲು ಆರಂಭಿಸಬೇಕೆಂದು ಮನದಲ್ಲಿ ದೃಢ ಸಂಕಲ್ಪ ಮಾಡಿ, ಅದರಂತೆ ನಡೆಯಬೇಕು. ಆಗ ಮಾತ್ರ ಅಂದುಕೊಂಡಿದ್ದನ್ನು ಸುಲಭವಾಗಿ ಸಾಧಿ ಸಲು ಸಾಧ್ಯ ಎಂದು ಈ ಗಾದೆ ಹೇಳುತ್ತದೆ. ನಾವು ಯಾವುದೇ ಒಂದು ಕೆಲಸವನ್ನು ಸರಿಯಾಗಿ ಮಾಡಲು ಆಸಕ್ತಿ ಇರಬೇಕು. ಹಾಗೆ ಆಸಕ್ತಿ ಮೂಡಲು ಆ ಕೆಲಸದ ಬಗ್ಗೆ ನಮಗೆ ಪ್ರೀತಿ ಇರಬೇಕು. ಹಾಗೆ ಆ ಕೆಲಸದಲ್ಲಿ ಪ್ರೀತಿ ಇದ್ದಾಗ ಸಹಜವಾಗಿಯೇ ಆ ಕೆಲಸ ಯಶಸ್ವಿಯಾಗುತ್ತದೆ. ಒಂದು ಚಿತ್ರ ಗೀತೆಯ ಸಾಲು ಹೀಗಿದೆ – ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’

ಮನಸ್ಸಿದ್ದರೆ ಮಾರ್ಗ ಗಾದೆಯ ಸಂದೇಶ

ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಬದಲಾಗಿ ಮಾಡಿಯೇ ತಿರುತ್ತೇನೆ ಎಂದು ಮನಸ್ಸು ಮಾಡಿದರೇ ಎಂಥ ಕೆಲಸವಾದರೂ ಮಾಡಲು ಸಾಧ್ಯ ಎಂದು ಈ ಗಾದೆ ಸೂಚಿಸುತ್ತದೆ.

ಇತರೆ ವಿಷಯಗಳು :

ಭಾರತದ ಚುನಾವಣಾ ವ್ಯವಸ್ಥೆ ಪ್ರಬಂಧ

ಗುರುನಾನಕ್ ಜೀವನ ಚರಿತ್ರೆ

LEAVE A REPLY

Please enter your comment!
Please enter your name here