ಹುಯಿಲಗೋಳ ನಾರಾಯಣ ರಾವ್ ಬಗ್ಗೆ ಮಾಹಿತಿ | Huyilagola Narayana Rao Information in Kannada

0
969
ಹುಯಿಲಗೋಳ ನಾರಾಯಣ ರಾವ್ ಬಗ್ಗೆ ಮಾಹಿತಿ | Huyilagola Narayana Rao Information In Kannada
ಹುಯಿಲಗೋಳ ನಾರಾಯಣ ರಾವ್ ಬಗ್ಗೆ ಮಾಹಿತಿ | Huyilagola Narayana Rao Information In Kannada

ಹುಯಿಲಗೋಳ ನಾರಾಯಣ ರಾವ್ ಬಗ್ಗೆ ಮಾಹಿತಿ Huyilagola Narayana Rao Information Huyilagola Narayana Rao Bagge Mahiti in Kannada


Contents

ಹುಯಿಲಗೋಳ ನಾರಾಯಣ ರಾವ್ ಬಗ್ಗೆ ಮಾಹಿತಿ

Huyilagola Narayana Rao Information In Kannada
Huyilagola Narayana Rao Information In Kannada

ಹುಯಿಲಗೋಳ ನಾರಾಯಣ ರಾವ್ ರವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಹುಯಿಲಗೋಳ ನಾರಾಯಣ ರಾವ್

ಹುಯಿಲಗೋಳ ನಾರಾಯಣರಾಯರು ಕನ್ನಡದ ಶ್ರೇಷ್ಠ ಕವಿಯಾಗಿದ್ದರು. ನಾಟಕಕಾರರಾಗಿ, ನಾಟಕ ರಚನೆಕಾರರಾಗಿ, ನಟರಾಗಿ, ಸಾಮಾಜಿಕ ಚಿಂತಕರಾಗಿ, ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು ಹುಯಿಲಗೋಳ ನಾರಾಯಣರಾಯರು ತಮ್ಮ ಜೀವನದುದ್ದಕ್ಕೂ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ನಾಡಹಬ್ಬ, ಪುಸ್ತಕ ಬಿಡುಗಡೆ, ಕಾವ್ಯ ವಾಚನ, ಸಾಹಿತ್ಯ ಸಮ್ಮೇಳನಗಳಲ್ಲಿ ಸದಾ ಉಪಸ್ಥಿತಿಯಾಗುತ್ತಿದ್ದವರು. ನಾಟಕ, ಗದ್ಯ, ಪದ್ಯ, ಪ್ರಬಂಧ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಅವರು ಸ್ವಾಗತ ಗೀತೆಗಳನ್ನು ಬರೆದು ತಾವೇ ಖುದ್ದಾಗಿ ಹಾಡಿ ಜನರ ಮೆಚ್ಚುಗೆ ಪಾತ್ರರಾದವರು. ಇವರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಕರ್ನಾಟಕದ ನಾಡಗೀತೆಯಷ್ಟೇ ಮಹತ್ವದ್ದು. ಇವರ ಬದುಕನ್ನು, ಜೀವನ ಸಾಧನೆಯನ್ನು ಲೇಖಕ ಸಂಪದಾ ಸುಭಾಷ್ ಈ ಕೃತಿಯಲ್ಲಿ ವಿವರಿಸಿದ್ದಾರೆ.

ಹುಯಿಲಗೋಳ ನಾರಾಯಣ ರಾವ್ ಆರಂಭಿಕ ಜೀವನ

ಹುಯಿಲಗೋಳ ನಾರಾಯಣ ರಾಯರು ದಿನಾಂಕ 4ನೇ ಅಕ್ಟೋಬರ್ 1884, ರಂದು ಗದಗನಲ್ಲಿ ಜನಿಸಿದರು. ಈ ಮಹಾನ್ ಕರ್ತಾರನನ್ನು ನೆನೆಯುವುದು ನಮ್ಮ ಸೌಭಾಗ್ಯವೇ ಹೌದು. ಹುಯಿಲಗೋಳ ನಾರಾಯಣರಾಯರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು. “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ. ಈ ಹಾಡು ಪ್ರಕಟಗೊಂಡ ದಿನದಿಂದ ಕನ್ನಡ ನಾಡಿನ ಹೆಸರಿನ ಜೊತೆಗೆ ಅಜರಾಮರವಾಗಿ, ಕನ್ನಡಿಗರ ನರ ನಾಡಿಗಳಲ್ಲಿ ಶಾಶ್ವತವಾಗಿ ನೆಲೆಯೂರಿ ಬಿಟ್ಟಿದೆ. ಕಾಳಿಂಗರಾಯರ ದನಿಯಲ್ಲಿ ಹೊರ ಹೊಮ್ಮಿದ ಈ ಹಾಡನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. ಇದೇ ಹಾಡು ಡಾ. ಭೀಮಸೇನ ಜೋಷಿ ಮತ್ತು ಕೃಷ್ಣ ಹಾನಗಲ್ ಅವರ ಧ್ವನಿಯಲ್ಲೂ ಸೊಗಸಾಗಿ ಮೂಡಿ
ಬಂದಿದೆ. ಈ ಹಾಡಿನ ಕರ್ತೃ ಹುಯಿಲಗೋಳ ನಾರಾಯಣರಾಯರು.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಹುಯಿಲಗೋಳ ನಾರಾಯಣರು ರಚಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಗೀತೆ ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ, 1924ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಮಹಾತ್ಮ ಗಾಂಧಿಯವರು ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಆಗಿನ್ನೂ ಬಾಲಕಿಯಾಗಿದ್ದ ದಿವಂಗತ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು. ಇಂದೂ ಕೂಡ ಈ ಹಾಡು ಕನ್ನಡಿಗರ ಹೃದಯದಲ್ಲಿ ನೆಲೆನಿಂತಿದೆ.

ಸಾಹಿತ್ಯ

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ,ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ, ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.

ನಾಟಕಗಳು

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು.
ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ಜೈ ಕರ್ನಾಟಕ ವೃತ್ತ’, ‘ಪ್ರಭಾತ’, ‘ಧನಂಜಯ’ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಜೊತೆಗೆ ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನೂ ರಚಿಸುತ್ತಿದ್ದರು. ನಾರಾಯಣರಾಯರು ‘ಮೂಡಲು ಹರಿಯಿತು’ ಎಂಬ ಕಾದಂಬರಿಯನ್ನೂ ಬರೆದಿದ್ದರು. ‘ಕನಕ ವಿಲಾಸ’, ‘ಪ್ರೇಮಾರ್ಜುನ’, ‘ಮೋಹಹರಿ’, ‘ಅಜ್ಞಾತವಾಸ’, ‘ಪ್ರೇಮ ವಿಜಯ’, ‘ಸಂಗೀತ’, ‘ಕುಮಾರರಾಮ ಚರಿತ’, ‘ವಿದ್ಯಾರಣ್ಯ’, ‘ಭಾರತ ಸಂಧಾನ’, ‘ಉತ್ತರ ಗೋಗ್ರಹಣ’, ‘ಧರ್ಮ ರಹಸ್ಯ’, ‘ಶಿಕ್ಷಣ ಸಂಭ್ರಮ’, ‘ಪತಿತೋದ್ಧಾರ’ ಇವು ನಾರಾಯಣ ರಾಯರ ಪ್ರಮುಖ ನಾಟಕಗಳು.

ಪ್ರಶಸ್ತಿ ಹಾಗು ಗೌರವಗಳು

  • ಮುಂಬಯಿ ಸರಕಾರವು ಪತಿತೋದ್ಧಾರ ನಾಟಕಕ್ಕೆ 1954ರಲ್ಲಿ ಬಹುಮಾನ ನೀಡಿತು.
  • ಕಲೋಪಾಸಕ ಮಂಡಳಿಯಿಂದ ಸನ್ಮಾನ – 1952
  • ಗದಗ – ಬೆಟಗೇರಿ ನಾಗರಿಕರಿಂದ ಸನ್ಮಾನ – 1935
  • ಗದಗ ವಕೀಲರ ಸಂಗದಿಂದ – 1955
  • ಕರ್ನಾಟಕ ಸರ್ಕಾರ ಪ್ರಥಮ ರಾಜ್ಯೋತ್ಸವ – 1956
  • ಕನ್ನಡ ಸಾಹಿತ್ಯ ಪರಿಷತ್ತು -1961

ನಿಧನ

ಹುಯಿಲಗೋಳ ನಾರಾಯಣರಾಯರು 4, ಜುಲೈ 1971 ರಂದು ಹುಬ್ಬಳ್ಳಿಯಲ್ಲಿ ನಿಧನರಾದರು.

FAQ

ಹುಯಿಲಗೋಳ ನಾರಾಯಣ ರಾವ್ ಎಲ್ಲಿ ಜನಿಸಿದರು ?

ಗದಗನಲ್ಲಿ ಜನಿಸಿದರು.

ಹುಯಿಲಗೋಳ ನಾರಾಯಣ ರಾವ್ ಎಷ್ಟರಲ್ಲಿ ಜನಿಸಿದರು ?

4ನೇ ಅಕ್ಟೋಬರ್ 1884 ರಂದು ಜನಿಸಿದರು.

ಇತರೆ ವಿಷಯಗಳು :

ರಾಷ್ಟ್ರೀಯ ರೈತ ದಿನಾಚರಣೆ ಬಗ್ಗೆ ಪ್ರಬಂಧ

ಹೊಸ ಶಿಕ್ಷಣ ನೀತಿ ಪ್ರಬಂಧ 

LEAVE A REPLY

Please enter your comment!
Please enter your name here