ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ | Fundamental Rights and Duties Essay in Kannada

0
1328
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ | Fundamental Rights and Duties Essay in Kannada
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ | Fundamental Rights and Duties Essay in Kannada

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ Fundamental Rights and Duties Essay Mulabhuta Hakkugalu Mattu Kartavyagalu Prabandha in Kannada


Contents

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ | Fundamental Rights and Duties Essay in Kannada

ಈ ಲೇಖನಿಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ನಾಗರಿಕ ಎಂದರೆ ರಾಜ್ಯ ಮತ್ತು ದೇಶದ ಯಾವುದೇ ಹಳ್ಳಿ ಅಥವಾ ಪಟ್ಟಣದಲ್ಲಿ ನಿವಾಸಿಯಾಗಿ ವಾಸಿಸುವ ವ್ಯಕ್ತಿ. ನಾವೆಲ್ಲರೂ ನಮ್ಮ ದೇಶದ ಪ್ರಜೆಗಳು ಮತ್ತು ನಮ್ಮ ಗ್ರಾಮ, ನಗರ, ಸಮಾಜ, ರಾಜ್ಯ ಮತ್ತು ದೇಶದ ಬಗ್ಗೆ ವಿಭಿನ್ನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ್ದೇವೆ. ಪ್ರತಿಯೊಬ್ಬ ನಾಗರಿಕನ ಹಕ್ಕುಗಳು ಮತ್ತು ಕರ್ತವ್ಯಗಳು ಬಹಳ ಮೌಲ್ಯಯುತ ಮತ್ತು ಪರಸ್ಪರ ಸಂಬಂಧ ಹೊಂದಿವೆ.

ವಿಷಯ ವಿವರಣೆ

ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು ‘ಮೂಲಭೂತ’ ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III ವಿಧಿಗಳು 12 ರಿಂದ 35 ರ ವರೆಗಿನ ವಿಧಿಗಳ ಮೂಲಭೂತ ಹಕ್ಕುಗಳ ಬಗ್ಗೆ ಒಳಗೊಂಡಿವೆ. ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.

ಮೂಲಭೂತ ಕರ್ತವ್ಯಗಳಳನ್ನು 1976 ರಲ್ಲಿ 42 ನೇ ತಿದ್ದುಪಡಿ ಮಾಡುವ ಮೂಲಕ 4 (A) ಹೊಸದಾದ ಭಾಗ ಮಾಡಿಕೊಂಡು 51 (A) ಹೊಸದಾದ ವಿಧಿ ಮಾಡಿಕೊಂಡು ಅದರಲ್ಲಿ 10 ಕರ್ತವ್ಯಗಳನ್ನು ಸೇರಿಸಲಾಗಿದೆ. ಮತ್ತು 2002 ರಲ್ಲಿ 86 ನೇ ತಿದ್ದುಪಡಿ ಮಾಡಿ 11 ಕರ್ತವ್ಯವನ್ನು ಸೇರಿಸಲಾಯಿತು.

ಮೂಲಭೂತ ಹಕ್ಕುಗಳು

೧. ಸಮಾನತೆಯ ಹಕ್ಕು (14 – 18)

14,15,16, 17,18 ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ವಿಧಿ (14) : ಕಾನೂನಿನ ಮುಂದೆ ಎಲ್ಲರು ಸಮಾನರು. ಕಾನೂನಿಗಿಂತ ಶ್ರೇಷ್ಟರು ಯಾರೂ ಇಲ್ಲ. ಹಾಗಾಗಿ ಕಾನೂನಿಗೆ ಸರ್ವರೂ ತಲೆಬಾಗಲೇಬೇಕು. ಕಾನೂನು ಯಾರಿಗೂ ಅಸಮಾನತೆಯನ್ನು ಬೆಂಬಲಿಸಿಲ್ಲ.
ವಿಧಿ (15) : ತಾರತಮ್ಯವನ್ನು ನಿಶೆಧಿಸಿದೆ(ಜಾತಿ, ಲಿಂಗ, ಭಾಷೆ, ಹುಟ್ಟಿದ ಸ್ಥಳದ ಆಧಾರದ ಮೆಲೆ)
ವಿಧಿ (16) : ಸಾವ್ರಜನಿಕ ಹುದ್ದೆಗಳಲ್ಲಿ ಸಮಾನ ಅವಕಾಶ ನೀಡ ಬೇಕೆಂದು ತಿಳಿಸುತ್ತದೆ.
ವಿಧಿ (17) : ವಿಧಿಅಸ್ಪಶ್ಯತೆ ನಿಷೇಧಿಸಲಾಗಿದೆ.
ವಿಧಿ (18) : ಬಿರುದುಗಳ ರದ್ಧತಿ ಎ೦ದು ತಿಳಿಸುತ್ತದೆ (ಮಿಲಿಟರಿ ಮತ್ತು ಸರ್ಕಾರಿ ಬಿರುದುಗಳನ್ನು ಬಿಟ್ಟು)

೨. ಸ್ವಾತಂತ್ರ್ಯದ ಹಕ್ಕು : (ವಿಧಿ 19 ರಿಂದ 22)

ವಿಧಿ19 ರಿಂದ 22 ವರೆಗೆ ಸ್ವಾತಂತ್ರ್ಯದ ಹಕ್ಕನ್ನು ವಿವರಿಸುತ್ತದೆ. 19 ನೇ ವಿಧಿಯು ಆರು ಸ್ವಾತಂತ್ರ್ಯಗಳನ್ನು ನೀಡಿದೆ.

  • ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ.
  • ಅಸ್ತ್ರಗಳಿಲ್ಲದೆ ಶಾಂತಿಯುತವಾಗಿ ಒಂದೆಡೆ ಸೇರುವ ಸ್ವಾತಂತ್ರ್ಯ.
  • ಸಂಘ ಮತ್ತು ಸಂಸ್ಥೆಗಳನ್ನು ರಚಿಸುವ ಸ್ವಾತಂತ್ರ್ಯ
  • ಭಾರತದಾದ್ಯಂತ ಚಲಿಸುವ ಸ್ವಾತಂತ್ರ್ಯ
  • ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಮತ್ತು ಖಾಯಂ ನೆಲೆಸುವ ಸ್ವಾತಂತ್ರ್ಯ
  • ಯಾವುದೇ ವೃತ್ತಿಯನ್ನು ನಡೆಸುವ, ಅಥವಾ ಯಾವುದೇ ವಾಣಿಜ್ಯ ಅಥವಾ ವ್ಯವಹಾರದಲ್ಲಿ ತೊಡಗುವ ಹಕ್ಕು
  • 20 ನೇ ವಿಧಿ : ಅಪರಾಧಿಯ ರಕ್ಷಣೆ
  • ವಿಧಿ 21 : ಜೀವಿಸುವ ಹಕ್ಕು
  • 21 (ಎ) ವಿಧಿ : ಶಿಕ್ಷಣದ ಹಕ್ಕು
  • 22 ನೇ ವಿಧಿ : ಬಂದಿಸಿದ ವ್ಯಕ್ತಿಯ ರಕ್ಷಣೆ

೩. ಶೋಷಣೆಯ ವಿರುದ್ಧ ಹಕ್ಕು ( 23 – 24 )

  • 23 – 24 ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
  • 23 ನೇ ವಿಧಿ : ಜೀತ ಪದ್ದತಿ ನಿಷೇಧ.
  • 24 ನೇ ವಿಧಿ : ಬಾಲ ಕಾರ್ಮಿಕ ಪದ್ದತಿ ನಿಷೇಧ.

೪.ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ( 25 – 28 )

25, 26, 27, 28 ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.

  • 25 ನೇ ವಿಧಿ : ಯಾವುದೇ ಧರ್ಮವನ್ನು ಸ್ವೀಕರಿಸುವುದು.
  • 26 ನೇ ವಿಧಿ : ಧರ್ಮದ ಹೆಸರಿನಲ್ಲಿ ಆಸ್ತಿಯನ್ನು ಸಂಪಾದಿಸುವುದು.
  • 27 ನೇ ವಿಧಿ : ಒತ್ತಾಯ ಪೂರ್ವಕವಾಗಿ ತೆರಿಗೆ ಪಡೆಯುವಂತಿಲ್ಲ.
  • 28 ನೇ ವಿಧಿ : ಧಾರ್ಮಿಕ ಭೋದನೆ ಮಾಡುವಂತಿಲ್ಲ.

೫. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ( 29 – 30 )

29, 30 ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.

  • 29 ನೇ ವಿಧಿ : ಅಲ್ಪಸಂಖ್ಯಾತರ ಹಿತರಕ್ಷಣೆ.
  • 30 ನೇ ವಿಧಿ : ತಾರತಮ್ಯ ಮಾಡುವಂತಿಲ್ಲ.

೬. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು ( ವಿಧಿ 32 )

ವಿಧಿ 32 : ಸಂವಿಧಾನಾತ್ಮಕ ಪರಿಹಾರಗಳ ಹಕ್ಕು
ಈ ಹಕ್ಕು ಮೇಲಿನ ಎಲ್ಲಾ ಹಕ್ಕುಗಳು ಅನುಷ್ಥಾನಕ್ಕೆ ಸಂವಿಧಾನಿಕ ಪರಿಹಾರವನ್ನು ಪಡೆಯುವ ಅವಕಾಶವನ್ನು ಕಲ್ಪಸಿಕೊಡುತ್ತದೆ. ಮತ್ತು ಡಾ/ಬಿ.ಆರ್.ಅಂಬೇಡ್ಕರ 32 ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದರು.‌ ‌‌‌‌‌‌‌‌‌

ಮೂಲಭೂತ ಕರ್ತವ್ಯಗಳು

ಮೂಲಭೂತ ಕರ್ತವ್ಯಗಳು ನ್ಯಾಯರಕ್ಷಿತವಲ್ಲ. ಆದರೆ ಕರ್ತವ್ಯ ಉಲ್ಲಂಘನೆಯಾದರೆ ಅವರನ್ನು ಶಿಕ್ಷಿಸಬಹುದು. ಮೂಲಭೂತ ಹಕ್ಕುಗಳು ಕೇಳುವಂತೆ ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ಪೌರನ ಆದ್ಯ ಕರ್ತವ್ಯವಾಗಿದೆ.

  1. ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
  2. ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಆದರ್ಶಗಳನ್ನು ಗೌರವಿಸುವುದು ಮತ್ತು ಪಾಲಿಸುವುದು.
  3. ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು.
  4. ದೇಶವನ್ನು ರಕ್ಷಿಸುವುದು ಮತ್ತು ದೇಶಸೇವೆಗೆ ಸಿದ್ಧರಿರುವುದು.
  5. ವಿವಿಧ ಧರ್ಮ, ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು; ಮಹಿಳೆಯರಿಗೆ ಅಗೌರವ ತೋರುವ ಪದ್ದತಿಗಳನ್ನು ತಿರಸ್ಕರಿಸುವುದು.
  6. ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು.
  7. ದೇಶದ ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು.
  8. ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದು. ಪ್ರಶ್ನೆ ಮಾಡುವ ಮತ್ತು ಬದಲಾವಣೆಗೆ ಒಡ್ಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು.
  9. ಸಾರ್ವಜನಿಕ ಸ್ವತ್ತನ್ನು ಕಾಪಾಡಿಕೊಳ್ಳುವುದು; ಹಿಂಸೆಯನ್ನು ತೊರೆಯುವುದು.
  10. ಎಲ್ಲಾ ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಗಳಲ್ಲಿ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸಿ ದೇಶದ ಪ್ರಗತಿಗಾಗಿ ಶ್ರಮಿಸುವುದು.
  11. ಎಲ್ಲಾ ತಂದೆ-ತಾಯಿಯರು/ಪಾಲಕರು/ಪೋಷಕರು 6 ರಿಂದ14 ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ನೀಡತಕ್ಕದ್ದು.

ಉಪಸಂಹಾರ

ನಾಗರಿಕರ ಜೀವನದಲ್ಲಿ ಮೂಲಭೂತ ಹಕ್ಕುಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಹಕ್ಕುಗಳು ಸಂಕೀರ್ಣತೆ ಮತ್ತು ಕಷ್ಟದ ಸಮಯದಲ್ಲಿ ಉತ್ತಮ ಮಾನವರಾಗಲು ನಮಗೆ ಸಹಾಯ ಮಾಡಬಹುದು. ಭಾರತದ ಸಂವಿಧಾನದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಜೊತೆಗೆ ಕೆಲವು ಮೂಲಭೂತ ಕರ್ತವ್ಯಗಳನ್ನೂ ಉಲ್ಲೇಖಿಸಲಾಗಿದೆ. ನಾವು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪರಸ್ಪರ ಪ್ರೀತಿಸಬೇಕು ಮತ್ತು ಗೌರವಿಸಬೇಕು ಮತ್ತು ಯಾವುದೇ ವ್ಯತ್ಯಾಸವಿಲ್ಲದೆ ಒಟ್ಟಿಗೆ ಬದುಕಬೇಕು. ನಮ್ಮ ದೇಶವನ್ನು ರಕ್ಷಿಸಲು ನಾವು ಕಾಲಕಾಲಕ್ಕೆ ತ್ಯಾಗ ಮಾಡಬೇಕೆಂದು ನಿರೀಕ್ಷಿಸಲಾಗಿದೆ. ಭಾರತದ ಸಂವಿಧಾನದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಜೊತೆಗೆ ಕೆಲವು ಮೂಲಭೂತ ಕರ್ತವ್ಯಗಳನ್ನೂ ಉಲ್ಲೇಖಿಸಲಾಗಿದೆ.

FAQ

ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ ?

ಅಮೇರಿಕಾ

ಮೂಲಭೂತ ಕರ್ತವ್ಯಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ?

ರಷ್ಯಾ

ಇತರೆ ವಿಷಯಗಳು :

ಮಾನವ ಹಕ್ಕುಗಳ ದಿನಾಚರಣೆ ಬಗ್ಗೆ ಪ್ರಬಂಧ 

ಭಾರತದ ಚುನಾವಣಾ ವ್ಯವಸ್ಥೆ ಪ್ರಬಂಧ

LEAVE A REPLY

Please enter your comment!
Please enter your name here