ಅಪ್ಪನ ಬಗ್ಗೆ ಪ್ರಬಂಧ | Essay on Dad in Kannada

0
1218
ಅಪ್ಪನ ಬಗ್ಗೆ ಪ್ರಬಂಧ | Essay on Dad in Kannada
ಅಪ್ಪನ ಬಗ್ಗೆ ಪ್ರಬಂಧ | Essay on Dad in Kannada

ಅಪ್ಪನ ಬಗ್ಗೆ ಪ್ರಬಂಧ Essay on Dad Appa na Bagge Prabandha in Kannada


Contents

ಅಪ್ಪನ ಬಗ್ಗೆ ಪ್ರಬಂಧ

Essay on Dad in Kannada
Essay on Dad in Kannada

ಈ ಲೇಖನಿಯಲ್ಲಿ ಅಪ್ಪನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

” ಅಪ್ಪ ” ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ, ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾದ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ಹಾಗೆ ಅಪ್ಪ ನಮ್ಮ ಧೈರ್ಯ. ಅಪ್ಪನ ಬಗ್ಗೆ ಅದೆಂಥದ್ದೋ ಅಮೂರ್ತ ಭಯ. ಮಗುವಿನ ಬೆಳವಣಿಗೆ ಮತ್ತು ಬೆಳವಣಿಗೆಗೆ ಕೊಡುಗೆ ನೀಡುವುದು ತಂದೆಯ ಪಾತ್ರ. ತನ್ನ ಮಗುವಿಗೆ ಅಥವಾ ಮಕ್ಕಳಿಗೆ ಜೀವನದ ಯಾವುದೇ ಅಗತ್ಯತೆಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ತಂದೆಯ ಪಾತ್ರ.

ವಿಷಯ ವಿವರಣೆ

ಜೂನ್ 19, 1910 ರಂದು ಅಮೆರಿಕದ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯ ದಿನಾಚರಣೆಯನ್ನು ಆಚರಿಸಲಾಯಿತು. ತದನಂತರ ದಿನಗಳಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ.

ತಂದೆಯಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ತಪ್ಪು. ಆತನಲ್ಲಿ ಅತೀವ ಒಲವಿದೆ. ಆದರೆ ತಾಯಿಯ ಹಾಗೆ ಅದನ್ನು ತೋರಗೊಡಲಾರ. ಅಪ್ಪನ ಪ್ರೀತಿ ಅರ್ಥ ಆಗೋದು ಬಹಳಾನೇ ಕಷ್ಟ. ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳ ಮ್ಯಾಜಿಕ್ ಬಾಕ್ಸ್. ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲಾ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬಿದವನು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ, ತೋರು ಬೆರುಳು ಹಿಡಿದು ಸಂತೆಯಲ್ಲಿ ಜಗತ್ತನ್ನೇ ತೋರಿದವ. ದಶಕಗಳ ಹಿಂದೆ ಅಪ್ಪ ಎಂದರೆ ಮಕ್ಕಳ ಮೊಗದಲ್ಲಿ ಮೂಡುತ್ತಿದ್ದ ಭಾವ ಭಯ. ಸಣ್ಣಪುಟ್ಟ ಕಾರಣಕ್ಕೂ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಭಾವಿಸಿ, ಕೂಗಾಡಿ ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದ ಆತನ ಕೋಪಕ್ಕೆ ಆತನೇ ಸಾಟಿ, ಅದಕ್ಕೆ ಏನೋ ಎಲ್ಲ ಮಕ್ಕಳ ಡಿಮ್ಯಾಂಡುಗಳು ಮೊದಲು ತಾಯಿಯ ಬಳಿಯೇ. ಏನನ್ನೇ ಕೇಳಬೇಕಾದರೂ ಅದಕ್ಕೆ ಅಮ್ಮನ ಮಧ್ಯಸ್ಥಿಕೆ ಬೇಕೆ ಬೇಕು. ಅಪ್ಪನ ಮುಂದೆ ಧೈರ್ಯವಾಗಿ ಹೋಗಿ ಕೇಳುವ ಧೈರ್ಯ ಇಲ್ಲವೇ ಇಲ್ಲ. ಹಾಗಿದ್ದಾಗ ಎದುರು ನಿಂತು ಮಾತನಾಡುವ ಪ್ರಶ್ನೆ ಇಲ್ಲವೇ ಇಲ್ಲ.

ಹಾಗೆಂದು ಆತ ಸರ್ವಾಧಿಕಾರಿಯಲ್ಲ. ಬದಲಿಗೆ ಸರಿ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕ. ಆದರೆ ಕಾಲ ಬದಲಾದಂತೆ ಅಪ್ಪನೂ ಸಹ ಬದಲಾಗುತ್ತಿದ್ದಾನೆ. ಅಂದಿನ ಅಪ್ಪನಲ್ಲಿದ್ದ ದರ್ಪ, ಕೋಪ..ಅನುಮಾನ ಇಂದಿನ ಅಪ್ಪಂದಿರಲ್ಲಿಲ್ಲ…ಕೊಂಚ ಕೊಂಚವಾಗಿ ಕಡಿಮೆಯಾಗುತ್ತಿದೆ, ಅಪ್ಪ ಎಂದರೆ ಈಗಿನ ಮಕ್ಕಳಲ್ಲಿ ಭಯದ ಬದಲು ಮಂದಹಾಸ ಮೂಡುತ್ತದೆ. ಈಗಿನ ಅಪ್ಪ ಮಕ್ಕಳನ್ನು ಅನುಮಾನದಿಂದ ನೋಡಲ್ಲ. ಬದಲಿಗೆ ಅಭಿಮಾನದಿಂದ ಕಾಣುತ್ತಾನೆ. ಅವರ ಬಯಕೆಗಳಿಗೆ ಸಮಸ್ಯೆಗಳಿಗೆ ಕಿವಿಯಾಗುತ್ತಾನೆ… ಅವರ ಕೋರಿಕೆಗಳ ಹಿಂದಿನ ಅವಶ್ಯಕತೆಗಳನ್ನು ಅರಿಯಲು ಮನಸ್ಸು ಮಾಡುತ್ತಿದ್ದಾನೆ. ಹಿಂದೆಲ್ಲಾ ತನ್ನ ಇಚ್ಚೆಗನುಸಾರವಾಗಿ ಮಕ್ಕಳು ಬೆಳೆಯಬೇಕು ಎಂದು ಬಯಸುತ್ತಿದ್ದ ಅಪ್ಪ. ಈಗ ಮಕ್ಕಳ ಓದಿನ, ಆಟದ, ಸ್ನೇಹಿತರ ಅಷ್ಟೆ ಏಕೆ ಸಂಗಾತಿಯ ಆಯ್ಕೆಯ ವಿಷಯದಲ್ಲೂ ಸ್ವಾತಂತ್ರ್ಯ ನೀಡಿದ್ದಾನೆ. ಮಕ್ಕಳ ಮನಸ್ಸನ್ನು ಅರಿತಿದ್ದಾನೆ.. ಅಪ್ಪ ಮಕ್ಕಳ ಅಂತರ ಕಡಿಮೆಯಾಗುತ್ತಿದೆ.

ಹಿಂದೆಲ್ಲಾ ವರ್ಷಕ್ಕೊ, ಆರು ತಿಂಗಳಿಗೋ ನಡೆಯುವ ಸಂತೆ, ಜಾತ್ರೆಗೆ ಮಕ್ಕಳನ್ನು ಕರೆದು ಕೊಂಡು ಹೋದರೆ ಎಲ್ಲಿಲ್ಲದ ಸಂತೋಷ. ವರ್ಷಕ್ಕೊಮ್ಮೆ ಬರುವ ಜಾತ್ರೆಗೆ ಹೋಗಲು ಚಾತಕ ಪಕ್ಷಿಗಳಂತೆ ಕಾಯುತ್ತಿರಬೇಕಾಗಿತ್ತು. ಆದ್ರೆ ಇಂದು ವಿಕೇಂಡ್ ಬಂತು ಅಂದರೆ ಸಾಕು ಮಾಲ್. ಸಿನಿಮಾ ಅಂತಾ ಮಕ್ಕಳು ಅಪ್ಪನ ಜೊತೆಗೆ ಹೋಗ್ತಾರೆ. ಮಕ್ಕಳ ಮನಸ್ಸಿನಲ್ಲಿ ಈಗಿನ ಅಪ್ಪ ಎವರೆಸ್ಟಿಗೂ ಎತ್ತರವಾಗಿದ್ದಾನೆ,

ಅಪ್ಪಂದಿರ ಮಹತ್ವ

ಪ್ರತಿಯೊಬ್ಬರ ಜೀವನದಲ್ಲಿ, ಒಳ್ಳೆಯದು ಮತ್ತು ಕೆಟ್ಟದ್ದನ್ನು ನಮಗೆ ಕಲಿಸುವ ಮೊದಲ ಶಿಕ್ಷಕ ತಂದೆ. ನಡವಳಿಕೆ ಮತ್ತು ನೀತಿಶಾಸ್ತ್ರದ ಬಗ್ಗೆ ಅವರು ನಮಗೆ ಕಲಿಸುತ್ತಾರೆ. ನಮ್ಮ ಜೀವನದಲ್ಲಿ ತಂದೆ ನಮಗೆ ಮಾರ್ಗದರ್ಶನ ನೀಡುತ್ತಾರೆ ಇದರಿಂದ ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಜೀವನದ ನಾಯಕನನ್ನು, ಅಪ್ಪಂದಿರ ದಿನವನ್ನು ಸಾಮಾನ್ಯವಾಗಿ ಪ್ರತಿವರ್ಷ ಜೂನ್ 3ರ ಭಾನುವಾರದಂದು ಆಚರಿಸಲಾಗುತ್ತದೆ. ಈ ದಿನದ ಮಹತ್ವ ಪ್ರತಿಯೊಬ್ಬರ ಜೀವನದಲ್ಲಿ ಅತ್ಯುನ್ನತವಾಗಿದೆ. ಅಪ್ಪನ ದಿನವನ್ನು ಜಗತ್ತಿನಾದ್ಯಂತ ನಮ್ಮ ವೈಯಕ್ತಿಕ ರೀತಿಯಲ್ಲಿ ಆಚರಿಸಲು ಮಾತ್ರ ಮೀಸಲಿರುವವ ದಿನ. ನಮ್ಮ ಜೀವನದಲ್ಲಿ ನಮ್ಮ ತಂದೆಯನ್ನು ಬೇರೆಯವರಿಗೆ ಹೋಲಿಸಲಾಗುವುದಿಲ್ಲ. ಅಪ್ಪ ಮಗುವಿನ ಬೆಂಬಲವಾಗಿ ಸದಾ ಯಾವಾಗಲೂ ಜೊತೆಯಾಗಿ ಇರುತ್ತಾನೆ. ಪ್ರತಿಯೊಂದು ರೀತಿಯ ಸಮಸ್ಯೆಗೆ ಪರಿಹಾರದೊಂದಿಗೆ ಸಿದ್ಧನಾಗಿರುತ್ತಾನೆ. ಅವರು ನಮ್ಮ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ ಮತ್ತು ನಮ್ಮ ಜೀವನದುದ್ದಕ್ಕೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ತಂದೆಯು ಕುಟುಂಬದ ಶಕ್ತಿಯ ಸ್ತಂಭವಾಗಿದ್ದು, ಜೀವನದ ಎಲ್ಲಾ ಸಂತೋಷದ ಮತ್ತು ಸವಾಲಿನ ಕ್ಷಣಗಳಲ್ಲಿ ಬಂಧವನ್ನು ಬಲವಾಗಿರಿಸುತ್ತದೆ. ಪ್ರತಿಯೊಬ್ಬರು ವಿಭಿನ್ನ ರೀತಿಯಲ್ಲಿ ತಮ್ಮ ಅಪ್ಪಂದಿರ ದಿನವನ್ನು ಆಚರಿಸಲು ಇಚ್ಚಿಸುತ್ತಾರೆ. ಉದಾಹರಣೆಗೆ ಕಾರ್ಡ್‌ ನೀಡುವುದು, ಹೂವುಗಳನ್ನು ತಯಾರಿಸುವುದು ಅಥವಾ ಅವರಿಗೆ ಪ್ರತ್ಯೇಕವಾಗಿ ಏನನ್ನಾದರೂ ಉಡುಗೊರೆ ನೀಡುವ ಮೂಲಕ ಆಚರಣೆಯನ್ನು ಮಾಡುತ್ತಾರೆ. ಅವರೊಂದಿಗೆ ಇಡೀ ದಿನವನ್ನು ಕಳೆಯಲು ಇಚ್ಚಿಸುತ್ತಾರೆ ಮತ್ತು ಅವರ ಜವಾಬ್ದಾರಿಗಳಲ್ಲಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ.

ಉಪಸಂಹಾರ

ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿ ಬೆಳೆದಿದ್ದಾನೆ. ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ. ಇಂದಿನ ಬಹುತೇಕ ಮಕ್ಕಳಿಗೆ ಅಪ್ಪನ ಕೈನ ಛಡಿಯೇಟು ತಿಂದ ಅನುಭವವಿಲ್ಲ. ಅಪ್ಪ ಒಬ್ಬ ಫ್ರೆಂಡ್. ಎಲ್ಲಾ ರೀತಿಯ ವಿಷಯಗಳನ್ನು ಷೇರ್ ಮಾಡಿಕೊಳ್ಳಬಲ್ಲ ಗೆಳೆಯ, ಮಕ್ಕಳಿಗೆ ಅಪ್ಪನ ಬಗ್ಗೆ ಭಯವಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪ ಕೂಡ ಬದಲಾಗಿದ್ದಾನೆ, ಬದಲಾಗುತ್ತಿದ್ದಾನೆ.

FAQ

ಅಪ್ಪಂದಿರ ದಿನವನ್ನು ೨೦೨೩ ರಲ್ಲಿ ಯಾವಾಗ ಆಚರಿಸಲಾಗುತ್ತದೆ ?

18 June

ಪ್ರತಿವರ್ಷ ಅಪ್ಪಂದಿರ ದಿನವನ್ನು ಯಾವ ತಿಂಗಳಿನಲ್ಲಿ ಆಚರಿಸಲಾಗುತ್ತದೆ ?

ಜೂನ್ 3ರ ಭಾನುವಾರದಂದು

ಮೊದಲ ಬಾರಿಗೆ ತಂದೆಯ ದಿನಾಚರಣೆಯನ್ನು ಎಲ್ಲಿ ಆಚರಿಸಲಾಯಿತು ?

ಅಮೆರಿಕದ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯ ದಿನಾಚರಣೆಯನ್ನು ಆಚರಿಸಲಾಯಿತು.

ಇತರೆ ವಿಷಯಗಳು :

ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಪ್ರಬಂಧ

ಕ್ರಿಸ್‌ಮಸ್ ಹಬ್ಬದ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here