ಆಸೆಯೇ ದುಃಖಕ್ಕೆ ಕಾರಣ ಗಾದೆ ವಿಸ್ತರಣೆ | Desire is the cause of sorrow proverbial extension In Kannada

0
842
ಆಸೆಯೇ ದುಃಖಕ್ಕೆ ಕಾರಣ ಗಾದೆ ವಿಸ್ತರಣೆ | Desire is the cause of sorrow proverbial extension In Kannada
ಆಸೆಯೇ ದುಃಖಕ್ಕೆ ಕಾರಣ ಗಾದೆ ವಿಸ್ತರಣೆ | Desire is the cause of sorrow proverbial extension In Kannada

ಆಸೆಯೇ ದುಃಖಕ್ಕೆ ಕಾರಣ ಗಾದೆ ವಿಸ್ತರಣೆ Desire is the cause of sorrow proverbial extension Aseye Dukkake Mula Gade Mahiti information in Kannada


Contents

ಆಸೆಯೇ ದುಃಖಕ್ಕೆ ಕಾರಣ ಗಾದೆ ವಿಸ್ತರಣೆ

Desire is the cause of sorrow proverbial extension In Kannada
ಆಸೆಯೇ ದುಃಖಕ್ಕೆ ಕಾರಣ ಗಾದೆ ವಿಸ್ತರಣೆ

ಈ ಲೇಖನಿಯಲ್ಲಿ ಆಸೆಯೇ ದುಃಖಕ್ಕೆ ಕಾರಣ ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಆಸೆಯೇ ದುಃಖಕ್ಕೆ ಕಾರಣ ಗಾದೆ

ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ. ಬುದ್ಧ ಹೇಳುತ್ತಾನೆ, ‘ಆಸೆಯೇ ದುಃಖಕ್ಕೆ ಕಾರಣ’ ಎಂದು. ಇನ್ ಜನರಲಿ, In generally ಏನೋ ಇದು ಸರಿ. ಆಸೆಯಾಗಿರಬಹುದು, ಅಪೇಕ್ಷೆಯಾಗಿರಬಹುದು, ಮಹತ್ತ್ವಾಕಾಂಕ್ಷೆಯಾಗಿರಬಹುದು. ಕಾಮ ಆಗಿರಬಹುದು, ಕಾಮನೆಯಾಗಿರಬಹುದು; ಬಯಕೆಯಾಗಿರಬಹುದು, ಏನೋ ಒಂದು…. ದುಃಖಕ್ಕೆ ಕಾರಣವಾಗುತ್ತದೆ ಎಂಬ ಬುದ್ಧನ ಮಾತೇನೋ ಸರಿ. ಆದರೆ ಎಲ್ಲಕ್ಕೂ ಮುಖ್ಯವೇನೆಂದರೆ, ನಮ್ಮ ಅಭಿಪ್ರಾಯದಲ್ಲಿ, ‘ನಮ್ಮ ದುಃಖಕ್ಕೆ ನಾವೇ ಕಾರಣ’. ಇದರಲ್ಲಿ ಸಂದೇಹವೇ ಇಲ್ಲ. ಇದರಲ್ಲಿ ಒಂದು ಚೂರು ಕೂಡ ಸಂದೇಹವಿಲ್ಲ, ಸಂಶಯವಿಲ್ಲ.

ಆಸೆಯೇ ದುಃಖಕ್ಕೆ ಕಾರಣ ಗಾದೆಯ ವಿವರಣೆ

ನಾವು, ನೀವುಗಳೇ, ನಮ್ಮ ತಲೆಯಲ್ಲಿ ಅದು ಆಗಬೇಕು, ಇದು ಆಗಬೇಕು; ಅದು ಹೋಗಬೇಕು, ಇದು ಹೋಗಬೇಕು, ಅದು ಮಾಡಬೇಕು, ಇದು ಮಾಡಬೇಕು ಎಂದು ಏನೇನೋ ನೂರೆಂಟು ಹುಳು ಬಿಟ್ಟುಕೊಂಡಿರುತ್ತೇವೆ ಮತ್ತು ಬೀಜ ಬಿತ್ತಿಕೊಂಡಿರುತ್ತೇವೆ. ನಮ್ಮ ಮನಸ್ಸಿನಲ್ಲಿ, ಕನಸಿನಲ್ಲಿ ಏನೇನೋ ಬಯಕೆಯ ಬೀಜಗಳನ್ನು ಬಿತ್ತಿಕೊಂಡು ಬಂಪರ್ ಬೆಳೆಯನ್ನು ನಿರೀಕ್ಷಿಸಿಕೊಂಡಿರುತ್ತೇವೆ. ನಿರೀಕ್ಷಿತ ಪ್ರಮಾಣದಲ್ಲಿ ಮತ್ತು ನಾವು ನಿರೀಕ್ಷಿಸಿದ ರೀತಿಯಲ್ಲಿ ಬೆಳೆ ಬಾರದೆ ಹೋದರೆ ದುಃಖಿತರಾಗುತ್ತೇವೆ, ಸಂಕಟಪಡುತ್ತ ವಿಲವಿಲ ಎನ್ನುತ್ತೇವೆ.

ಮನಸ್ಸಿನಲ್ಲಿ ಬಯಕೆಯ ಬೀಜವನ್ನು ಬಿತ್ತಿದ್ದು ನಾವೇ! ಬೆಳೆ ಬಾರದೆ ಇದ್ದಾಗ ದುಃಖಿಸುವುದೂ ನಾವೇ! ನಮ್ಮ ದುಃಖಕ್ಕೆ ನಾವೇ ಕಾರಣ ಅಲ್ಲವೆ? ಬಯಕೆ, ಹಂಬಲ, ಆಸೆ, ಅಪೇಕ್ಷೆಗಳ ಬೀಜವನ್ನು ಬಿತ್ತಿದವರೂ ನಾವೇ! ಬೆಳೆ ಬಾರದೆ ಇದ್ದಾಗ ಅಳುವವರೂ ನಾವೇ! ಅಷ್ಟು ಮಾತ್ರವಲ್ಲ, ಅದೊಂದು ವೇಳೆ, ಬೆಳೆ ಬಂದರೂ ಮಾರುಕಟೆಯಲ್ಲಿ ಬೆಳೆಗೆ ತಕ್ಕನಾದ ಬೆಲೆ ಬಾರದೆ ಹೋದರೂ ಸಹ ಅದಕ್ಕೂ ಅಳುವವರು ನಾವೇ! ನಮ್ಮ ಈ ಸ್ಥಿತಿ, ಪರಿಸ್ಥಿತಿಯನ್ನು ಗಮನಿಸಿಯೇ ಶ್ರೀ ಕೃಷ್ಣಪರಮಾತ್ಮ ಭಗವದ್ಗೀತೆಯಲ್ಲಿ ನಮಗೆಲ್ಲ ಯದೃಚ್ಛಾಲಾಭಸಂತುಷ್ಟ ಪಾಠವನ್ನು ಮಾಡಿದ. ಇರೋದರಲ್ಲೇ ಆನಂದಪಡು ಮತ್ತು ಇದ್ದಷ್ಟರಲ್ಲಿಯೇ ತೃಪ್ತಿಪಡು ಎಂದು.ಪರಮಾತ್ಮ ನಮ್ಮಗಳಿಗೆ ಹೇಳಿದ ಮಾತಿಗೆ ಕಿವಿಕೊಟ್ಟರೆ ಒಳ್ಳೆಯದು. ಅದು ಬುದ್ಧಿವಂತರ ಲಕ್ಷಣ. ಹಾಗೆ ಮಾಡದೆ ಹೋದರೆ, ನಮ್ಮ ದುಃಖ, ದುಮ್ಮಾನವನ್ನು ನಾವೇ ಸಂಕಟ ಎಂಬ ಬ್ಯಾಂಕ್‌ನಲ್ಲಿ ಎಫ್. ಡಿ. F D. ಮಾಡಿಟ್ಟುಕೊಂಡು ಬಡ್ಡಿಸಹಿತ ಅವುಗಳ ಅಸಲನ್ನು ಅನುಭವಿಸಿಕೊಂಡಿರಬೇಕು, ಅಷ್ಟೇ. ಏನು ಮಾಡುವುದು? ಒಂದಷ್ಟು ನಿಧಾನಕ್ಕೆ ಯೋಚಿಸೋಣವಾಗಲಿ.

ಆಸೆ ಎನ್ನುವುದು ಮನುಷ್ಯನಿಗೆ ಸಹಜವಾಗಿಯೇ ಇರುವ ಗುಣ. ಅಷ್ಟು ಸಿಕ್ಕಿದರೆ, ಮತ್ತಷ್ಟು ಬೇಕೆಂಬ, ಆಸೆ, ಇನ್ನಷ್ಟು ಬೇಕೆಂಬ ಆಸೆ. ಆಸೆಯೂ ಮೇಥಿ ಮೀರಬಾರದು. ಅತಿಯಾದರೆ ನಮಗೆ ಒಳ್ಳೆಯದಲ್ಲ ಎನ್ನುವುದು ಈ ಗಾದೆಯ ಸಂದೇಶ. ನಮಲ್ಲಿ ಇರುವುದಲ್ಲಿ ನಮಗೆ ಸಂತ್ರಿಪ್ತಿ ಇರಬೇಕು. ನಾವು ಬೆಳೆಯಬೇಕು, ಇನ್ನು ಪಡೆಯ ಬೇಕು ಎನ್ನುವ ಛಲ ಇರಬೇಕು. ಆದರೆ ಅಡಿಗರು ಅವರು ಹೇಳಿದಂತೆ “ಇರಿವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”. ಈ ತುಡಿತವು ನಮ್ಮನ್ನು ಒಳ್ಳೆಯ ಕೆಲ್ಸವಕ್ಕೆ ಪ್ರೆಪರೇಪಿಸಿದರೆ ಒಳ್ಳೆಯದು. ಆದರೆ ಅತಿ ಆಸೆಯಿಂದ ನಮ್ಮ ಮನಸ್ಸು ಕೆಟ್ಟ ಕೆಲಸಮಾಡಲು ನಾಚುವುದಿಲ್ಲ. ಆಸೆಯು ಮಿತಿ ಮೀರಿ ಹೋದರೆ ಮನುಷ್ಯನ ವರ್ತನೆ ಬದಲಾಗುತ್ತದೆ. ಅವನು ಕಳ್ಳತನ, ಕೊಲೆ, ದರೋಡೆ ಮಾಡಬೇಕಾಗುತ್ತದೆ. ಕೊಟ್ಟ ಕೊನೆಯಲ್ಲಿ ಅವನಿಗೆ ಒಳ್ಳೆಯಾ ಪ್ರತಿಫಲ ಸಿಗದೆ, ಅವನು ಕಷ್ಟಕ್ಕೆ ಒಳಗಾಗುತ್ತಾನೆ. ನಾವು ನಮ್ಮ ಆಸೆಗಳನ್ನೂ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಒಳ್ಳೆ ಮಾರ್ಗದಲ್ಲಿ ನಡಿಯಬೇಕು. ಆಸೆಯೇ ದು:ಖಕ್ಕೆ ಕಾರಣವಾಗತ್ತೆ.

ಆಸೆಯೇ ದುಃಖ್ಖಕ್ಕೆ ಕಾರಣ ಎಂದೂ ಯಾರಾದ್ರೂ ಹೇಳಿದರೆ ಮನಸ್ಸಿಗೆ ಮೊದಲು ಬರುವವರೇ ಬುದ್ಧ. ಹಾಗಾದರೆ ಮನುಷ್ಯನಾದವನು ಆಸೆಗಳನ್ನು ಹೊಂದಾಬಾರದೆ? ಆಸೆಗಳಿಲ್ಲಾದಿದ್ದರೆ ಮನುಷ್ಯ ಜೀವಿಸುವುದಾದರೂ ಏತಕ್ಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ, ಪ್ರತಿಯೊಬ್ಬರೂ ಬದುಕಬೇಕಾದ ರೇ ತಮ್ಮದೇ ಆದ ಆಸೆಗಳನ್ನು ಹೊಂದುತ್ತಾರೆ. ಆದರೆ ತಮ್ಮ ಅತಿಯಾದ ಆಸೆಗಳಿಗೆ ಮಿತಿ ಇರಬೇಕಷ್ಟೇ, ಅತಿಯಾದರೆ ಅಮೃತವು ವಿಷವಾಗುತ್ತದೆ ಎಂಬಂತೆ ಜೀವನದಲ್ಲಿ ಸಮಸ್ಥಿತಿಯಿಂದ ಇರಬೇಕಾಗುತ್ತದೆ, ಆಸೆಯೇ ದುಃಖ್ಖಕ್ಕೆ ಕಾರಣವೆಂದು ಭಗವಾನ್ ಬುದ್ಧ ಹೇಳಿದರೆಂದು ಹಲವರು ಹೇಳುತ್ತಲೇ ಬಂದಿದ್ದಾರೆ, ಆದರೆ ಯಾವುದೇ ತ್ರಿಪಿಟಕಗಳಲ್ಲಿ ಕಂಡು ಬರುವುದಿಲ್ಲ, ಆದ್ದರಿಂದ “ಆಸೆಯೇ ದುಃಖ್ಖಕ್ಕೆ ಕಾರಣ” ಇದು ಸಮರ್ಪಕವಾದ ಹೇಳಿಕೆಯಲ್ಲ.

ಇದು ಆಸೆಗೆ ಪರ್ಯಾಯ ಪದವಲ್ಲ ಇದಕ್ಕೆ ಇಂಗ್ಲಿಷ್ನಲ್ಲಿ ಆಸೆಗೆ ಹತ್ತಿರವಾದ Craving ಎಂಬ ಪದವನ್ನು ಬಳಸುತ್ತಾರೆ Craving ಎಂದರೆ ದುರಾಸೆ ಅಥವಾ ತೃಶ್ನೆ ಎಂದಾಗುತ್ತದೆ “ಆದ್ದರಿಂದ ದುರಾಸೆಯೇ ದುಃಖ್ಖಕ್ಕೆ ಕಾರಣವೆನ್ನಬಹುದು”. ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ದುಃಖ್ಖ ನಿರೋಧ, ದುಃಖ್ಖ ನಿರೋಧ ಮಾರ್ಗ ಎಂಬ ನಾಲ್ಕು ಆರ್ಯ ಸತ್ಯಗಳ ಮೂಲಕ, ನೈತಿಕತೆಯ ಆಧಾರದ ಮೇಲೆ ತನ್ನ ಅನುಭವದ ಮೂಲಕ ಮಾನವ ಪರವಾದ ಸತ್ಯವನ್ನು ಕಂಡು ಹಿಡಿದ ಅದೇ ನಿಜವಾದ ಬುದ್ಧನ ಧರ್ಮ

ಆಸೆ ದೊಡ್ಡವರಿಗೂ ಇದೆ, ಮಕ್ಕಳಿಗೂ ಇದೆ. ಮನುಷ್ಯನ ಆಸೆಗಳು ಬೇರೆ ಬೇರೆ ಬಗೆಯವು ಇರಬಹುದು, ಅವು ಮುಗ್ಧ ಆಸೆ (ಚಾಕಲೇಟ್ ಬೇಕು, cartoon ನೋಡಬೇಕು); ಉದಾತ್ತ/ಸಾತ್ವಿಕ ಬಯಕೆ (ಹೊಸ ವಿದ್ಯೆ ಕಲಿಯುವುದು, ಹೊಸ ಸಾಹಸಕ್ಕೆ ಕೈ ಹಾಕುವುದು, ಸಮಾಜ ಸೇವೆ, ಆಧ್ಯಾತ್ಮ ಇತ್ಯಾದಿ); ರಾಜಸಿಕ/ಐಷಾರಾಮಿ ಆಸೆ (ದೊಡ್ಡ ಕಾರು, ಬಂಗಲೆ); ದುರಾಸೆ/ತಾಮಸಿಕ ಬಯಕೆ (ಇನ್ನೊಬ್ಬರ ಹಣ, ಇನ್ನೊಬ್ಬರಿಗೆ ತೊಂದರೆ, ಸೇಡು). ನಾವು ಕೊಂಚ ಯೋಚಿಸಿದರೆ, ಯಾವ ಆಸೆ ಯೋಗ್ಯ, ಯಾವುದು ದುರಾಸೆ ಎಂದು ನಮ್ಮ ಅಂತರಂಗಕ್ಕೆ ಸ್ಪಷ್ಟವಾಗಿ ತಿಳಿದೀತು.

ಸಣ್ಣ ಮಕ್ಕಳಿಗೆ ಇರುವುದು ಕೇವಲ ಮೊದಲ ವರ್ಗದ ಆಸೆಗಳು ಮಾತ್ರ, ಅಂದರೆ, ಲೌಕಿಕ ಆದರೂ ಮುಗ್ಧ ನಿಷ್ಕಲ್ಮಶ ಆಸೆಗಳು. ಹೀಗಿದ್ದಾಗ ಮಗುವಿನ ಒಂದು ಆಸೆಯನ್ನು ‘ಒಳ್ಳೆಯದು’ ಅಥವಾ ‘ದುರಾಸೆ’ ಎಂದು ವಿಂಗಡಿಸುವುದು ಸರಿಯೇ? ಮಕ್ಕಳು ಸರ್ವ ಕಾಲದಲ್ಲೂ ಆ ಕ್ಷಣದ ಕ್ಷಣಿಕ ಸುಖವನ್ನು ಮಾತ್ರ ಬಯಸುವವರು. ಹೆಚ್ಚು ದೂರದೃಷ್ಟಿ ಇರುವುದಿಲ್ಲ, ನಾವು ಅದನ್ನು ನಿರೀಕ್ಷಿಸಲೂ ಬಾರದು. ಬೆಳೆಯುತ್ತ ಬೆಳೆಯುತ್ತ ದೂರದೃಷ್ಟಿಯೂ ಬೆಳೆಯುತ್ತದೆ. ಅಲ್ಲಿಯ ವರೆಗೂ, ಆಸೆ ತಾನಾಗೇ ಹುಟ್ಟುತ್ತೆ, ಮಗು ಅದನ್ನು ಮುಗ್ದವಾಗಿ ವ್ಯಕ್ತ ಪಡಿಸುತ್ತಾನೆ ಅಷ್ಟೇ. ಆ ಆಸೆ ಫಲಿಸುವುದಿಲ್ಲವಾದರೆ ಅದನ್ನು ವಿವರಿಸುವಾಗ ನಾವು ಸಹಾನುಭೂತಿಯಿಂದ ವಿವರಿಸಬೇಕು. ಕೋಪ, ಅಸಹನೆಯಿಂದ ಅಲ್ಲ. ನಮ್ಮ ಮನೆಯಲ್ಲಿ ಖರೀದಿಗಳ ಮೇಲೆ ಸ್ವಲ್ಪ ಕಡಿವಾಣ ಇಟ್ಟಿದ್ದೇವೆ. ಏಕೆಂದರೆ ಏನನ್ನೂ ಕೊಳ್ಳುವ ಮುನ್ನ ಅದರ ಬೆಲೆ, ಅಷ್ಟೇ ಅಲ್ಲದೆ, ಅದರ ಗುಣಮಟ್ಟ, ಎಷ್ಟು ದಿನ ಉಪಯೋಗಿಸಲ್ಪಡುತ್ತದೆ, ಅದರ ಶೈಕ್ಷಣಿಕ ಉಪಯೋಗ ಎಷ್ಟು, ಹೆಚ್ಚು ಜಾಗ ಆವರಿಸುತ್ತದೆಯೇ, ಎಂದೆಲ್ಲಾ ಲೆಕ್ಕ ಹಾಕುತ್ತೇವೆ. ಅಲ್ಲದೆ, ನಮ್ಮ ಕೈಲಿ ಆಗುತ್ತದೆ ಎಂಬ ಮಾತ್ರಕ್ಕೆ ಕೇಳಿದಾಗಲೆಲ್ಲ ಕೊಡಿಸುತ್ತಿದ್ದರೆ, ಮಕ್ಕಳಿಗೆ ಹಣದ ಬಗ್ಗೆ ಹಾಗೂ ವಸ್ತುಗಳ ಬಗ್ಗೆ ಗೌರವ ಉಳಿಯುವುದಿಲ್ಲ.

ಅದೃಷ್ಟವಶಾತ್ ನನ್ನ ಮಗ ಹೆಚ್ಚು ಕೇಳುವವನಲ್ಲ, ಆದ್ದರಿಂದ ಜೀವನ ಸದ್ಯಕ್ಕೆ ಸುಗಮವಾಗಿದೆ! ಆಗಾಗ್ಗೆ ನಾವು ಸ್ವಯಂ ಪ್ರೇರಿತವಾಗಿ ಪ್ರೀತಿಯಿಂದ ಏನಾದರೋ ಕೊಡಿಸುವುದುಂಟು.. ಬಹಳ ಸಣ್ಣ ವಯಸ್ಸಿನಲ್ಲೇ ಅವನು ತನಗೆ ಬೇಕಾದ ಎಲ್ಲ ವಸ್ತುಗಳನ್ನೂ ಹೊಂದಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದನು. ಹಾಗೆಂದು ಅವನು ತನ್ನ ಆಸೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಏನೂ ಅಡ್ಡಿಯಿಲ್ಲ, ಮತ್ತು ನನ್ನೊಂದಿಗೆ ಚರ್ಚಿಸಲೂ ಬಹುದು ಎಂದು ಅವನಿಗೆ ಗೊತ್ತಾಗಿತ್ತು. ಆಸೆಪಟ್ಟ ವಸ್ತು ಸಿಗದಿದ್ದರೇನು, ನಾವಿಬ್ಬರೂ ಒಟ್ಟಿಗೆ ಆ ವಸ್ತುವಿನ ಬಗ್ಗೆ ಕನಸು ಕಟ್ಟಬಹುದಲ್ಲವೇ.

ಅಲ್ಲದೆ ಮಕ್ಕಳನ್ನು ಯಾವುದಕ್ಕೂ ಒಪ್ಪಿಸಲು ಅಥವಾ ಪ್ರೋತ್ಸಾಹಿಸಲು ಬಹುಮಾನದ ಆಮಿಷ ಕೊಡುವುದು ಸುಲಭ ಉಪಾಯ ಎನಿಸಿದರೂ ಸಾಧ್ಯವಾದಷ್ಟು ಮಾಡಬಾರದು ಎಂದು ನಂಬಿದ್ದೇವೆ. ತನಗೆ ಕೊಟ್ಟ ಹೊಸ ಆಟಿಕೆ ತಾನು ಸಂಪಾದಿಸಿದ್ದು ಎಂದು ಮಗುವಿಗೆ ಸುಳಿವು ಸಿಕ್ಕಿದರೆ, ಅವನಿಗೆ ಮೇಲುಗೈ ಕೊಟ್ಟ ಹಾಗೆ ಅಲ್ಲವೇ? ಆಗ ತಾನು ಮಾಡಿದ ಪ್ರತಿಯೊಂದು ಸಣ್ಣ ಕೆಲಸಕ್ಕೂ ಬಹುಮಾನ ಸಿಗಬೇಕೆಂದು ಅಪೇಕ್ಷಿಸುವುದಲದೆ, ಅದನ್ನು ತನ್ನ ಜನ್ಮಸಿದ್ಧ ಹಕ್ಕೆಂದೇ ಭಾವಿಸಿ, ಕೇವಲ ಬಹುಮಾನ-ಅಭಿಮುಖವಾಗಿಯೇ ಜೀವನ ಎಂದಾಗಿ, ಸ್ವಂತವಾಗಿ ಒಳ್ಳೆತನ ಬೆಳೆಯದಿದ್ದರೆ..? ಮೂಲತಃ ಒಳ್ಳೆ ಉದ್ದೇಶವಿದ್ದ ಮಗುವೂ ಕೂಡ ಸಂಕುಚಿತವಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ನಮ್ಮ ಮಗನಿಗೆ ಹೆಚ್ಚು ಬಹುಮಾನ ಪಡೆದೂ ರೂಢಿ ಇಲ್ಲ.

ಇತರೆ ವಿಷಯಗಳು :

ಇಂದಿರಾ ಗಾಂಧಿ ಜೀವನ ಚರಿತ್ರೆ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ

LEAVE A REPLY

Please enter your comment!
Please enter your name here