ಸಿದ್ದರಾಮೇಶ್ವರ ಜೀವನ ಚರಿತ್ರೆ | Biography of Siddarameshwara in Kannada

0
1400
ಸಿದ್ದರಾಮೇಶ್ವರ ಜೀವನ ಚರಿತ್ರೆ | Biography of Siddarameshwara In Kannada
ಸಿದ್ದರಾಮೇಶ್ವರ ಜೀವನ ಚರಿತ್ರೆ | Biography of Siddarameshwara In Kannada

ಸಿದ್ದರಾಮೇಶ್ವರ ಜೀವನ ಚರಿತ್ರೆ Biography of Siddarameshwara Sidda Rameshwara Jeevana Charitre in Kannada


Contents

ಸಿದ್ದರಾಮೇಶ್ವರ ಜೀವನ ಚರಿತ್ರೆ

Biography of Siddarameshwara In Kannada
Biography of Siddarameshwara In Kannada

ಈ ಲೇಖನಿಯಲ್ಲಿ ಸಿದ್ದರಾಮೇಶ್ವರರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗುತ್ತದೆ.

ಸಿದ್ದರಾಮೇಶ್ವರ

ಸಿದ್ಧರಾಮ ೧೨ನೇ ಶತಮಾನದಲ್ಲಿ ಸೊನ್ನಲಿಗೆಯಲ್ಲಿದ್ದ ಪ್ರಸಿದ್ಧ ವಚನಕಾರ. ೧೨ನೇ ಶತಮಾನದಲ್ಲಿ ಶಿವಶರಣರು ಶ್ರಮದಾನ, ಸ್ವಯಂಸೇವೆಯನ್ನು ಕಾರ್ಯರೂಪಕ್ಕೆ ತಂದಿದ್ದರು. ಆ ಕಾಲಘಟ್ಟದ ‘ಕಾಯಕ ಪ್ರತಿನಿಧಿ’ಯಾಗಿ ಸಿದ್ಧರಾಮ ನಿಲ್ಲತ್ತಾನೆ.

ಸಿದ್ಧ ರಾಮೇಶ್ವರನ ಬಾಲ್ಯ

ಮುದ್ಧಗೌಡ ಮತ್ತು ಸುಗ್ಗವ್ವೆಗೆ ಸುಮಾರು ೫೦ವರ್ಷಗಳಾದ ಮೇಲೆ ತೇಜಸ್ವಿಯಾದ ಗಂಡು ಮಗುವೊಂದು ಜನಿಸುತ್ತದೆ. ಸಿದ್ಧರಾಮ ಮುದ್ಧಗೌಡ ಮತ್ತು ಸುಗ್ಗವ್ವೆ ಈತನ ತಂದೆ ತಾಯಿ. ಈತನ ಕಾಲ ೧೧೫೦(12ನೇ ಶತಮಾನ) ಮಗುವಿಗೆ ತಾಯಿ ಸಿದ್ಧರಾಮನೆಂಬ ಹೆಸರಿಡಬೇಕೆಂದರೆ, ತಂದೆ ಮಗನಿಗೆ ‘ಧೂಳಿಮಾಕಾಳ’ನೆಂದು ಹೆಸರಿಡಲು ಆಲೊಚಿಸುತ್ತಾನೆ. ಸಿದ್ಧರಾಮ ಬಾಲ್ಯದಲ್ಲಿ ಮೌನದ ಅಪರಾವತಾರವೇ ಆಗಿದ್ದ. ಅವನೊಳಗಿನ ತೇಜಸ್ಸು ‘ತಿಲದೊಳಗಿನ ತೈಲದಂತೆ, ಹಾಲಿನ ಮರೆಯ ತುಪ್ಪದಂತೆ’ ಅಂತರಂಗದಲ್ಲಿ ಸುಪ್ತವಾಗಿದ್ದು, ಮೆಲ್ಲ ಮೆಲ್ಲನೆ ಮಾವಿನ ಮರದಡಿಯಲ್ಲಿ ಪಶುಪತಿಯ ಆರಾಧನೆಯೊಂದಿಗೆ ವಿಕಾಸಗೊಳ್ಳುತ್ತಾ ಸಾಗುತ್ತದೆ.

ಸಿದ್ಧರಾಮನ ಪವಾಡ

ಸೊನ್ನಲಿಗೆಯ ಜನ ಸಿದ್ಧರಾಮ ಪವಾಡ ಪುರುಷನೆಂದು ನಂಬುವುದರಲ್ಲೇ ಹೆಚ್ಚು ಖುಷಿ ಪಡುತ್ತಾರೆ.ಅವರ ದೃಷ್ಟಿಯಲ್ಲಿ ಸಿದ್ಧರಾಮ ದಿನಾ ರಾತ್ರಿ ಕೈಲಾಸಕ್ಕೆ ಹೋಗಿ, ಬೆಳಿಗ್ಗೆ ಅಲ್ಲಿಂದಲೇ ಬರೋದು. ಸಿದ್ಧರ ಸಿದ್ಧ ಕುಟಿಲ ವಿದ್ಯಾಸಾಗರ ಸಿದ್ಧರಾಮನ ಪವಾಡವನ್ನು ಕೇಳಿ ಬಂದು ಅವನನ್ನು ನೇರವಾಗಿ ಪರೀಕ್ಷಿಸುತ್ತಾನೆ. ಕುಟಿಲ ವಿದ್ಯಾಸಾಗರನ ಶಿಷ್ಯರು ಸಿದ್ಧರಾಮನ ಶಿಷ್ಯರನ್ನು ಸಾಯಿಸಲು ಗುಗ್ಗರಿಯಲ್ಲಿ ಭಯಂಕರ ವಿಷ ಬೆರೆಸಿಟ್ಟುರುವುದು ಸಿದ್ಧರಾಮನಿಗೆ ಗೊತ್ತಾಗುತ್ತದೆ. ಭಯಂಕರ ವಿಷ ಮಿಶ್ರಿತ ಆಹಾರವನ್ನು ಮಲ್ಲಿಕಾರ್ಜುನನ ಕೃಪೆಯಿಂದ ಸಿದ್ಧರಾಮ ಅಮೃತವನ್ನಾಗಿಸಿ ತನ್ನ ಶಿಷ್ಯರಿಗೆ ಅದನ್ನು ಹಂಚುತ್ತಾನೆ. ಮತ್ತೊಮ್ಮೆ ಸಿದ್ಧರಾಮ ಕೆಂಪಗೆ ಕಾದ ಪಂಚಲೋಹದ ಗುಂಡನ್ನು ಬರಿಗೈನಲ್ಲಿ ಹಿಡಿದು ತನ್ನ ಶಿಷ್ಯರಿಗೆ ತೋರಿಸುತ್ತಾನೆ.

ಶಿವಯೋಗಿ ಸಿದ್ದರಾಮೇಶ್ವರ

ಬಾಲ್ಯದಲ್ಲಿ ಮುಗ್ಧಭಕ್ತ. ದನಕಾಯುವ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ. ಸೊನ್ನಲಿಗೆಗೆ ಬಂದು ದೇವಾಲಯ ಸ್ಥಾಪಿಸಿ, ಆ ಆವರಣಕ್ಕೆ ‘ಯೋಗ ರಮಣೀಯ ಕ್ಷೇತ್ರ’ವೆಂದು ಹೆಸರಿಸಿದ. ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ. ಪ್ರಭುದೇವ ಅವನನ್ನು ಕಲ್ಯಾಣಕ್ಕೆ ಕರೆದೋಯ್ದು ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಕೊಡಿಸಿದ. ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ.

ಸಿದ್ಧರಾಮನ ವಚನ ಸಾಹಿತ್ಯ

ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಈತನ ಜೀವನ ಜರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರಿಯುತ್ತವೆ. ಸಿದ್ಧರಾಮ ವಚನ, ಸ್ವರವಚನ, ಬಸವಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾನೆ. ವಚನ ಮತ್ತು ಸ್ವರವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ ‘ಯೋಗಿನಾಥ’ ಅಂಕಿತವಿದೆ. ಸದ್ಯ ಈತನ ೧೧೬೨ ವಚನಗಳು ದೊರೆತಿದ್ದು ಅವುಗಳಲ್ಲಿ ವೈಯುಕ್ತಿಕ ಬದುಕಿನ ಸಂಗತಿಗಳು ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ.

ಸಿದ್ದರಾಮೇಶ್ವರನ ಪ್ರಮುಖ ವಚನಗಳು

  • ಬಸವಣ್ಣನೇ ತಾಯಿ
    ಬಸವಣ್ಣನೇ ತಂದೆ
    ಬಸವಣ್ಣನೇ ಪರಮ ಬಂಧುವೆನಗೆ
    ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
    ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ.
  • ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ, ಲಿಂಗವಾಗಿ ಬಂದೆನ್ನ ಮನದ ಮಲಿನವ ಕಳೆದಿರಿ,
    ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ.
    ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ
    ಪ್ರಸಾದವ ನೀಡಿಸಲಹಿದ ಕಪಿಲಸಿದ್ದಮಲ್ಲಿಕಾರ್ಜುನ
    ಇನ್ನೆನಗತಿಶಯವೇನೂ ಇಲ್ಲ.
  • ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
    ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
    ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
    ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
    ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;
    ಹೆಣ್ಣು ಪ್ರತ್ಯಕ್ಷ ಕಪಿಲಸಿದ್ದಮಲ್ಲಿಕಾರ್ಜುನ ನೋಡಾ!
  • ಹಸಿವುದೋರದ ಮುನ್ನ, ತೃಷೆದೋರದ ಮುನ್ನ
    ವ್ಯಾಧಿ ವಿಪತ್ತುಗಳು ಬಂದಡರದ ಮುನ್ನ
    ಕಪಿಲಸಿದ್ದ ಮಲ್ಲಿಕಾರ್ಜುನ ಲಿಂಗವ ಪೂಜಿಸೋ ಮುನ್ನ ಮುನ್ನ,
  • ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ
    ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯಾ
    ಮೃಡನೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗ
    ನುಡಿಯ ಬ್ರಹ್ಮಂಗಳಿಂದಪ್ಪುದೇನೊ
  • ನುಡಿಯಬಹುದು ಅದ್ವೈತವನೊಂದು ಕೋಟಿ ವೇಳೆ
    ಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಭಕ್ತಿ ಸದಾಚಾರವ
    ನುಡಿದಂತೆ ನಡೆವ ನಡೆದಂತೆ ನುಡಿವ
    ಸದ್ಭಕ್ತಿ ಸದಾಚಾರಯುಕ್ತರ ಮಹಾತ್ಮರ
    ಪಾದವ ಹಿಡಿದು ಬದುಕಿಸಯ್ಯಾ ಪ್ರಭುವೆ
    ಕಪಿಲಸಿದ್ಧ ಮಲ್ಲಿಕಾರ್ಜುನಾ,

FAQ

ಸಿದ್ದರಾಮೇಶ್ವರನ ಅಂಕಿತನಾಮವನ್ನು ತಿಳಿಸಿ ?

ಕಪಿಲಸಿದ್ಧ ಮಲ್ಲಿಕಾರ್ಜುನಾ

ಸಿದ್ದರಾಮೇಶ್ವರ ಎಷ್ಟನೆ ಶತಮಾನದ ಪ್ರಸಿದ್ಧ ವಚನಕಾರರು ?

ಸಿದ್ಧರಾಮ ೧೨ನೇ ಶತಮಾನದಲ್ಲಿ ಸೊನ್ನಲಿಗೆಯಲ್ಲಿದ್ದ ಪ್ರಸಿದ್ಧ ವಚನಕಾರ.

ಇತರೆ ವಿಷಯಗಳು :

ಹೊಸ ಶಿಕ್ಷಣ ನೀತಿ ಪ್ರಬಂಧ 

ಶಿಕ್ಷಣ ಕೌಶಲ್ಯ ಅಭಿವೃದ್ಧಿ ಪ್ರಾಮುಖ್ಯತೆ ಪ್ರಬಂಧ

LEAVE A REPLY

Please enter your comment!
Please enter your name here