ಅಶೋಕನ ಜೀವನ ಚರಿತ್ರೆ | Biography of Ashoka in Kannada

0
1438
ಅಶೋಕನ ಜೀವನ ಚರಿತ್ರೆ | Biography of Ashoka in Kannada
ಅಶೋಕನ ಜೀವನ ಚರಿತ್ರೆ | Biography of Ashoka in Kannada

ಅಶೋಕನ ಜೀವನ ಚರಿತ್ರೆ Biography of Ashoka Ashoka Jeevana Charitre information in Kannada


Contents

ಅಶೋಕನ ಜೀವನ ಚರಿತ್ರೆ

Biography of Ashoka in Kannada

ಈ ಲೇಖನಿಯಲ್ಲಿ ಅಶೋಕನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಆರಂಭಿಕ ಜೀವನ

ಅತ್ಯುತ್ತಮ ಯೋಧನಾಗಿಯೂ, ಚಾಣಾಕ್ಷ ರಾಜನೀತಿಜ್ಙನಾಗಿಯೂ ಬೆಳೆದ ಅಶೋಕನು ಮೌರ್ಯ ಸೇನೆಯ ಅನೇಕ ತುಕಡಿಗಳ ನಾಯಕತ್ವ ವಹಿಸಿದ. ರಾಜ್ಯಾದ್ಯಂತ ಬೆಳೆಯುತ್ತಿದ್ದ ಅಶೋಕನ ಜನಪ್ರಿಯತೆಯನ್ನು ಕಂಡು ಕರುಬಿದ ಅವನ ಅಣ್ಣಂದಿರು, ಬಿಂದುಸಾರನು ತನ್ನ ನಂತರದ ರಾಜನಾಗಿ ಅಶೋಕನನ್ನೇ ಚುನಾಯಿಸಬಹುದು ಎಂಬ ಆತಂಕಕ್ಕೊಳಗಾದರು. ಅವರೆಲ್ಲರಿಗೂ ಹಿರಿಯನಾಗಿ, ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿದ್ದ, ರಾಜಕುಮಾರ ಸುಸೀಮನು, ತನ್ನ ರಾಜ್ಯಪಾಲಿಕೆಯ ಅಧೀನದಲ್ಲಿದ್ದ ಸಿಂಧ್ ಪ್ರಾಂತದ ತಕ್ಷಶಿಲೆಯಲ್ಲಿ ತಲೆಯೆತ್ತಿದ್ದ ರಾಜವಿರೋಧೀ ಪ್ರತಿಭಟನೆಯನ್ನು ಹತ್ತಿಕ್ಕಲು ಅಶೋಕನನ್ನು ಕಳುಹಿಸುವಂತೆ ಬಿಂದುಸಾರನ ಮನವೊಲಿಸಿದನು. ಸುಸೀಮನ ದುರಾಡಳಿತದಿಂದಲೂ, ಅಲ್ಲಿಯ ಇಂಡೋ-ಗ್ರೀಕ್ ಬುಡಕಟ್ಟಿನ ಜನರ ಯುದ್ಧಪ್ರೇಮಿ ಪ್ರವೃತ್ತಿಯಿಂದಲೂ, ತಕ್ಷಶಿಲೆ ಪ್ರಕ್ಷುಬ್ದವಾಗಿತ್ತು. ಇದರಿಂದ ಅನೇಕ ಬಂಡುಕೋರ ಗುಂಪುಗಳ ಸೃಷ್ಟಿಯಾಗಿ, ಅರಾಜಕತೆ ಬೇರುಬಿಡುತ್ತಿತ್ತು. ತಂದೆಯ ಆಜ್ಙೆಯನ್ನು ಪಾಲಿಸಿ, ಅಶೋಕ ತಕ್ಷಶಿಲೆಗೆ ಪಯಣ ಬೆಳೆಸಿದ. ಅಶೋಕನ ಆಗಮನದ ಸುದ್ದಿ ಹರಡುತ್ತಿದ್ದಂತೆ, ಬಂಡುಕೋರರು ಅವನನ್ನು ಸ್ವಾಗತಮಾಡಿದ್ದರಿಂದ, ಪ್ರತಿಭಟನೆಯು ಶಾಂತಿಯುತವಾಗಿ ಅಂತ್ಯವಾಯಿತು. (ಇದೇ ಪ್ರಾಂತ ಮುಂದೆ, ಅಶೋಕನ ಆಳ್ವಿಕೆಯ ಕಾಲದಲ್ಲಿ, ಮತ್ತೆ ಬಂಡೆದ್ದಿತು. ಆದರೆ ಈ ಬಾರಿ ಅದನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು.)

ಅಶೋಕನ ಯಶಸ್ಸಿನಲ್ಲಿ ಮುಂದೆ ಚಕ್ರವರ್ತಿಯಾಗುವ ಮಹತ್ವಾಕಾಂಕ್ಷೆಯನ್ನು ಕಂಡ ಅವನ ಮಲ-ಸೋದರರು ಮತ್ತಷ್ಟುಅಸ್ವಸ್ಥರಾದರು. ಸುಸೀಮನ ಇನ್ನಷ್ಟು ಚಿತಾವಣೆಯಿಂದ, ಬಿಂದುಸಾರ, ಅಶೋಕನನ್ನು ರಾಜ್ಯಬಿಟ್ಟು ತೊಲಗಲು ಆದೇಶಿಸಿದ. ಅದರಂತೆ, ಕಳಿಂಗಕ್ಕೆ ಹೋಗಿ ಅಜ್ಙಾತವಾಗಿ ನೆಲೆಸಿದ ಅಶೋಕ. ಅಲ್ಲಿ ಪರಿಚಯವಾದ ಕೌರ್ವಾಕಿ ಎಂಬ ಬೆಸ್ತರ ಹೆಂಗಸಿನ ಪ್ರೇಮದಲ್ಲಿ ಸಿಲುಕಿದ. ಈಚೆಗೆ ಸಿಕ್ಕಿದ ಶಾಸನಗಳ ಪ್ರಕಾರ, ಆಕೆ ದ್ವಿತೀಯ ಅಥವಾ ತೃತೀಯ ರಾಣಿಯಾದಳು.

ಕಳಿಂಗ ಯುದ್ಧ

ಕಳಿಂಗ ಯುದ್ಧವು ಕ್ರಿ.ಪೂ. 261 ರಲ್ಲಿ ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನಿಗೂ ಕಳಿಂಗ ದೇಶದ ರಾಜ ಶುದ್ಧಧರ್ಮನಿಗು ನಡೆದ ಯುದ್ಧ. ಇದು ಸಾಮ್ರಾಟ್ ಅಶೋಕನ ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ನಡೆದ ಗಮನಾರ್ಹವಾದ ಘಟನೆ. ಅಶೋಕನ ಏಕೈಕ ಪ್ರಮುಖ ಯುದ್ಧವಾದ ಈ ಯುದ್ದ, ಅಪಾರ ಸಾವು ನೋವುಗಳಿಗೆ ಕಾರಣವಾಗಿ ಇತಿಹಾಸದಲ್ಲಿಯೇ ಅತ್ಯಂತ ಘೋರವಾದ ಯುದ್ಧಗಳಲ್ಲಿ ಒಂದಾಗಿದೆ. ಅಶೋಕನು ರ್ಕಿ.ಪೂ.೨೬೧ರಲ್ಲಿ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು. ಅಶೋಕನ ೧೩ನೇ ಶಿಲಾಶಾಸನದ ಆಧಾರದ ಮೇಲೆ ಕಳಿಂಗ ರಾಜ್ಯ ಸ್ವತಂತ್ರ್ಯವಾಗಿತ್ತು, ಮೌರ್ಯ ಸಾಮ್ರಾಜ್ಯಕ್ಕೆ ಸೇರಿರಲಿಲ್ಲಾ ಎಂಬುದಾಗಿ ತಿಳಿದು ಬರುತ್ತದೆ. ಕಳಿಂಗದ ಯೋಧರು ತಮ್ಮ ಸ್ವಾತಂತ್ರ್ಯವನ್ನು ಮೌರ್ಯರ ಆಕ್ರಮಣದಿಂದ ಕಾಡಿಕೊಳ್ಳಲು ವೀರಾವೇಶದಿಂದ ಹೋರಾಡಿದರೂ, ಅಂತಿಮವಾಗಿ ಸಂಖ್ಯೇಯಲ್ಲಿ ಮೀರಿದ್ದ ಅಶೋಕನ ಸೈನ್ಯವೇ ಯುದ್ಧವನ್ನು ಗೆದ್ದಿತು. ಈ ಯುದ್ಧದ ಅಪಾರ ರಕ್ತಪಾತವು ಅಶೋಕನ ಮನಃಪರಿವರ್ತನೆಗೆ ಕಾರಣವಾಗಿ ಅವನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿ ಮುಂದೆ ಅಹಿಂಸೆಯ ಹಾದಿಯಲ್ಲಿ ಸಾಗುವಂತೆ ಮಾಡಿತು.

ಹಿನ್ನಲೆ

ಅಶೋಕನ ಆಕ್ರಮಣದ ಮುಂಚಿನ ಕಳಿಂಗ ಮತ್ತು ಮೌರ್ಯ ಸಾಮ್ರಾಜ್ಯ ಕಳಿಂಗದ ಆಕ್ರಮಣ ರಾಜಕೀಯ ಮತ್ತು ಆರ್ಥಿಕ ಎರಡೂ ಕಾರಣಗಳಿವೆ. ಕಳಿಂಗ ರಾಜ್ಯವು ಪ್ರಸಿದ್ಧ ಮತ್ತು ಶ್ರೀಮಂತ ಪ್ರದೇಶವಾಗಿತ್ತು. ಅದು ಕಲೆಗಳಲ್ಲಿ ನುರಿತ ಜನತೆಯನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತದೆ. ಕಳಿಂಗದ ಜನರು ಕಡಲಿನಾಚೆಯ ದೇಶಗಳೊಂದಿಗೆ ವ್ಯಾಪಾರ ಮಾಡಿದವರಲ್ಲಿ ಭಾರತದಲ್ಲಿಯೇ ಮೊದಲನೆಯವರು. ಅಲ್ಲಿನ ಜನತೆ ಮುಕ್ತವಾದ ಸಂಸ್ಕೃತಿ ಮತ್ತು ಸಮಾನ ನಾಗರಿಕ ಸಂಹಿತೆ ಪಾಲಿಸುತ್ತಿದ್ದರು. ಅಶೋಕನ ತಂದೆ ಬಿಂದುಸಾರನ ಕಾಲದಿಂದಲೂ ಮಗಧ ಮೂಲದ ಮೌರ್ಯ ಸಾಮ್ರಾಜ್ಯವು ಪ್ರಾಂತೀಯ ವಿಸ್ತರಣೆ ನೀತಿ ಅನುಸರಿಸುತ್ತಿತ್ತು. ನಂದರ ಕಾಲದಲ್ಲಿ ಮಗಧದ ಅಧೀನದಲ್ಲಿದ್ದ ಕಳಿಂಗ ಪ್ರದೇಶವು ಮೌರ್ಯರ ಆಳ್ವಿಕೆಯ ಆರಂಭದಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು. ಮಗಧದ ಸಾಮ್ರಾಟರಿಗೆ ಇದು ಒಂದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿತ್ತು. ಇದು ಮೌರ್ಯರು ತಮ್ಮ ರಾಜಕೀಯ ಪ್ರತಿಷ್ಠೆಗೆ ಧಕ್ಕೆಯೆಂದು ಪರಿಗಣಿಸಿದರು. ಅವರಿಗೆ ಕಳಿಂಗದ ಪರಾಧೀನ ಪೂರ್ಣಗೊಳಿಸುವುದು ಕಡ್ಡಾಯವಾಗಿ ತೋರಿತು. ಹೀಗಾಗಿ ಅಶೋಕನು ತನ್ನ ಸಿಂಹಾಸನ ಭದ್ರ ಪಡಿಸಿದ ನಂತರ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು.

ಯುಧ್ಧ

ಕಳಿಂಗದ ಯುದ್ಧಭೂಮಿ ಎಂದು ಹೇಳಲಾಗುವ ದಯಾ ನದಿಯ ತೀರದ ಒಂದು ನೋಟ. ಈ ಯುದ್ಧವು ಅಶೋಕನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸುಮಾರು ಕ್ರಿ.ಪೂ. ೨೬೧ರಲ್ಲಿ ಜರುಗಿತು. ಈ ಹಿಂದೆ ಅಶೋಕನ ತಾತನಾದ ಚಂದ್ರಗುಪ್ತ ಮೌರ್ಯನು ಕಳಿಂಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ಅವನನ್ನು ಹಿಮ್ಮೆಟ್ಟಿಸಲಾಗಿತ್ತು. ಅಶೋಕನಿಗೂ ಕೇವಲ ಒಂದು ಘೋರ ಯುದ್ಧದ ನಂತರವೇ ವಿಜಯ ದೊರೆಯಿತು.

ಅಶೋಕನದ್ದು ೪ ಲಕ್ಷ ಯೋಧರ ಸೇನೆಯಾದರೆ, ಕಳಿಂಗ ದೇಶದಲ್ಲಿ ೬೦,೦೦೦ ಪದಾತಿಗಳು, ೧೦,೦೦೦ ಅಶ್ವದಳ ಹಾಗು ೭೦೦ ಗಜಸೇನೆಗಳಿತ್ತು.ಈ ಸಮರದಲ್ಲಿ ಸುಮಾರು ೧,೫೦,೦೦೦ ಕಳಿಂಗದ ಯೋಧರು ಹಾಗೂ ೧,೦೦,೦೦೦ ಅಶೋಕನ ಯೋಧರು ಸಾವನ್ನಪ್ಪಿದರು. ಇದರ ಪರಿಣಾಮವಾಗಿ ಯುದ್ಧ ಭೂಮಿಯ ಸಮೀಪದಲ್ಲಿ ಹರಿಯುವ ದಯಾ ನದಿಯ ಬಣ್ಣ ಸಾವಿಗೀಡದವರ ರಕ್ತದಿಂದ ಕೆಂಪಾಗಿ ಮಾರ್ಪಟ್ಟಿತು ಎಂದು ಹೇಳಲಾಗುತ್ತದೆ.

ಪರಿಣಾಮ

ಯುದ್ಧದ ನಂತರ ಸಂಪೂರ್ಣ ಕಳಿಂಗವನ್ನು ಸಂಪೂರ್ಣ ಲೂಟಿ ಮತ್ತು ನಾಶ ಮಾಡಲಾಯಿತು. ಯುದ್ಧವು ಸುಮಾರು ೧ ಲಕ್ಷ ಜನರ ಸಾವು ಮತ್ತು ಒಂದೂವರೆ ಲಕ್ಷ ಜನರ ಗಡಿಪಾರಾಗಲು ಕಾರಣವಾಯಿತು. ಈ ಕ್ರೌರ್ಯದಿಂದ ನೊಂದ ಅಶೋಕನು ಯುದ್ಧದ ಬಗೆಗಿನ ತನ್ನ ನಿಲುವನ್ನು ಬದಲಾಯಿಸಿ ಮುಂದೆಂದೂ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧವನ್ನು ಮಾಡದಿರಲು ಪಣ ತೊಟ್ಟನು. ನಂತರ ಬೌದ್ಧಧರ್ಮ ಸ್ವೀಕರಿಸಿ ತನ್ನ ಅಧಿಕಾರವನ್ನೆಲ್ಲ ಈ ಹೊಸಧರ್ಮದ ಪ್ರಚಾರಕ್ಕಾಗಿ ಬಳಸಿದನು.

ಕಳಿಂಗ ಯುದ್ಧದ ಬಗೆಗಿನ ಅಶೋಕನ ಪ್ರತಿಕ್ರಿಯೆಯನ್ನು ಅವನ ಹದಿಮೂರನೆ ಶಾಸನದಲ್ಲಿ ದಾಖಲಿಸಲಾಗಿದೆ. ಕಳಿಂಗವನ್ನು ವಶಪಡಿಸಿದ ನಂತರ ಅಶೋಕನು ಸೇನಾ ವಿಸ್ತರಣೆಯನ್ನು ನಿಲ್ಲಿಸಿ, ಮುಂದಿನ ೪೦ ವರ್ಷಗಳಿಗೂ ಹೆಚ್ಚು ಕಾಲ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯಿಂದ ತನ್ನ ಸಾಮ್ರಾಜ್ಯವನ್ನು ಆಳಿದನು.

ಶಿಲಾ ಶಾಸನ ೧೩ “ದೇವರುಗಳಿಗೆ ಪ್ರಿಯನಾದ, ರಾಜ ಪ್ರಿದರ್ಶಿ, ಕಳಿಂಗ ದೇಶವನ್ನು ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ವಶಪಡಿಸಿದನು. ಸುಮಾರು ಒಂದೂವರೆ ಲಕ್ಷ ಜನರ ಗಡಿಪಾರಾದರು, ೧ ಲಕ್ಷಕ್ಕು ಹೆಚ್ಚು ಜನರು ಸಾವನ್ನಪಿದರು (ನಾನಾ ಕಾರಣಗಳಿಂದ). ಕಳಿಂಗರನ್ನು ವಶಪಡಿಸಿಕೊಂಡ ನಂತರ ದೇವರುಗಳಿಗೆ ಪ್ರಿಯನಾದವನು, ತನ್ನಲ್ಲಿ ಧರ್ಮದೆಡೆಗೆ, ಧರ್ಮದ ಪ್ರೇಮದೆಡೆಗೆ ಮತ್ತು ಧರ್ಮದಲ್ಲಿ ಪಾಠದೆಡೆಗೆ ಬಲವಾದ ಓರೆಯನ್ನು ಕಂಡನು. ಈಗ ದೇವರುಗಳಿಗೆ ಪ್ರಿಯನಾದವನು ಕಳಿಂಗವನ್ನು ವಶಪಡಿಸಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪ ಪಡುತ್ತಿದ್ದಾನೆ.

ಬೌದ್ಧಧರ್ಮಕ್ಕೆ ಶರಣು

  • ಯುದ್ಧದ ನಂತರ ಒಂದುದಿನ ಅಶೋಕನು ನಗರಪ್ರದಕ್ಷಿಣೆಗೆಂದು ಹೊರಟು ಎಲ್ಲೆಲ್ಲೂ ಸುಟ್ಟುಹೋದ ಮನೆಗಳನ್ನು ಚಲ್ಲಾಪಿಲ್ಲಿಯಾಗಿ ಬಿದ್ದ ಹೆಣಗಳನ್ನು ನೋಡಿದನು. ಇದರಿಂದ ಅವನ ಮನಸ್ಸು ಅಸ್ವಸ್ಥವಾಯಿತು. “ನಾನೇನು ಮಾಡಿ ಬಿಟ್ಟೆ ?” ಎಂದು ಉದ್ಗಾರ ತೆಗೆದು ಕಣ್ಣೀರಿಟ್ಟನು. ಗೆಲುವಿನಲ್ಲಿನ ಈ ಕ್ರೌರ್ಯವು ಅವನ್ನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿತು. ಅವನು ತನ್ನ ಅಧಿಕಾರವನ್ನೆಲ್ಲ ಈ ಹೊಸಧರ್ಮವನ್ನು ರೋಂ, ಇಜಿಪ್ಟ್ ಗಳಷ್ಟು ದೂರ ದೂರಕ್ಕೆ ಪ್ರಚಾರಮಾಡಲು ಬಳಸಿದನು.
  • ಅಶೋಕನು ಬೌದ್ಧಧರ್ಮಕ್ಕೆ ಒಲಿಯಲು ಇನ್ನೊಂದು ಕಾರಣವಿತ್ತು. ಅಶೋಕನು ಗಲ್ಲಿಗೇರಿಸಿದ ಸೋದರರಲ್ಲೊಬ್ಬನ್ನನ್ನು ಮದುವೆಯಾಗಿದ್ದ ಮೌರ್ಯ ರಾಜಕುಮಾರಿಯೊಬ್ಬಳು ತನ್ನ ಗರ್ಭಸ್ಥ ಶಿಶುವಿನ ಜೀವವನ್ನು ಉಳಿಸುವದಕ್ಕೋಸ್ಕರ ಒಬ್ಬ ದಾಸಿಯೊಂದಿಗೆ ತನ್ನ ಅರಮನೆಯನ್ನು ಬಿಟ್ಟು ಓಡಿ ಹೋದಳು. ಸಾಕಷ್ಟು ದೂರ ಪ್ರಯಾಣದ ನಂತರ ಗರ್ಭಿಣಿ ರಾಜಕುಮಾರಿಯು ಅರಣ್ಯದಲ್ಲಿ ಒಂದು ಮರದ ಕೆಳಗೆ ಕುಸಿದಳು.
  • ದಾಸಿಯು ಸಹಾಯಕ್ಕೆ ವೈದ್ಯನನ್ನೋ ಪೂಜಾರಿಯನ್ನೋ ಕರೆತರಲು ಹತ್ತಿರದ ಒಂದು ಆಶ್ರಮಕ್ಕೆ ಹೋದಳು. ಅಷ್ಟರಲ್ಲಿ ಆ ಮರದ ಕೆಳಗೆ ರಾಜಕುಮಾರಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಆಶ್ರಮದ ಬ್ರಾಹ್ಮಣರು ರಾಜಕುಮಾರನನ್ನು ಬೆಳೆಸಿ ವಿದ್ಯೆಯನ್ನು ಕಲಿಸಿದರು. ನಂತರ ಅವನಿಗೆ ಹದಿಮೂರು ವರ್ಷಗಳಾದಾಗ ಅಶೋಕನ ಕಣ್ಣಿಗೆ ಬಿದ್ದನು. ಅಷ್ಟು ಎಳೆಯ ಬಾಲಕನು ಮುನಿಯ ವೇಷದಲ್ಲಿರುವದನ್ನು ನೋಡಿ ಅಶೋಕನಿಗೆ ಆಶ್ಚರ್ಯವಾಯಿತು.
  • ತನ್ನ ಪರಿಚಯವನ್ನು ಆ ಬಾಲಕನು ತಿಳಿಸಿದಾಗ ಅಶೋಕನಿಗೆ ಅಪರಾಧಭಾವನೆ ಉಂಟಾಗಿ, ವಾತ್ಸಲ್ಲ್ಯವುಕ್ಕಿ ಆ ಬಾಲಕನನ್ನೂ ಅವನ ತಾಯಿಯನ್ನೂ ಅರಮನೆಗೆ ತೆಗೆದುಕೊಂಡು ಹೋದನು. ಬೌದ್ಧಳಾದ ರಾಣಿ ದೇವಿ, ಇದೇ ವೇಳೆಯಲ್ಲಿ, ತನ್ನ ಮಕ್ಕಳನ್ನು ಬೌದ್ಧಧರ್ಮದವರನ್ನಾಗಿ ಯೇ ಬೆಳೆಸುತ್ತಿದ್ದಳು. ಕಳಿಂಗದಲ್ಲಿ ಅಶೋಕನ ಕ್ರೌರ್ಯವನ್ನು ನೋಡಿ ಆಕೆ ಬಹುಶಃ ಅವನನ್ನು ತೊರೆದಳು.
  • ಇದರಿಂದ ದುಃಖಗೊಂಡ ಅಶೋಕನನ್ನು ಅವನ ಸೋದರನ ಮಗ (ಆಶ್ರಮದಲ್ಲಿ ಬೆಳೆದು,ರಾಜಪುತ್ರ ಎನ್ನುವುದಕ್ಕಿಂತ ಸನ್ಯಾಸಿಯೋ ಎಂಬಂತಿದ್ದ )ಅವನನ್ನು ಸಮಾಧಾನಿಸಿ, ಬೌದ್ಧ ಧರ್ಮವನ್ನು ಸೇರುವಂತೆಯೂ, ಯುದ್ಧದಿಂದ ಹಿಂದೆ ಸರಿಯುವಂತೆಯೂ ಪ್ರೇರೇಪಿಸಿದ. ರಾಣಿ ದೇವಿಯ ಮಕ್ಕಳಾದ ರಾಜಕುಮಾರ ಮಹೀಂದ್ರ ಮತ್ತು ಕುಮಾರಿ ಸಂಘಮಿತ್ರರು, ರಕ್ತಪಾತ ಮತ್ತು ಹಿಂಸೆಯನ್ನು ದ್ವೇಷಿಸುತ್ತಿದ್ದರೂ,ರಾಜವಂಶೀಯರಾದ ಕಾರಣ ,ಅವು ತಮ್ಮ ಜೀವನದ ಅನಿವಾರ್ಯ ಅಂಗ ಎಂದು ಅರಿತಿದ್ದರು.
  • ಹಾಗಾಗಿ ತಾವು ಬುದ್ಧ ಭಿಕ್ಷುಗಳಾಗುತ್ತೇವೆ ಎಂಬ ಅವರ ಕೋರಿಕೆಯನ್ನು ಅಶೋಕ ಇಷ್ಟವಿಲ್ಲದಿದ್ದರೂ ಒಪ್ಪಿದನು. ಈ ಅಣ್ಣ ತಂಗಿಯರು ಸಿಲೋನಿನಲ್ಲಿ (ಈಗಿನ ಶ್ರೀಲಂಕಾ)ದಲ್ಲಿ ಬೌದ್ಧಧರ್ಮವನ್ನು ಸ್ಥಾಪಿಸಿದರು. ಆಗಿನಿಂದ, ‘ಮಹಾಕ್ರೂರಿ’ (ಚಂಡಾಶೋಕ) ಎಂದು ಕುಖ್ಯಾತಿ ಗಳಿಸಿದ್ದ ಅಶೋಕ ‘ಧರ್ಮಿಷ್ಠ’ (ಧರ್ಮಾಶೋಕ) ಎಂಬ ಹೆಸರು ಗಳಿಸಲಾರಂಭಿಸಿದ. ಅವನು ಬೌದ್ಧಧರ್ಮದ ವಿಭಜ್ಜವಾದವನ್ನು ಪ್ರಚುರಪಡಿಸಿದನು.

ಬೌದ್ಧಧರ್ಮ ಪ್ರಸಾರ

ತನ್ನ ದೇಶದಲ್ಲೂ ವಿದೇಶಗಳಲ್ಲೂ ಕ್ರಿ.ಪೂ. ೨೫೦ರ ಸುಮಾರಿಗೆ ಪ್ರಚಾರ ಮಾಡಿದನು. ಬೌದ್ಧ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಗಂಭೀರ ಪ್ರಯತ್ನವನ್ನು ಮಾಡಿದ ಕೀರ್ತಿಯು ಚಕ್ರವರ್ತಿ ಅಶೋಕನಿಗೆ ನಿಸ್ಸಂಶಯವಾಗಿ ಸಲ್ಲಬೇಕು. ಅಶೋಕ ಚಕ್ರವರ್ತಿಯು ಬೌದ್ಧಧರ್ಮದ ಅನುಯಾಯಿಗಳಿಗಾಗಿ ಸಾವಿರಾರು ಸ್ತೂಪಗಳನ್ನೂ, ವಿಹಾರಗಳನ್ನೂ ಕಟ್ಟಿಸಿದನು. ಜಗತ್ಪ್ರಸಿದ್ಧ ಬಿಹಾರದ ಸಾಂಚಿಯ ಸ್ತೂಪದ ಮೊದಲನೆಯ ಸ್ತೂಪವನ್ನು ಕಟ್ಟಿಸಿದವನೂ ಅವನೇ.
ತನ್ನ ರಾಜ್ಯಭಾರದ ಉಳಿದ ಅವಧಿಯಲ್ಲಿ ಅಹಿಂಸೆಯನ್ನು ಅಧಿಕೃತ ಧೋರಣೆಯನ್ನಾಗಿ ಮಾಡಿದನು. ಅನಾವಶ್ಯಕ ಪ್ರಾಣಿವಧೆ ಮತ್ತು ಹಿಂಸೆಯನ್ನು ತಕ್ಷಣದಿಂದಲೇ ರದ್ದು ಮಾಡಿದನು. ಮೃಗಯಾ ವಿನೋದವನ್ನು ಮತ್ತು ಪ್ರಾಣಿಗಳಿಗೆ ಬರೆ ಹಾಕುವದನ್ನು ನಿಷೇಧಿಸಿ ವನ್ಯಜೀವಿಗಳನ್ನು ರಕ್ಷಿಸಿದನು. ಆಹಾರದ ಮಟ್ಟಿಗೆ ಸೀಮಿತವಾದ ಬೇಟೆಯಾಡುವುದನ್ನು ಅವನು ಒಪ್ಪಿದರೂ , ಶಾಖಾಹಾರದ ಪರಿಕಲ್ಪನೆಯನ್ನೂ ಪ್ರೋತ್ಸಾಹಿಸಿದನು.
ಪ್ರಯಾಣಿಕರಿಗೆ, ತೀರ್ಥಯಾತ್ರಿಗಳಿಗೆಂದು, ರಾಜ್ಯಾದ್ಯಂತ ವಿಶಾಲವಾದ ಉಚಿತ ತಂಗುದಾಣಗಳನ್ನು ಕಟ್ಟಿಸಿದನು. ಸೆರೆಯಾಳುಗಳ ಮೇಲೂ ದಯೆ ತೋರಿ, ವರ್ಷದಲ್ಲಿ ಒಂದು ದಿನ ಅವರಿಗೆ ಹೊರಹೋಗುವ ಅವಕಾಶ ಕೊಟ್ಟನು. ಅವನು ಸಾಮಾನ್ಯ ಜನರ ಆಶೋತ್ತರಗಳನ್ನು ಹೆಚ್ಚಿಸಲು ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯಗಳನ್ನೂ ವ್ಯಾಪಾರ ಮತ್ತು ಕೃಷಿ ಉದ್ದೇಶಗಳಿಗಾಗಿ ಜಲಸಂಚಾರ ಮತ್ತು ನೀರಾವರಿ ವ್ಯವಸ್ಥೆಗಳನ್ನೂ ಏರ್ಪಡಿಸಿದನು.
ಅವನು ತನ್ನ ಪ್ರಜೆಗಳನ್ನು ಅವರ ರಾಜಕೀಯ, ಧರ್ಮ ,ಜಾತಿಗಳೇನೇ ಇದ್ದರೂ ಸಮಾನವಾಗಿ ಪರಿಗಣಿಸಿದನು. ಸುಲಭವಾಗಿ ವಶಪಡಿಸಿಕೊಳ್ಳಬಹುದಾಗಿದ್ದ ತನ್ನ ಸುತ್ತಲಿನ ದುರ್ಬಲ ರಾಜ್ಯಗಳನ್ನು ಗೌರವಾನ್ವಿತ ಮಿತ್ರದೇಶಗಳನ್ನಾಗಿ ಮಾಡಿಕೊಂಡನು. ಈ ಎಲ್ಲದರಲ್ಲೂ ಅಶೋಕನು ಆಧುನಿಕ ಕಾಲದ ವಿಶ್ವನಾಯಕರನ್ನು ಮೀರಿಸಿದನು.

ಬೌದ್ಧಧರ್ಮದ ಹೆಸರುನಲ್ಲಿ ಸಮಾಜಸೇವೆ

ಮನುಷ್ಯರಿಗೂ ಪ್ರಾಣಿಗಳಿಗೂ ಆಸ್ಪತ್ರೆಗಳನ್ನು ಕಟ್ಟಿಸಿ, ಭಾರತದಾದ್ಯಂತ ಮುಖ್ಯರಸ್ತೆಗಳನ್ನು ದುರಸ್ತಿಮಾಡಿಸಿ, ಅಶೋಕ ಮನ್ನಣೆಯನ್ನು ಗಳಿಸಿದ್ದಾನೆ. ಧರ್ಮಾಶೋಕನು ಧರ್ಮ (ಪಾಲಿ ಭಾಷೆಯಲ್ಲಿ ಧಮ್ಮ) ವನ್ನು ಈ ಮುಖ್ಯ ಮೌಲ್ಯಗಳ ಮುಖಾಂತರ ವ್ಯಾಖ್ಯಾನಿಸಿದ : ಅಹಿಂಸೆ, ಪರಮತ ಸಹಿಷ್ಣುತೆ, ಮಾತಾಪಿತರಿಗೆ ವಿಧೇಯತೆ, ಬ್ರಾಹ್ಮಣರು ಮತ್ತಿತರ ಧಾರ್ಮಿಕ ಗುರುಗಳು; ಆಚಾರ್ಯರುಗಳಲ್ಲಿ ಗೌರವ, ಮಿತ್ರರಿಗೆ ಔದಾರ್ಯ, ಸೇವಕವರ್ಗದವರೊಂದಿಗೆ ಮಾನವೀಯ ನಡವಳಿಕೆ, ಮತ್ತು ಎಲ್ಲರೊಂದಿಗೂ ಉದಾರಪ್ರವೃತ್ತಿ. ಈ ಮೌಲ್ಯಗಳು ಯಾವುದೇ ಧಾರ್ಮಿಕ ಪಂಥಗಳಿಗೂ ಆಕ್ಷೇಪಾರ್ಹವಾಗಿರಲಿಲ್ಲ. ಕೆಲವು ಟೀಕಾಕಾರರು ಅಶೋಕನಿಗೆ ಇನ್ನೂ ಯುದ್ಧಗಳಾದೀತು ಎಂಬ ಹೆದರಿಕೆಯಿತ್ತು ಎಂದು ಆಭಿಪ್ರಾಯ ಪಟ್ಟರೂ, ಅವನ ಅಕ್ಕಪಕ್ಕದ ರಾಜ್ಯಗಳು ಯಾವುದೂ, ಸೆಲ್ಯೂಸಿಡ್ ಸಾಮ್ರಾಜ್ಯ ಮತ್ತು ಡಿಯೋಡೋಟಸ್ ಸ್ಥಾಪಿಸಿದ ಗ್ರೀಕೋ-ಬ್ಯಾಕ್ಟ್ರಿಡ್ಗಳನ್ನೂ ಹಿಡಿದು, ಅಶೋಕನ ಸಾಮರ್ಥ್ಯಕ್ಕೆ ಸರಿಸಾಟಿಯಾಗಿರಲಿಲ್ಲ. ಸೆಲ್ಯೂಸಿಡ್ ಸಾಮ್ರಾಜ್ಯದ ಮೊದಲನೆಯ ಆಂಟಿಯೋಕಸ್ ಸೋಟರ್, ಮತ್ತು ಅವನ ಉತ್ತರಾಧಿಕಾರಿ ಎರಡನೆಯ ಆಂಟಿಯೋಕಸ್ ಥಿಯೋಸ್ ,ಹಾಗೂ ಗ್ರೀಕೋ-ಬ್ಯಾಕ್ಟ್ರಿಡ್ ಸಾಮ್ರಾಜ್ಯದ ಒಂದನೆಯ ಡಿಯೋಡೋಟಸ್ ,ಮತ್ತು ಅವನ ಮಗ ಎರಡನೆಯ ಡಿಯೋಡೋಟಸ್, ಇವರೆಲ್ಲರಿಗೂ ಅಶೋಕ ಸಮಕಾಲೀನನಾಗಿದ್ದನು. ಅವನ ಶಾಸನಗಳನ್ನು, ಮತ್ತಿತರ ದಾಖಲೆಗಳನ್ನು ಆಳವಾಗಿ ಪರಿಶೀಲಿಸಿದರೆ, ಅವನಿಗೆ ಹೆಲೆನೀಯ ಜಗತ್ತು ತಿಳಿದಿತ್ತಷ್ಟೇ ಅಲ್ಲ, ಅವನಿಗೆ ಅದರ ಬಗ್ಯೆ ಯಾವುದೇ ಭಯಭೀತಿಯಿರಲಿಲ್ಲ ಎಂದೂ ತಿಳಿಯುತ್ತದೆ. ಸೌಹಾರ್ದ ಸಂಬಂಧಗಳನ್ನು ಪ್ರಸ್ತಾಪಿಸುವ ಅವನ ಶಾಸನಗಳಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಆಂಟಿಯೋಕಸ್ ಮತ್ತು ಈಜಿಪ್ಟಿನ ಮೂರನೆಯ ಟಾಲೆಮಿಯ ಉಲ್ಲೇಖವಿದೆ. ಆದರೆ ಅಶೋಕನ ಪಿತಾಮಹ, ಚಂದ್ರಗುಪ್ತ ಮೌರ್ಯನು ಸೆಲ್ಯೂಸಿಡ್ ಸಾಮ್ರಾಜ್ಯದ ಸ್ಥಾಪಕ ಸೆಲ್ಯೂಕಸ್ ನಿಕೇಟರನನ್ನು ಯುದ್ಧದಲ್ಲಿ ಸೋಲಿಸಿದಾಗಿನ ಕಾಲದಿಂದಲೇ, ಮೌರ್ಯ ಸಾಮ್ರಾಜ್ಯದ ಕೀರ್ತಿ ಎಲ್ಲೆಡೆ ಹಬ್ಬಿತ್ತು ಎಂಬುದನ್ನು ಗಮನದಲ್ಲಿಡಬೇಕು.

ಅಶೋಕ ಸ್ಥಂಭ

ಭಾರತದ ರಾಷ್ಟ್ರ ಲಾಂಛನವಾದ ಅಶೋಕ ಸ್ತಂಭ. ಸಾಮ್ರಾಟ ಅಶೋಕನ ಕಾಲದಲ್ಲಿ ಬೌದ್ಧ ಧರ್ಮದ ಪ್ರಚಾರ (ಕ್ರಿ.ಪೂ. ೨೬೦ – ಕ್ರಿ.ಪೂ. ೨೧೮).
ಸಾರನಾಥದಲ್ಲಿರುವ ಅಶೋಕ ಸ್ಥಂಭ ಅವನ ಅವಶೇಷಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು. sandstoneನಲ್ಲಿ ಕೆತ್ತಲಾಗಿರುವ ಈ ಸ್ಥಂಭವು ಕ್ರಿ.ಪೂ.ಮೂರನೆಯ ಶತಮಾನದಲ್ಲಿ ಸಾಮ್ರಾಟನ ಸಾರನಾಥದ ಭೇಟಿಯನ್ನು ದಾಖಲಿಸುತ್ತದೆ. ಈ ಸ್ಥಂಭದ ಮೇಲಿರುವ ನಾಲ್ಕು ಸಿಂಹಗಳು ಪರಸ್ಪರ ಬೆನ್ನು ಹಾಕಿ ನಿಂತಿರುವ ಪ್ರತಿಮೆಯನ್ನು ಆಧುನಿಕ ಭಾರತದ ರಾಜ ಚಿಹ್ನೆಯಾಗಿ ಸ್ವೀಕರಿಸಲಾಗಿದೆ. ಸಿಂಹವು ಅಶೋಕನ ಚಕ್ರಾಧಿಪತ್ಯ ಹಾಗೂ ಬೌದ್ಧ ಧರ್ಮದೊಡನೆ ಅವನ ಸಂಬಂಧಗಳನ್ನು ಸಂಕೇತಿಸುತ್ತದೆ.
ಇಲ್ಲಿಯವರೆಗೆ ಮೌರ್ಯ ಸಾಮ್ರಾಜ್ಯದ ಬಗ್ಗೆ ಇತಿಹಾಸಕಾರರಿಗೆ ತಿಳಿದಿರುವ ತಥ್ಯಗಳು, ಬಹುತೇಕ, ಈ ಹಳೆಯ ಅವಶೇಷಗಳ ಅಭ್ಯಾಸದಿಂದ ದೊರಕಿದೆ.
ಅಶೋಕನ ಶಾಸನಗಳಲ್ಲಿ ಅವನವೇ ಮಾತುಗಳು ಹೀಗಿವೆ. “ಎಲ್ಲ ಜನರೂ ನನ್ನ ಮಕ್ಕಳು. ನಾನು ಅವರಿಗೆ ತಂದೆಯ ಹಾಗೆ. ಪ್ರತಿ ತಂದೆಯೂ ತನ್ನ ಮಕ್ಕಳ ಅಭಿವೃದ್ಧಿಯನ್ನೂ ಸಂತೋಷವನ್ನೂ ಬಯಸುವ ಹಾಗೆ ನಾನು ಎಲ್ಲ ಜನರೂ ಸದಾ ಸುಖಿಯಾಗಿರಬೇಕೆಂದು ಬಯಸುತ್ತೇನೆ. ” ಎಡ್‍ವರ್ಡ್ ಡಿಕ್ರೂಜನು ಅಶೋಕನ ಧರ್ಮವನ್ನು ” ಒಂದು ಹೊಸ ಸಾಮ್ರಾಜ್ಯದ ಏಕತೆಯ ಸಂಕೇತವಾಗಿಯೂ ಸಾಮ್ರಾಜ್ಯದ ವೈವಿಧ್ಯಮಯ ಬೇರೆ ಬೇರೆ ಘಟಕಗಳನ್ನು ಒಂದುಗೂಡಿಸುವ ಶಕ್ತಿಯಾಗಿಯೂ ” ಅರ್ಥೈಸುತ್ತಾನೆ.

ಅಶೋಕನ ಕೊನೆ ಮತ್ತು ಅವನ ಕೊಡುಗೆಗಳು

ಅಶೋಕ ಸುಮಾರು ನಲವತ್ತು ವರ್ಷ ರಾಜ್ಯವಾಳಿದ. ಅವನ ನಂತರ ಮೌರ್ಯ ಸಾಮ್ರಾಜ್ಯ ಕೇವಲ ಐವತ್ತು ವರ್ಷದಲ್ಲಿ ಕೊನೆಗೊಂಡಿತು. ಅಶೋಕನಿಗೆ ಅನೇಕ ಹೆಂಡಿರು, ಮಕ್ಕಳು ಇದ್ದರೂ, ಅವರ ಹೆಸರುಗಳು ಕಾಲಕ್ರಮೇಣ ಮರೆಯಾಗಿವೆ. ಮಹೇಂದ್ರ ಮತ್ತು ಸಂಘಮಿತ್ರ ಎಂಬ ಅವಳಿಗಳು ಅವನ ನಾಲ್ಕನೆಯ ರಾಣಿ ಉಜ್ಜಯಿನಿಯ ದೇವಿಯ ಮಕ್ಕಳು. ಬೌದ್ಧ ಧರ್ಮವನ್ನು ಆವರೆಗೆ ಗೊತ್ತಿದ್ದ, ಮತ್ತು ಗೊತ್ತಿರದಿದ್ದ, ನಾಡುಗಳಲ್ಲಿ ಪ್ರಚಾರ ಮಾಡುವ ಜವಾಬ್ದಾರಿಯನ್ನು ಅಶೋಕನು ಅವರ ಮೇಲೆ ಹೊರಿಸಿದ್ದನು. ಅವರಿಬ್ಬರೂ ಶ್ರೀಲಂಕಾಕ್ಕೆ ತೆರಳಿ, ಅಲ್ಲಿಯ ರಾಜ, ರಾಣಿ ಮತ್ತು ಪ್ರಜೆಗಳನ್ನು ಬೌದ್ಧರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾದರು. ಅಶೋಕನ ನಂತರದ ರಾಜ್ಯಭಾರವನ್ನು ಅವರು ನೋಡಿಕೊಳ್ಳುವುದು ಅಸ್ವಾಭಾವಿಕವಾಗಿತ್ತು.

FAQ

ಕಳಿಂಗ ಯುದ್ದ ಯಾವಾಗ ನಡೆಯಿತು ?

ಕಳಿಂಗ ಯುದ್ಧವು ಕ್ರಿ.ಪೂ. 261 ರಲ್ಲಿ ನಡೆಯಿತು.

ಯಾವ ಯುದ್ದದ ಪ್ರಭಾವದಿಂದಾಗಿ ಅಶೋಕನು ಭೌದ್ಧಧರ್ಮವನ್ನು ಸ್ವೀಕರಿಸಿದನು ?

ಕಳಿಂಗ ಯುದ್ದದ ನಂತರ

ಇತರೆ ವಿಷಯಗಳು :

ಸಿದ್ದರಾಮೇಶ್ವರ ಜೀವನ ಚರಿತ್ರೆ

ಇಂದಿರಾ ಗಾಂಧಿ ಜೀವನ ಚರಿತ್ರೆ

LEAVE A REPLY

Please enter your comment!
Please enter your name here