ಭಕ್ತಿ ಪಂಥದ ಬಗ್ಗೆ ಮಾಹಿತಿ | Information About Bhakti Panth in Kannada

0
1093
ಭಕ್ತಿ ಪಂಥದ ಬಗ್ಗೆ ಮಾಹಿತಿ | Information About Bhakti Panth in Kannada
ಭಕ್ತಿ ಪಂಥದ ಬಗ್ಗೆ ಮಾಹಿತಿ | Information About Bhakti Panth in Kannada

ಭಕ್ತಿ ಪಂಥದ ಬಗ್ಗೆ ಮಾಹಿತಿ information about bhakti panth mahiti in kannada


Contents

ಭಕ್ತಿ ಪಂಥದ ಬಗ್ಗೆ ಮಾಹಿತಿ

ಭಕ್ತಿ ಪಂಥದ ಬಗ್ಗೆ ಮಾಹಿತಿ | Information About Bhakti Panth in Kannada
ಭಕ್ತಿ ಪಂಥದ ಬಗ್ಗೆ ಮಾಹಿತಿ | Information About Bhakti Panth in Kannada

ಈ ಲೇಖನಿಯಲ್ಲಿ ಭಕ್ತಿ ಪಂಥದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಭಕ್ತಿ ಪಂಥದ

ಭಕ್ತಿಚಳವಳಿಯ ಬೆಳವಣಿಗೆಯು ಮಧ್ಯಕಾಲೀನ ಭಾರತದ ಒಂದು ಪ್ರಮುಖ ಲಕ್ಷಣವಾಗಿದೆ. ಮುಕ್ತಿ ಕಲ್ಪನೆಯು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳಲ್ಲಿ ಬಹಳ ಪ್ರಮುಖ ಸ್ಥಾನ ಪಡೆದಿದೆ. ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಮುಕ್ತಿಯನ್ನು ಪಡೆಯಲು ವಿವಿಧ ಬಗೆಯ ಅನುಸಂಧಾನಗಳನ್ನು ನಡೆಸಲಾಗಿದೆ. ಇದರ ಪರಿಣಾಮ ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ಯಜ್ಞ ಯಾಗ ಮುಂತಾದ ಧಾರ್ಮಿಕ ಆಚರಣೆಗಳು ಬಹುಮುಖ್ಯ ಮಾರ್ಗಗಳೆಂದು ಹೆಚ್ಚು ಪ್ರಸಿದ್ಧಿಯನ್ನು ಪಡೆದವು. ಇದರಲ್ಲಿ ಭಕ್ತಿಮಾರ್ಗಕ್ಕೆ ವಿಶಷ್ಠ ಸ್ಥಾನವಿದೆ. ವಿವಿಧ ಧರ್ಮ ಸುಧಾರಕರು ಮತ್ತು ದಾರ್ಶನಿಕರು ಉದಾರವಾದ ಭಕ್ತಿಪಂಥವನ್ನು ಪ್ರತಿಪಾದಿಸಿದರು. ಭಕ್ತಿ ಎಂದರೆ ದೇವರಲ್ಲಿ ಭ್ರಾತೃತ್ವದ ಭಾವನೆ ಬೆಳೆಸಲು ಪ್ರಯತ್ನಿಸಿದರು ಮತ್ತು ಸರ್ವಧರ್ಮ ಸಮಾನತೆಯ ತತ್ವವನ್ನು ಪ್ರತಿಪಾದಿಸಿದರು.

ಭಕ್ತಿ ಮಾರ್ಗ, ಸಮಾಜದ ಎಲ್ಲ ಸ್ತರದ ಜನತೆಯನ್ನು ತಲುಪಿ ಹೆಚ್ಚು ಸಮಾಜಮುಖಿಯಾಗುತ್ತಲೇ ಸಾರ್ವತ್ರಿಕಗೊಂಡಿತು. ಈ ಅವಧಿಯಲ್ಲಿ ಸಮಾಜದ ವಿವಿಧ ಸಮುದಾಯಗಳಿಂದ ಬಂದ ಭಕ್ತಿ ಸಂತರು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಭಕ್ತಿ ಪರವಶತೆಯನ್ನು ವ್ಯಕ್ತಪಡಿಸುತ್ತಾ, ಭಕ್ತಿ ಪರಿಕಲ್ಪನೆಯನ್ನು ಹೆಚ್ಚು ಸಮಾಜಮುಖಿಯಾಗಿ ಪರಿಚಯಿಸಿದರು. ಇವರಲ್ಲಿ ಉತ್ತರ ಭಾರತದ ರಮಾನಂದ, ಕಬೀರ, ಗುರುನಾನಕ್‌, ಮೀರಬಾಯಿ, ಚೈತನ್ಯ, ನಾಮದೇವ, ರವಿದಾಸ್‌, ಸೂರ್ ದಾಸ್‌, ಮುಖ್ಯರಾಗಿದ್ದಾರೆ. ಕರ್ನಾಟಕದಲ್ಲಿ ಸಮಾಜದ ವಿವಿಧ ಸ್ತರಗಳಿಂದ ಬಂದ ಪುರಂದರದಾಸ, ಕನಕದಾಸ, ಶಿಶುನಾಳ ಶರೀಫ ಮುಂತಾದ ಅನೇಕ ಭಕ್ತಿಸಂತರನ್ನು ಕಾಣಬಹುದು.

ರಮಾನಂದ

ರಮಾನಂದ ಅಲಹಾಬಾದ್ ನ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ವಾರಣಾಸಿಯಲ್ಲಿ ಹಿಂದೂ ಧಾರ್ಮಿಕ ತತ್ವಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ರಾಮಾನುಜರ ತತ್ವದ ಅನುಯಾಯಿಗಳಾದರು. ಅವರು ಭಕ್ತಿ, ಪ್ರೀತಿಗಳ ಆಧಾರದ ಮೇಲೆ ವೈಷ್ಣವ ಧರ್ಮದ ಶಾಲೆಯೊಂದನ್ನು ಪ್ರಾರಂಭಿಸಿದರು. ಉತ್ತರ ಭಾರತದ ಕೆಲವಡೆ ಸಂಚರಿಸಿ ರಾಮ-ಸೀತೆಯರ ಪೂಜೆಯ ಭಕ್ತಿ ಆರಾಧನ ಸಿದ್ಧಾಂತದ ಪ್ರತ್ಯೇಕ ಪಂಥವನ್ನು ಜನಪ್ರಿಯಗೊಳಿಸಿದರು. ವಾರಣಾಸಿಯು ಅವರ ಕಾರ್ಯಸ್ಥಾನದ ಕೇಂದ್ರವಾಗಿತ್ತು. ಅವರು ಜಾತಿ ಪದ್ಧತಿಯನ್ನು ಖಂಡಿಸಿ ಎಲ್ಲಾ ಜಾತಿಯವರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರು. ಅವರಲ್ಲಿ ಪ್ರಸಿದ್ಧನಾದವನು ಕಬೀರ್.‌ ಅವರು ಹಿಂದಿಯಲ್ಲಿ ಪ್ರವಚನ ನೀಡಿದರು.

ಕಬೀರ್‌ (ಸುಮಾರು ೧೪೪೦-೧೫೧೦)

ಉತ್ತರ ಭಾರತದ ಈ ಕಾಲದ ಮತ್ತೊಬ್ಬ ಪ್ರಸಿದ್ಧ ಸಂತ ಕಬೀರ್‌. ಕಬೀರರು ವಾರಣಾಸಿಯ ʼಜುಲಾಸ್ʼ ಎಂದು ಕೆರೆಯುವ ನೇಕಾರ ಕಸುಬಿನ ಮುಸಲ್ಮಾನ ಕುಟುಂಬದಲ್ಲಿ ಬೆಳೆದರು. ರಮಾನಂದರ ಶಿಷ್ಯರಾಗಿದ್ದ ಇವರು ಹೆಚ್ಚು ಕಾಲವನ್ನು ವಾರಣಾಸಿಯಲ್ಲಿ ಕಳೆದರು. ತಮ್ಮದೇ ಹೊಸ ತತ್ವವನ್ನು ಬೋಧಿಸಲು ಪ್ರಾರಂಭಿಸಿದರು. ಜಾತಿವ್ಯವಸ್ಥೆ ಮತ್ತು ಬಹುಮೂರ್ತಿಗಳ ಪೊಜೆಯನ್ನು ಖಂಡಿಸಿದ ಅವರು ದೇವರು ಒಬ್ಬನೇ, ಹಿಂದೂ ಮತ್ತು ಮುಸಲ್ಮಾನರಿಗೆ ಆ ಒಬ್ಬ ದೇವರೇ ಹೊರತು ಬೇರೆ-ಬೇರೆ ಇಲ್ಲವೆಂದು ಸಾರಿದರು. ಈ ಎರಡು ಮತೀಯರಲ್ಲಿಯೂ ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಯತ್ನಿಸಿದರು. ತಮ್ಮ ಗುರುವಿನಂತೆಯೆ ಇವರೂ ಸಹ ಜನರ ಆಡು ಭಾಷೆಯಾದ ಹಿಂದಿಯಲ್ಲಿಯೆ ಮಾತನಾಡಿ, ಬರೆದು ಹೆಚ್ಚು ಜನರನ್ನು ತಲುಪಿದರು.

ಕಬೀರರು ದೋಹೆಗಳೆಂಬ ಪದ್ಯಗಳನ್ನು ರಚಿಸಿದರು. ಅವುಗಳನ್ನು ಹಿಂದೂ-ಮುಸಲ್ಮಾನರುಗಳು ಉತ್ತರ ಭಾರತದಲ್ಲಿ ಈಗಲೂ ಹಾಡುತ್ತಾರೆ. ಕಬೀರರ ಅನುಯಾಯಿಗಳನ್ನು “ಕಬೀರ್-ಪಂಥಿ”ಗಳೆಂದು ಕರೆಯುತ್ತಾರೆ. ಅಂದರೆ ಕಬೀರ್‌ ಮಾರ್ಗದಲ್ಲಿನ ಪ್ರವಾಸಿಗರು ಎಂದರ್ಥ. ಕಬೀರ್‌ ಜಾತಿ ಮತ್ತು ಧರ್ಮಗಳ ಗಡಿಗಳನ್ನು ದಾಟಿ ಮಾನವೀಯ ನೆಲೆಯಲ್ಲಿ ಬೋಧಿಸಿದರು. ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಕರಾಗಿದ್ದರು.‌

ಚೈತನ್ಯ (ಸುಮಾರು ೧೪೮೬-೧೫೩೩)

ಭಕ್ತಿ ಚಳವಳಿಯ ಪ್ರಸಿದ್ಧ ಸಂತರಲ್ಲಿ ಚೈತನ್ಯ ಒಬ್ಬರು. ಇವರು ಬಂಗಾಳದ ನಾಡಿಯಾದಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ತಮ್ಮ ೨೫ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದು ಶ್ರೀಕೃಷ್ಣ ಪಂಥದ ಅನುಯಾಯಿಗಳಾದರು. ಅನೇಕ ವರ್ಷಗಳ ಕಾಲ ಮಥುರಾ ಮತ್ತು ಬೃಂದಾವನಗಳಲ್ಲಿ ತಂಗಿದ್ದರು. ಶ್ರದ್ಧೆಯಿಂದ ಜಾತಿ ಮೊದಲಾದ ಬೇಧಗಳು ತೊಡೆದು ಹೋಗುತ್ತದೆ ಎಂದೂ, ಭಕ್ತಿಯಿಂದ ಮನುಷ್ಯನು ಪರಿಶುದ್ಧನಾಗುವನೆಂದು ಉಪದೇಶ ನೀಡಿದರು. ಕೃಷ್ಣನ ಆರಾಧನೆಯನ್ನು ಜನಾದರಣೀಯವಾಗುವಂತೆ ಮಾಡಿದರು. ಕೃಷ್ಣನನ್ನು ಕುರಿತು ಅನೇಕ ಭಕ್ತಿಗೀತೆಗಳನ್ನು ರಚಿಸಿದರು. ಇವರು ಜನರಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿ, ಭ್ರಾತೃತ್ವ ಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಅವರ ಆಧ್ಯಾತ್ಮಿಕ ಚಿಂತನೆಯ ಬೋಧನೆಗಳನ್ನು “ಚೈತನ್ಯ ಚರಿತಾಮೃತ” ಎಂಬುದರಲ್ಲಿ ಸಂಗ್ರಹಿಸಲಾಗಿದೆ.

ಗುರುನಾನಕ್‌ (ಸುಮಾರು ೧೪೬೯-೧೫೩೯)

ಈ ಕಾಲದ ಮತ್ತೊಬ್ಬ ಭಕ್ತಿ ಪಂಥದ ಪ್ರತಿಪಾದಕ ಗುರುನಾನಕ್‌ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಗುರುನಾನಕರು ಹಿಂದಿನ ಪಾಕಿಸ್ತಾನದ ʼತಳವಂಡಿʼ ಗ್ರಾಮದಲ್ಲಿ ಜನಿಸಿದರು. ಧೀರ್ಘಕಾಲ ದೇಶ ಪರ್ಯಟನೆ ನಡೆಸಿದ ನಂತರ ರಾವಿ ನದಿ ದಂಡೆಯ ಕರ್ತರಾ ಪುರದಲ್ಲಿ ಭಕ್ತಿಕೇಂದ್ರವನ್ನು ಸ್ಥಾಪಿಸಿದರು. ಅವರ ಅನುಯಾಯಿಗಳು ಎಲ್ಲ ಜಾತಿ ಮತಗಳ ಗಡಿಗಳನ್ನು ಮೀರಿ, ಲಿಂಗ ತಾರತಮ್ಯವಿಲ್ಲದೆ ಸಹಪಂಕ್ತಿ ಭೋಜನ ಮಾಡುತ್ತಿದ್ದರು. ನಾನಕರು ಸಹ ಪಂಕ್ತಿ ಪೋಷಿಸುವ ʼಲಂಗರ್‌ʼ ಎನ್ನುವ ಭೋಜನ ಶಾಲೆ ಆರಂಭಿಸಿದ್ದರು. ಹೀಗೆ ಭಕ್ತಿ ಸಂತರಿಂದ ಕೂಡಿದ ಈ ಪವಿತ್ರ ಸ್ಥಳ ಧರ್ಮಶಾಲೆ ಎಂದು ಹೆಸರಾಯಿತು. ಇದನ್ನು ಈಗ ಗುರುದ್ವಾರ ಎಂದು ಕರೆಯಲಾಗುತ್ತಿದೆ. ದೇವರು ಒಬ್ಬನೇ ಎಂದು ಬೋಧಿಸಿದರಲ್ಲದೇ ಮೂರ್ತಿ ಪೂಜೆಯನ್ನು ಖಂಡಿಸಿದರು. ಸತ್ಕಾರ್ಯ ಮತ್ತು ಪರಿಶುದ್ಧ ಹಾಗೂ ನೀತಿಯುಕ್ತವಾದ ಜೀವನಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ಅವರಿಗೆ ಹಿಂದೂ ಹಾಗೂ ಮುಸಲ್ಮಾನ ಶಿಷ್ಯರುಗಳಿದ್ದರು. ಇವರ ಶಿಷ್ಯರನ್ನು “ಸಿಖ್ಖರು” ಎಂದು ಕರೆಯಲಾಗಿದೆ. ಇವರ ಬೋಧನೆಗಳನ್ನು “ಗುರು ಗ್ರಂಥ ಸಾಹಿಬ್”ನಲ್ಲಿ ಸಂಗ್ರಹಿಲಾಗಿದ್ದು ಇದು ಸಿಖ್ಖರ ಪವಿತ್ರ ಗ್ರಂಥವಾಗಿದೆ. ಇದನ್ನು ಸಿಖ್ಖರ ಆದಿ ಗ್ರಂಥ ಎಂದೂ ಕರೆಯುತ್ತಾರೆ. ಇದನ್ನು ಗುರುದ್ವಾರದಲ್ಲಿಟ್ಟು ಪೂಜಿಸುತ್ತಾರೆ.

ಮೀರಾಬಾಯಿ

ಭಕ್ತಿಪಂಥಕ್ಕೆ ಹೆಸರಾದ ಮೀರಾಬಾಯಿ ಮೇವಾಡದ ರಜಪೂತ ರಾಜಕುಮಾರಿ. ಮೇವಾರದ ರಾಜಕುಮಾರನನ್ನು ವರಿಸಿದ್ದಳು. ಅನಂತರದಲ್ಲಿ ಲೌಕಿಕ ಬದುಕಿನಿಂದ ದೂರ ಸರಿದಳು. ಅಂದು ಅಸ್ಪೃಶ್ಯ ಕುಲವೆಂದು ಪರಿಗಣಿಸಿದ ಸಮುದಾಯದಲ್ಲಿ ಹುಟ್ಟಿ ಭಕ್ತಿಸಂತನಾದ ರವಿದಾಸ ಎಂಬುವರ ಶಿಷ್ಯೆಯಾದಳು. ಮೀರಾಬಾಯಿ ತನ್ನ ಬದುಕನ್ನೆಲ್ಲಾ ಶ್ರೀಕೃಷ್ಣನ ಆರಾಧನೆಗೆ ಮೀಸಲಿಟ್ಟು ಕೃಷ್ಣನನ್ನು ಕುರಿತು ಭಕ್ತಿಪೂರಿತವಾದ ಕೀರ್ತನೆಗಳಲ್ಲಿ ವಿಡಂಭಿಸಿದಳು. ಈ ಕೀರ್ತನೆಗಳು “ಭಜನೆಗಳು” ಎಂದು ಜನಪ್ರಿಯವಾದವು. ಇಡೀ ಭಾರತದಲ್ಲಿ ಈಗಲೂ ಈ ಭಜನೆಗಳನ್ನು ಹಾಡಲಾಗುತ್ತಿದೆ ಹಾಗೂ ಹೆಚ್ಚು ಖ್ಯಾತಿ ಗಳಿಸಿರುವುದು ರಾಜಸ್ತಾನ ಮತ್ತು ಗುಜರಾತ್‌ ರಾಜ್ಯಗಳಲ್ಲಿ. ಹೀಗೆ ಭಾರತದ ಹಲವಾರು ಭಾಗಗಳಲ್ಲಿ ಧರ್ಮ ಮತ್ತು ಜಾತಿಗಳ ನಡುವಣ ಅಂತರವನ್ನು ತೊಡೆಯಲು ಅನೇಕ ಸುಧಾರಕರು ಪ್ರಯತ್ನಸಿದರು.

ಮಹಾರಾಷ್ಟ್ರದ ಭೀಮಾ ನದಿಯ ದಡದಲ್ಲಿ ಪಂಡರಾಪುರದ ವಿಠೋಬನ ದೇವಾಲಯವು ಭಕ್ತಿಪಂಥದ ಕೇಂದ್ರವಾಗಿತ್ತು. ಜ್ಞಾನೇಶ್ವರ ಮತ್ತು ನಾಮದೇವ, ಏಕನಾಥ, ತುಕಾರಮ್‌ ಮತ್ತು ರಾಮದಾಸರು ಹೊಸ ಪಂಥದ ಸಂತರಲ್ಲಿ ಪ್ರಖ್ಯಾತರಾಗಿದ್ದರು. ಪುರಂದರದಾಸರು ಮತ್ತು ಕನಕದಾಸರು ಕರ್ನಾಟಕದ ಭಕ್ತಿ ಚಳವಳಿಯ ಪ್ರಮುಖರಾಗಿದ್ದರು. ಇವರದು ದಾಸ ಪರಂಪರೆ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ಸೂಫಿ ಸಂತರು

ಸೂಫಿ ಸಂತರು ಪರ್ಷಿಯಾದಿಂದ ಬಂದು ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿದರು. ಅವರನ್ನು ಪೀರ (ಗುರು) ಎಂದು ಕರೆಯುತ್ತಾರೆ. “ಸೂಫ್”‌ ಎಂಬ ಸಾದಾ ಉಣ್ಣೆಯ ಅಂಗಿ ತೊಡುತ್ತಿದ್ದುದರಿಂದ ಮುಸ್ಲಿಂ ಸಂತರುಗಳನ್ನು “ಸೂಫೀ” ಎಂದು ಕರೆದರು. ಪ್ರೇಮ ಮತ್ತು ಭಕ್ತಿಯಿಂದ ಪರಮಾತ್ಮನನ್ನು ಅಥವಾ ಅಲ್ಲಾನನ್ನು ಸೇರಲು ಸಾಧ್ಯವೆಂದು ಬೋಧಿಸಿದರು. ಎಲ್ಲಾ ವರ್ಗದ ಜನರನ್ನು ಗೌರವಿಸಿ ಬಾಳುವುದರ ಮಹತ್ವವನ್ನು ಒತ್ತಿ ಹೇಳಿದರು. ಭಕ್ತಿಯಿಂದ ಕೂಡಿದ ನರ್ತನ ಮತ್ತು ಸಂಗೀತವು ನಮ್ಮನ್ನು ದೇವರ ಕಡೆ ಕೊಂಡೊಯ್ಯುತ್ತವೆ ಎಂದು ಸೂಫಿಗಳು ನಂಬಿದ್ದರು. ಅವರು ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಭಕ್ತಿಯ ಮಹತ್ವವನ್ನು ಸಾರಲು ಅನೇಕ ಕೃತಿಗಳನ್ನು ರಚಿಸಿದರು. ಕುತುಬನ್‌ ಎಂಬಾತನ “ಮೃಗಾವತಿ” ಹಾಗೂ ಮಲ್ಲಿಕ್‌ ಮಹಮ್ಮದ್‌ ಜಯ್ಸಿಯ “ಪದ್ಮಾವತ್‌” ಎಂಬ ಕಾವ್ಯಗಳು ಸೂಫಿ ಕವಿ ಪರಂಪರೆ ಉತ್ತಮ ಉದಾಹರಣೆಗಳಾಗಿವೆ. ಸೂಫಿ ಪರಂಪರೆಗೂ ಅಖಿಲ ಭಾರತ ವ್ಯಾಪ್ತಿ ಇದೆ. ಸೂಫಿ ಪಂಥದಲ್ಲಿ ಸುಮಾರು ೧೨ ವಿವಿಧ ಪಂಗಡಗಳಿದ್ದು, ಅವುಗಳಲ್ಲಿ ನಾಲ್ಕು ಅತ್ಯಂತ ಪ್ರಮುಖವಾದವುಗಳಾಗಿವೆ. ಉತ್ತರ ಕರ್ನಾಟಕದ ಬೀದರ್‌, ಕಲಬುರಗಿ, ವಿಜಯಪುರ ಮುಂತಾದವು ಈ ಪರಂಪರೆಯ ಪ್ರಮುಖ ಕೇಂದ್ರಗಳು. ಉರುಸ್‌ ಆಚರಣೆಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಇಂದಿಗೂ ಈ ಆಚರಣೆ ಜಿವಂತವಾಗಿವೆ.

ಶಿಶುನಾಳ ಶರೀಫ ( ಸುಮಾರು ೧೮೧೯-೧೮೮೯)

ಇಮಾಮ್-ಹಜೂಮಾ-ಇವರ ತಂದೆ-ತಾಯಿಗಳು ಇಂದಿನ ಗದಗ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳದಲ್ಲಿ ಶರೀಫ್ ರು ೧೮೧೯ರಲ್ಲಿ ಜನ್ಮ ತಳೆದರು ಖಾಜಿ಼ಯ ಸಲಹೆಯ ಮೇರೆಗೆ ತಂದೆ ಇಮಾಮ್‌ ಸಾಹೇಬ ಮಗುವಿಗೆ ʼಮಹಮ್ಮದ್‌ ಶರೀಫ್‌ʼ ಎಂದು ನಾಮಕರಣ ಮಾಡಿದರು.

ʼಶರೀಫʼ ಪಾರ್ಸಿ ಶಬ್ಧ. ಉದಾತ್ತ ಧ್ಯೇಯಗಳ ಅಥವಾ ಉತ್ತಮ ಶೀಲ ಸ್ವಾಭಾವ ಹೊಂದಿ ಇತರರಿಂದ ಗೌರವಿಸಲ್ಪಡುವ ವ್ಯಕ್ತಿ ಎಂದರ್ಥ ಹೆಸರಿಗೆ ತಕ್ಕಂತೆಯೇ ಶರೀಫ ರೂಪುಗೊಂಡರು.

ಶಿಶುನಾಳ ಶರೀಫರು ಚಿಕ್ಕಂದಿನಿಂದಲೇ ಇಸ್ಲಾಂ, ವೀರಶೈವ ಹಾಗೂ ವೈದಿಕ ತತ್ವ ಸಿದ್ದಾಂತಗಳಿಂದ ಪ್ರಭಾವಿತರಾಗಿದ್ದರು. ತ್ರಿಕಾಲ ಜ್ಞಾನಿಯಾಗಿದ್ದ ಗೋವಿಂದಭಟ್ಟರು ಇವರ ಗುರುಗಳು. ಶಿಶುನಾಳದ ಮಕ್ಕಳಿಗಾಗಿ ಶರೀಫ ಸ್ಥಳೀಯ ಚಂದ್ರೇಶ್ವರ ದೇವಾಲಯದಲ್ಲಿ ಶಾಲೆ ತೆರೆಯುವ ಮೂಲಕ ಅವರಲ್ಲಿ ಧಾರ್ಮಿಕ ವಿಶಾಲ ಮನೋಭಾವ ಬೆಳೆಯಲು ಕಾರಣರಾದರು.

ಸಂಘ ಜೀವಿಯಾಗಿದ್ದು, ಶರೀಫರು ಶಿಶುನಾಳ ಪ್ರದೇಶದಲ್ಲಿ ನೆಡೆಯುತ್ತಿದ್ದ ಜಾತ್ರೆ, ಉತ್ಸವ, ಬಯಲಾಟ, ಮೊಹರಂ ಉತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನತೆಗೆ ಸ್ಫೂರ್ತಿಯ ಸೆಲೆಯಾಗುತ್ತಿದ್ದರು. ಮೊಹರಂ ಹಿನ್ನೆಲೆಯ ಚಾರಿತ್ರಿಕ ಸಂಗತಿಗಳನ್ನು ಅನುಸರಿಸಿ ರಿವಾಯತ್‌ ನಡೆಸುವ ಮೂಲಕ ರಿವಾಯತ್‌ ಸಾಹಿತ್ಯದ ಹರಿಕಾರರಾದರು.

ಪುರಂದರದಾಸರು (ಸುಮಾರು ೧೪೮೪-೧೫೬೪)

ದಾಸವೆಂದರೆ ಪುರಂದರದಾಸರಯ್ಯ-ಎಂದು ಗುರುಗಳಾದ ವ್ಯಾಸರಾಯರಿಂದ ಪ್ರಶಂಸೆಗೆ ಪಾತ್ರವಾಗಿರುವ ಪುರಂದರದಾಸರು ವೈಷ್ಣವ ಭಕ್ತಿ ಪಾರಮ್ಯದ ಹರಿ ಸಂಕೀರ್ತನಗಳ ಮುಖಾಂತರ ಕನ್ನಡ ಸಾಹಿತ್ಯ, ಕರ್ನಾಟಕ ಸಂಗೀತಕ್ಕೆ ಮೌಖಿಕ ಕೊಡುಗೆ ನೀಡಿ, ʼಕರ್ನಾಟಕ ಸಂಗೀತ ಪಿತಾಮಹʼ ಎಂದೇ ಹೆಸರಾಗಿದ್ದಾರೆ.

ಪುರಂದರರು ಇಂದು ಮಹಾರಾಷ್ಟ್ರದಲ್ಲಿರುವ ಪುರಂದರಘಡ ಆಗರ್ಭ ಶ್ರೀಮಂತ ವರ್ತಕ ಕುಟುಂಬದಲ್ಲಿ ಜನಿಸಿದರು. ವರದಪ್ಪನಾಯಕ ಮತ್ತು ಲಕ್ಷ್ಮಿದೇವಿ ಇವರ ತಂದೆ ತಾಯಿಗಳು. ಇವರ ಪೂರ್ವಾಶ್ರಮದ ಹೆಸರು ಸೀನಪ್ಪನಾಯಕ, ಚಿನ್ನದ ವ್ಯಾಪಾರ ಮಾಡುತ್ತಿದ್ದ ಸೀನಪ್ಪನಾಯಕ ಕಟ್ಟು ನಿಟ್ಟಿನ ವ್ಯವಹಾರಸ್ಥರಾಗಿದ್ದರು ಮುಂದೆ ತಮ್ಮ ಸತಿ ಸರಸ್ವತಿಭಾಯಿಯ ಒತ್ತಾಸೆಯಿಂದ ಮಾನಪರಿವರ್ತನೆಗೊಂಡು ಪುರಂದರದಾಸರಾಗಿ ಆಧ್ಯಾತ್ಮದತ್ತ ಸಾಗಿದರು.

ಮಾಧ್ವಮತದ ಪ್ರಚಾರವನ್ನು ತಮ್ಮ ಕೀರ್ತನೆಗಳ ಮೂಲಕ ಕೈಗೊಂಡ ಪುರಂದರದಾಸರು ಅನೇಕ ಪವಿತ್ರ ಕೀರ್ತನೆಗಳ ಮೂಲಕ ಕೈಗೊಂಡ ಪುರಂದರದಾಸರು ಅನೇಕ ಪವಿತ್ರ ಕ್ಷೇತ್ರಗಳನ್ನು ಸುತ್ತಿದರು. ತಿರುಪತಿ, ಶ್ರೀರಂಗಪಟ್ಟಣ, ಅರುಣಗಿರಿ, ಉಡುಪಿ, ಕಂಚಿ, ಕನಕಾಚಲ, ಕಾಶಿ, ಕುಂಭಕೋಣ, ಕೂಡಲೀಪುರ, ಹಸ್ತಿಗಿರಿ, ಕಾಳಹಸ್ತಿ, ಶ್ರೀಶೈಲ, ಘಟಿಕಾಚಲ, ಗದಗ, ಪಂಢರಪುರ, ಬೇಲೂರು, ಮನ್ನೂರು, ಮಳೂರು, ಮೇಲುಕೋಟೆ, ಹಂಪಿ, ಹರಿಹರ, ಮುಂತಾದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪುರಂದರದಾಸರು ಜನಸಾಮಾನ್ಯರಿಗೆ ಭಕ್ತಿ ಮಾರ್ಗವನ್ನು ಬೋಧಿಸಿದರು.

ಕನಕದಾಸರು

ಬೀರಪ್ಪ ಮತ್ತು ಬಚ್ಚಮ್ಮ ಕನಕರ ತಂದೆ ತಾಯಿಗಳು ಶ್ರೀ ವೈಷ್ಣವ ಮತಾನುಯಾಯಿಗಳಾಗಿದ್ದರು ತನಗೆ ಜನಿಸಿದ ಓರ್ವನೇ ಪುತ್ರನಿಗೆ ತನ್ನ ಕುಲದೈವ ವೆಂಕಟಪತಿಯ ಹೆಸರಿಡಬೇಕೆಂದು ತಮ್ಮಪ್ಪನೆಂಬುದಾಗಿ ನಾಮಕರಣ ಮಾಡಿದರು.

ಒಮ್ಮೆ ತಿಮ್ಮಪ್ಪನಿಗೆ, ಭೂಗತವಾಗಿದ್ದ ಅಪಾರ ಧನರಾಶಿಯು ಕರಗತವಾದುದ್ದನ್ನು ನೋಡಿ ಅದೃಷ್ಟವಂತ ನೆಂದು ಅವನನ್ನು ಜನರು ಕನಕನೆಂದೇ ಕರೆದರು! ಕನಕರು ತಮಗೆ ದೊರೆತ ದ್ರವ್ಯವನ್ನು ದುರ್ವಿನಿಯೋಗ ಮಾಡದೆ ಕಾಗಿನೆಲೆಯಲ್ಲಿ ಪ್ರಸಿದ್ಧ ಆದಿಕೇಶವ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗಿದೆ.

ಬಾಡ ಮತ್ತು ಬಂಕಾಪುರದ ಸ್ಥಳೀಯ ನಾಯಕನಾಗಿದ್ದ ಕನಕರು ಚಿಕ್ಕಂದಿನಿಂದಲೂ ಯುದ್ಧ ಪ್ರವೀಣನಾಗಿದ್ದರು. ಒಮ್ಮೆ ಯುದ್ಧ ರಂಗದಲ್ಲಿ ತೀವ್ರವಾಗಿ ಗಾಯಗೊಂಡ ಕನಕರು ಅಧಿಕಾರದ ಹಾಗೂ ಒಟ್ಟಾರೆ ಬದುಕಿನ ಅನಿಶ್ಚತತೆಯ ಬಗೆಗೆ ಜಿಗುಪ್ಸೆಯನ್ನು ತಳೆದು, ಲೌಕಿಕ ಸುಖವನ್ನು ತ್ಯಜಿಸಿ ದಾಸಮಾರ್ಗವನ್ನು ಅನುಸರಿಸಿ ಕನಕದಾಸರಾದರೆಂದು ಪ್ರತೀತಯೊಂದು ಹೇಳುತ್ತದೆ.

ಒಬ್ಬ ಭಕ್ತಿ ಸಂತರಾಗಿ ಕನಕದಾಸರು ಅಂದಿನ ಸಮಾಜದಲ್ಲಿದ್ದ ಮೇಲು-ಕೀಳು,ಉಚ್ಚ-ನೀಚ ಪರಿಭಾವನೆಯನ್ನು ಹೋಗಲಾಡಿಸಲು ಹೋರಾಡಿದ್ದಾರೆ. ಡಾಂಭಿಕ ಭಕ್ತಿಯನ್ನು ತೆಗಳಿದ್ದಾರೆ. ನೈಜ ಭಕ್ತಿಮಾರ್ಗದಿಂದ ಜನರು ದೈವಸಾನಿದ್ಯವನ್ನು ಪಡೆಯಬಹುದೆಂದು ಬೋಧಿಸಿದ್ದಾರೆ. ಭಕ್ತಿ ಮಾರ್ಗದ ಸರಳತೆಯನ್ನು ತೋರಿಸಿದ್ದಾರೆ. ಮುಖ್ಯವಾಗಿ ದೈವಸಾಕ್ಷಾತ್ಕಾರಕ್ಕೆ ಉತ್ತಮ ಜಾತಿಯಲ್ಲೇ ಹುಟ್ಟಿರಬೇಕೆನ್ನುವ ಅರ್ಹತೆಯನ್ನು ಪ್ರತಿಪಾದಿಸುತ್ತಿದ್ದ ಪುರೋಹಿತ ವರ್ಗಗಳನ್ನು ತಮ್ಮ ಕೀರ್ತನೆಗಳ ಮೂಲಕ ಒಡೆದುಹಾಕಿದ್ದಾರೆ.

ಕನಕದಾಸರು ಒಬ್ಬ ಭಕ್ತಿ ಕವಿಯೂ ಆಗಿದ್ದು ಅಸಂಖ್ಯ ಸಂಕೀರ್ತನೆಗಳ ಜೊತೆಗೆ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ಅವುಗಳು-ಮೋಹನತರಂಗೀಣಿ, ʼನಳಚರಿತ್ರೆʼ, ರಾಮಧ್ಯಾನ್ಯ ಚರಿತೆʼ ಮತ್ತು ʼಹರಿಭಕ್ತಿಸಾರʼ ಮುಖ್ಯವಾದವುಗಳಾಗಿವೆ.

ಭಕ್ತಿಚಳವಳಿಯ ಪರಿಣಾಮಗಳು

ಹಿಂದೂಗಳು ಮತ್ತು ಮುಸ್ಲಿಂ ಸಮುದಾಯಗಳಲ್ಲಿದ್ದ ಮೌಡ್ಯಾಚರಣೆಗಳ ಅರ್ಥಹೀನತೆಯನ್ನು ಸಾರುವುದು ಹಿಂದೂ ಮತ್ತು ಮುಸಲ್ಮಾನರಲ್ಲಿ ಮಧುರ ಭಾಂಧವ್ಯವನ್ನು ಉಂಟು ಮಾಡುವುದು ಭಕ್ತಿ ಪಂಥದ ಎರಡು ಮುಖ್ಯ ಉದ್ದೇಶಗಳಾಗಿದ್ದವು. ಹಿಂದೂ ಸಮಾಜದಲ್ಲಿನ ಅನೇಕ ನ್ಯೂನತೆಗಳನ್ನು ಸುಧಾರಕರು ನಿವಾರಿಸಿದರು. ಭಾರತದ ಪ್ರಾದೇಶಿಕ ಭಾಷೆಗಳು ವಿಕಾಸಗೊಂಡವು. ಅವರು ದೇಶಿ ಬಾಷೆಗಳಲ್ಲಿ ಬರೆದು ಅವುಗಳ ಬೆಳವಣಿಗೆಗೆ ಸಹಾಯ ಮಾಡಿದರು. ಈ ಚಳವಳಿಯು ಭಾರತೀಯ ಸಂಸ್ಕೃತಿಯ ವಿಕಾಶಕ್ಕೆ ಕಾರಣವಾಗಿ ಬಹುಸಂಸ್ಕೃತಿಗಳ ಸಂಗಮ ಎಂಬ ಹೆಗ್ಗಳಿಕೆಯನ್ನು ಭಾರತಕ್ಕೆ ತಂದುಕೊಟ್ಟಿದೆ.

FAQ

ಮೊಟ್ಟ ಮೊದಲಿಗೆ ಸೂರ್ಯ ಯಾವ ದೇಶದಲ್ಲಿ ಉದಯಿಸುತ್ತಾನೆ?

ನ್ಯೂಜಿಲೆಂಡ್.

ನದಿ ಇಲ್ಲದ ದೇಶ ಯಾವುದು ?

ಸೌದಿ ಅರೇಬಿಯ.

ಇತರೆ ವಿಷಯಗಳು :

ಪುರಂದರದಾಸರು ಜೀವನ ಚರಿತ್ರೆ

ಕನಕದಾಸರ ಜೀವನ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here